ಮಡಿವಾಳ ಮಾಚಿದೇವ ಜಯಂತಿ

ಚಿಟಗುಪ್ಪ,ಫೆ.1-ಮಡಿವಾಳ ಮಾಚಿದೇವ ಜಯಂತಿಂiÀiನ್ನು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ರೋಗಿಗಳಿಗೆ ಹಣ್ಣು ಹಂಪಲು ಹಂಚುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಡಿವಾಳ ಮಾಚಿದೇವ ಸಂಘದ ಅಧ್ಯಕ್ಷ ಬಸವರಾಜ್ ಮಡಿವಾಳ್ ಅವರ ನೇತೃತ್ವದಲ್ಲಿ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣು ಹಂಚಲಾಯಿತು. ಸಮಾಜದ ಸದಸ್ಯರಾದ ನಾಗರಾಜ್ ಮಡಿವಾಳ, ರಾಜು ಮಡಿವಾಳ್, ದೇವಿದಾಸ್, ಮಾರುತಿ, ದತ್ತಾತ್ರಿ, ಸತೀಶ್, ಆಡಳಿತ ವೈದ್ಯಾಧಿಕಾರಿ ಡಾ.ವಿಜಯ ಹಿರಸ್ಕಾರ, ಸಿಬ್ಬಂದಿಗಳಾದ ದೇವೇಂದ್ರ ಪ್ರಭು ಮುದ್ನಾಳಕರ್, ನಂದು ಕುಮಾರ್, ಶಿವರಾಜ್ ಮಾರುತಿ ಮಡಿವಾಳ ಹಾಗೂ ಇತರರು ಉಪಸ್ಥಿತರಿದ್ದರು.