ಮಡಿವಾಳ ಮಾಚಿದೇವರ ಅದ್ದೂರಿ ಜಯಂತೋತ್ಸವ ಆಚರಣೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಫೆ.12: ತೆಕ್ಕಲಕೋಟೆಯಲ್ಲಿ ಮಡಿವಾಳ ಸಮುದಾಯ, ಮಾಚಿದೇವರ ಅನುಯಾಯಿಗಳು ಪಟ್ಟಣದ  ಜನಪ್ರತಿನಿಧಿಗಳೊಂದಿಗೆ ಮಡಿವಾಳ ಮಾಚಿದೇವರ ಜಯಂತಿ ಆಚರಣೆ ಮಾಡಲಾಯಿತು.
ತಾಲೂಕಿನ ತೆಕ್ಕಲಕೋಟೆಯಲ್ಲಿ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಪಟ್ಟಣದ ದ್ಯಾವಮ್ಮ ದೇವಸ್ಥಾನದಿಂದ ಮಾಚಿದೇವರ ಭಾವಚಿತ್ರದೊಂದಿಗೆ ರಾಜಬೀದಿಗಳಲ್ಲಿ ಮಹಿಳೆಯರು ಕುಂಭ ಕಳಸವನ್ನು ಹೊತ್ತು ಮೆರವಣಿಗೆ ಮಾಡಿದರು.
12ನೇ ಶತಮಾನದ ಬಸವಣ್ಣನವರ ಸಮಕಾಲೀನ ಶರಣರಲ್ಲಿ ಮಡಿವಾಳ ಮಾಚಿದೇವರು ಒಬ್ಬರಾಗಿದ್ದಾರೆ, ಮಡಿವಾಳ ಸಮುದಾಯದ ಮಹಾನ್‌ ಚೇತನ ಮಾಚಿದೇವರ ಮಾರ್ಗದರ್ಶನ ಸಮಾಜದ ಪ್ರತಿಯೊಂದು ವರ್ಗಕ್ಕೆ ಅವಶ್ಯಕವಾಗಿದೆ. ಮಾಚಿದೇವರು ಅನುಭವ ಮಂಟಪದಲ್ಲಿ ತಮ್ಮ ಅಮೂಲ್ಯ ಸಾಹಿತ್ಯವನ್ನು ಸಮಾಜದ ಏಳ್ಗೆಗೆ ಶ್ರಮಿಸಿದವರು. ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ಜೀವನವನ್ನು ಮುಡಿಪ್ಪಿಟ್ಟಿದ್ದರು.
ಮಡಿವಾಳ ಮಾಚಿದೇವರು ಬದುಕಿನ ಸಾತ್ವಿಕತೆ ನೀಡಿ ಸತ್ಯ, ಶುದ್ಧ ಕಾಯಕ ಕೊಟ್ಟವರಾಗಿದ್ದಾರೆ, ಸಮಾಜದಲ್ಲಿ ಜಾತಿ ಮುಖ್ಯವಲ್ಲ ಜೀವನ ಮುಖ್ಯ ಎಂದು ತೋರಿಸಿಕೊಟ್ಟಿದ್ದಾರೆ. ಮಾಚಿದೇವರು ಹಲವಾರು ವಚನಗಳನ್ನು ಬರೆದು ಸಮಾಜಕ್ಕೆ ಮಾದರಿಯಾಗಿದ್ದಾರೆ ಮತ್ತು ಮಡಿವಾಳ ತನ್ನ ಕಾಯಕದಲ್ಲಿ ಬಟ್ಟೆ ತೊಳೆಯುವುದರ ಜೊತೆಗೆ ಕೈ ಮತ್ತು ಕಲ್ಲನ್ನು ಸ್ವತ್ಛಗೊಳಿಸುವ ಕಾರ್ಯ ಮಾಡಿದ್ದಾರೆ ಅದ್ದರಿಂದ ಇಂತಹ ಶರಣರು ಮಹಾಪುರುಷರು ಹಾಕಿಕೊಟ್ಟ ಮಾರ್ಗದರ್ಶನ ಹಾಗೂ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತೆಕ್ಕಲಕೋಟೆ ಮಡಿವಾಳ ಯುವಕರ ಸಂಘದ ಅಧ್ಯಕ್ಷ ಶರಣು ತಿಳಿಸಿದರು.
ಮುಖಂಡರಾದ ಮಲ್ಲೇಶ, ವೀರೇಶ, ಯಲ್ಲಪ್ಪ, ಶೇಕಣ್ಣ, ಮುಕಣ್ಣ, ಪಾಲಕ್ಷಪ್ಪ, ತಿಮ್ಮಪ್ಪ ಲಸ್ಕರ್ ,ಮುದುಕಣ್ಣ , ಕಟಂಬ್ಲಿ ಬಸವ ಹಾಗೂ ಸಮುದಾಯದ ಬಂಧುಗಳು ಭಾಗಿಯಾಗಿದ್ದರು.