ಮಡಿವಾಳ ಜನಾಂಗ ಪರಿಶಿಷ್ಠ ಜಾತಿಗೆ ಸೇರಿಸಲು ಮನವಿದಾವಣಗೆರೆ.ಡಿ.೧; :ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು  ಮಾಡುವಂತೆ ಆಗ್ರಹಿಸಿ ದಾವಣಗೆರೆ ಜಿಲ್ಲಾ ಮಡಿವಾಳ ಮಾಚಿದೇವ ಸಂಘದ ಪದಾಧಿಕಾರಿಗಳು ದಾವಣಗೆರೆಯಲ್ಲಿ  ದಾವಣಗೆರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದರು.ಕರ್ನಾಟಕ ರಾಜ್ಯದಲ್ಲಿ ಮಡಿವಾಳ ಜನಾಂಗವನ್ನು ಪರಿಶಿಷ್ಠ ಜಾತಿಗೆ ಸೇರ್ಪಡೆ ಮಾಡಲು ಕುಲ ಶಾಸ್ತ್ರೀಯ ಅಧ್ಯಯನ  ನಡೆಸಿ ವರದಿ ಸಲ್ಲಿಸಲು ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರೋ ಡಾ. ಅನ್ನಪೂರ್ಣಮ್ಮ ಅವರನ್ನು ನೇಮಕ ಮಾಡಲಾಗಿತ್ತು . ಪ್ರೊ ಡಾ ಅನ್ನಪೂರ್ಣಮ್ಮ ಅವರು ತಮ್ಮ ವರದಿಯನ್ನು 2010 ರಲ್ಲಿಯೇ ಸರ್ಕಾರಕ್ಕೆ ಸಲ್ಲಿಸಿದ್ದಾರೆ . ಅದರಲ್ಲಿ ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಬೇಕು ಎಂದು ಶಿಫಾರಸ್ಸು ಮಾಡಿದ್ದರೂ ಈವರೆಗೆ ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಿಲ್ಲ ಎಂದರು.ಮಡಿವಾಳ ಜಾತಿಯು 18 ರಾಜ್ಯಗಳಲ್ಲಿ ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರಿಶಿಷ್ಟ ಜಾತಿಯಲ್ಲಿದ್ದಾರೆ  ನಮ್ಮ ಬೇಡಿಕೆ ಸಾಮಾಜಿಕ ನ್ಯಾಯಪರವಾದದ್ದಾಗಿದೆ . ಒಂದು ಪ್ರದೇಶದಲ್ಲಿ ಪರಿಶಿಷ್ಟ ಜಾತಿಯಲ್ಲಿರುವವರು ಎಲ್ಲ ಪ್ರದೇಶದಲ್ಲಿ ಅದೇ ರೀತಿ ಇರಬೇಕಾದುದು ನ್ಯಾಯಯುತವಾದದ್ದು. ಅಲ್ಲದೇಅಂಬೇಡ್ಕರ್ ಬರಹಗಳು : ಹಿಂದುಗಳಲ್ಲಿ ಅಸ್ಪೃಶ್ಯತೆ ಪುಟ -36ದಲ್ಲಿ ದೋಭಿ ಜಾತಿ ಅಸ್ಪಶ್ಯವಾದದ್ದು, ಅಲ್ಲದೇ ಬ್ರಿಟಿಷ್ ವಿದ್ವಾಂಸರಾದ ಬಂಟ್‌ರವರ ವಿವರಣೆ ನೀಡಿದ್ದರೂ ಸಹ ಎಸ್ಸಿ ಪಟ್ಟಿಯಲ್ಲಿ ಸೇರಿಸಿಲ್ಲ ಎಂದು ಮನವರಿಕೆ ಮಾಡಿದರು.ದೇಶಾದ್ಯಂತ ಬಟ್ಟೆ ತೊಳೆಯುವ ಮಡಿವಾಳರು ಎಲ್ಲರೂ ಒಂದೇ ತೆರನಾಗಿದ್ದಾರೆ . ದೇಶದ ವಿವಿಧ ಭಾಷೆಗಳಲ್ಲಿ ಜಾತಿ ಹೆಸರು ಭಿನ್ನವಾಗಿದೆ. ದೇಶದಲ್ಲಿ ರಾಜ್ಯವಾರು ಭಾಷೆಗಳ ಅನುಸಾರ ದೋಭಿ , ರಜಕ , ಆಗಸ , ಮಡಿವಾಳ , ಪರೀಟ , ಚಾಕಲ , ಮಣ್ಣನ್ , ಸಾಕಲ , ವಾನ್ , ವೆಲ್ಲುಪೇಡನ್ , ಸಾಕಲವಾಡು ಇತ್ಯಾದಿಯಾಗಿ ಕರೆಯುತ್ತಾರೆ. ಅಗಸ ಹಾಗೂ ದೋಭಿ ಅಸ್ಪೃಶ್ಯರು ಎಂದು ವಿದ್ವಾಂಸ ಅಪಾರಕನ ಸಮವರ್ತನೆ ಸ್ಥಿತಿಯಲ್ಲಿ ವಿವರಿಸಲಾಗಿದೆ.  ಪರಕೆಯಿಂದ ಮಲ ಮೂತ್ರಗಳನ್ನು ತೊಳೆಯುವವರು ಪರಿಶಿಷ್ಟ ಜಾತಿಯಲ್ಲಿದ್ದಾರೆ . ಅದೇ ಮಲ ಮೂತ್ರಗಳಿಂದ ಕೂಡಿದ ಬಟ್ಟೆಗಳನ್ನು ಕೈಯಿಂದ ತೊಳೆಯುವ ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರಿಸುವುದು ನ್ಯಾಯೋಚಿತವಾಗಿದೆ ಎಂದು ಹೇಳಿದರುಹೆರಿಗೆ – ಮುಟ್ಟು – ಸಾವು – ರೋಗ ರುಜನು ಕೀವು ರಕ್ತಸಿಕ್ತ ಮೈಲಿಗೆ ಬಟ್ಟೆಗಳನ್ನು ಕೈಯಿಂದ ತೊಳೆಯುತ್ತಾರೆ . ಗ್ರಾಮಾಂತರ ಪ್ರದೇಶದಲ್ಲಿ ಸಹ ಪಂಕ್ತಿ ಭೋಜನ , ಮನೆಗಳಲ್ಲಿ , ದೇವಸ್ಥಾನಗಳಲ್ಲಿ , ಭಾವಿ , ಕೆರೆಗಳಲ್ಲಿ , ಸಾಮಾಜಿಕ ಕಾರ್ಯಕ್ರಮಗಳಲ್ಲಿ , ಧಾರ್ಮಿಕ ಉತ್ಸವಾದಿಗಳಲ್ಲಿ, ಮಂಗಲ ಕಾರ್ಯಗಳಲ್ಲಿ ಅಸ್ಪಶ್ಯತೆ ಇದೆ .ಬಟ್ಟೆ ತೊಳೆಯುವ ವೃತ್ತಿಯಲ್ಲಿ ಜೀವನಕ್ಕೆ ಸಾಕಾಗುವಷ್ಟು ಆದಾಯವಿಲ್ಲದೇ ಶೇ . 98 ರಷ್ಟು ಜನ ಬದಾನ ರೇಖೆ ಕಳಗಿದ್ದಾರೆ. ಮೇಲ್ತಾತಿಯವರಿಗಿರುವಂತೆ ಸಾಮಾಜಿಕ ಗೌರವ ಬೆಂಬಲಗಳಿಲ್ಲದೇ , ಪ.ಜಾ. ಪಂಗಡದವರಿಗಿರುವ ಶಾಸನ – ಕಾನೂನು ಬದ್ಧ ಅವಕಾಶ ಸೌಲಭ್ಯಗಳಿಲ್ಲದೇ ಉಭಯ ಸಂಕಟದ ಅಸಹಾಯಕ ಸ್ಥಿತಿಯಲ್ಲಿ ಮಡಿವಾಳ ಜನಾಂಗವಿದೆ.ಊರ ಹೊರಗಿದ್ದು ಅನುಭವಿಸುವ ಮಾನಸಿಕ ಕೀಳುದುಗಿಂತಲೂ : ಊರ ಒಳದು ಆಸ್ಪಶ್ಯತೆಯನ್ನು ಅನುಭವಿಸುವ ಮಾರಕ   . ಯಾತನೆಯು ತೀವ್ರ ಹಾಗೂ ಅಪಮಾನದಿಂದ ಕೂಡಿದ್ದು , ಮಡಿವಾಳರು ಇದನ್ನು ಅನುಭವಿಸುತ್ತಿದ್ದಾರೆ . ಆದ್ದರಿಂದ ಮಡಿವಾಳರಿಗೆ ಸಾಮಾಜಿಕ ನ್ಯಾಯ ಒದಗಿಸಲು ಮತ್ತು ಮಡಿವಾಳರ ಏಳಗಾಗಿ ಮಡಿವಾಳ ಜನಾಂಗವನ್ನ ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಸೂಚಿಸಬೇಕು ಎಂದು ಮನವಿ ಮಾಡಿದರು.ಈ ವೇಳೆ ಜಿಲ್ಲಾಧ್ಯಕ್ಷ ಎಂ.ನಾಗೇಂದ್ರಪ್ಪ, ಕಾರ್ಯಾಧ್ಯಕ್ಷ‌ ಹೆಚ್.ಜಿ.ಉಮೇಶ್, ಎಂ.ಆರ್.ಧನಂಜಯ, ಸುರೇಶ್ ಕೋಗುಂಡೆ, ಎಂ.ರಾಜು, ಪತ್ರಕರ್ತರಾದ ಎಂ.ವೈ. ಸತೀಶ್, ಬಿ.ಅಣ್ಣಪ್ಪ, ನಿಂಗಪ್ಪ, ಕಿಶೋರ್, ಡೈಮಂಡ್ ಮಂಜುನಾಥ್  ಇದ್ದರು.Attachments areaReplyReply to allForward