ಮಡಿವಾಳೇಶ್ವರ ಮಂದಿರದಲ್ಲಿ ಪಲ್ಲಕ್ಕಿ ಉತ್ಸವ

ಬೀದರ್:ಸೆ.21: ನಗರದ ಪನ್ಸಾಲ ತಾಲೀಮ ಬಡಾವಣೆÉಯಲ್ಲಿರುವ ಶ್ರೀ ಮಹಾಸಿದ್ಧ ಮಡಿವಾಳೇಶ್ವರ ಮಂದಿರದಲ್ಲಿ ಶ್ರಾವಣ ಸತ್ಸಂಗ, ಭಜನೆ, ಸಾಂಸ್ಕøತಿಕ ಕಾರ್ಯಕ್ರಮಗಳ ಮುಕ್ತಾಯ ಸಮಾರಂಭ ನಿಮಿತ್ತವಾಗಿ ಪಲ್ಲಕಿ ಉತ್ಸವ ನಡೆಯಿತು.
ಪಲ್ಲಕಿ ಮೆರವಣಿಗೆಯು ಪನ್ಸಾಲ ತಾಲೀಮನ ಮಂದಿರದಿಂದ ನಗರದ ಚೌಬಾರಾ ಬಳಿಯ ಪಾಂಡುರಂಗ ಮಂದಿರದವರೆಗೆ ನಡೆಯಿತು. ಮೆರವಣಿಗೆಯಲ್ಲಿ ಭಜನೆ ಮಾಡುತ್ತಾ ಸಾಗಿದ ಸದ್ಭಕ್ತರು ಪಾಂಡುರಂಗ ಮಂದಿರದಲ್ಲಿ ಮಂಗಳಾರತಿ ಮಾಡುವ ಮೂಲಕ ಭಜನೆ ಮುಕ್ತಾಯಗೊಳಿಸಿದರು.
ಮಹಾಸಿದ್ಧ ಮಡಿವಾಳೇಶ್ವರ ದೇವರ ಉತ್ಸವ ಮೂರ್ತಿಯ ಪಲ್ಲಕಿ ಮೆರವಣಿಗೆ ಪುನಃ ಮಂದಿರಕ್ಕೆ ತಲುಪಿದ ನಂತರ ಭಜನೆ ಬೀಜ ಬಿತ್ತುವ ಮೂಲಕ ಪುನಃ ಭಜನೆ ಆರಂಭಿಸಿ ಮಂಗಳಾರತಿ ಹಾಡಿದ ತದನಂತರ ಸಂಜೆವರೆಗೆ ಮಹಾಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು.
ಪಲ್ಲಕಿ ಉತ್ಸವದಲ್ಲಿ ಚನ್ನಪ್ಪ ಧತ್ತರಗಿ, ಅಜೀತ ಚಿಲ್ಲರ್ಗಿ, ನಾಗಶೆಟ್ಟಿ ಧರಮಾಪುರ, ತಿಪ್ಪಯ್ಯ ಸ್ವಾಮಿ, ವಿಜಯಕುಮಾರ ಕೊತಮೀರ, ಶರಣು ರಾಂಪೂರೆ, ಶಿವಕುಮಾರ ಕೋತಮೀರ, ಅಂಬ್ರ್ರೇಶ ಕೊತಮೀರ, ಶಾಂತಮ್ಮ, ಈರಮ್ಮ, ಸರಸ್ವತಿ ಸಾಲಿಮಠ, ಸುನೀತಾ, ಚನ್ನಮ್ಮ ಕೋತಮೀರ ಶೃತಿ, ರಾಜಕುಮಾರ ವೆಂಕಟೇಶ, ರಾಹÀುಲ ಸೇರಿದಂತೆ ಅನೇಕರಿದ್ದರು.