ಮಡಿವಾಳೇಶ್ವರ, ಅಲ್ಲಮಪ್ರಭು, ಶ್ರೀ ರಾಘವೇಂದ್ರ ಶ್ರೀಗಳು ಮಹಾತಪಸ್ವಿಗಳು ಮಹಾ ಪುರುಷರು ಸಮಾಜ ಪರಿವರ್ತನೆಗೆ ಶ್ರಮಿಸಿದವರು

ವಿಜಯಪುರ :ಮಾ.13: ಕಲಕೇರಿಯ ಮಡಿವಾಳೇಶ್ವರ ಅಲ್ಲಮಪ್ರಭು ಶ್ರೀ ರಾಘವೇಂದ್ರ ಶ್ರೀಗಳು ಮಹಾತಪಸ್ವಿಗಳು ಸಮಾಜವನ್ನು ಸನ್ಮಾರ್ಗಕ್ಕೆ ಕೊಂಡೊಯ್ಯವ ಸಂದೇಶಗಳನ್ನು ನೀಡಿದರು. ಇಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ನಗರ ಘಟಕದ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ದತ್ತಿ ಕಾರ್ಯಕ್ರಮ ಶ್ರೀಮತಿ ನೀಲಮ್ಮ ಮುತ್ತಪ್ಪ ಸಂಕನ್ನವರ ಶ್ರೀಮತಿ ನಿಂಗಮ್ಮ ಗುರಪ್ಪ ಬೋಳಶೆಟ್ಟಿ ದತ್ತಿಗಳು ಮೆಟ್ರಿಕ ನಮತರದ ಬಾಲಕಿಯರ ಇಂಜಿನಿಯರಿಂಗ ಮತ್ತು ವೈದ್ಯಕೀಯ ವಸತಿ ನಿಲಯ ವಿಜಯಪುರದಲ್ಲಿ ಜರುಗಿದವು.

ನೀಲಮ್ಮ ಮುತ್ತಪ್ಪ ಸಂಕನ್ನವರ ಅವರ ದತ್ತಿಯ ವಿಷಯಗಳನ್ನು ಗಿರಿಜಾ ಪಾಟೀಲ ಮಾತನಾಡುತ್ತಾ ಕಟು ಸತ್ಯ ಮಾತುಗಳನ್ನು ಆಡಿ ಅಂದಿನ ಸಮಾಜದಲ್ಲಿ ಮಡಿವಾಳೇಶ್ವರ ವಿಚಾರ ಧಾರೆಗಳು ಅವಶ್ಯಕವಾಗಿದ್ದವು ಅಲ್ಲಮ ಪ್ರಭು ದೇವರು ಶರಣ ಚಿಂತನೆಗಳು ವಿಶ್ವಗುರು ಬಸವಣ್ನನವರು ಗೌರವಿಸುತ್ತಿದ್ದರು. ಶ್ರೀ ರಾಘವೇಮದ್ರ ಮಹಾಪುರುಷರು, ವಚನಗಾರರು, ಶರಣರು, ಸಮಾಜಕ್ಕಾಗಿ ಬದುಕಿದ್ದಾರೆ. ಎಂದು ಸಾಹಿತಿ ಗಿರಿಜಾ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.

ಗಂಗಮ್ಮ ಗುರಪ್ಪ ಬೋಳಶೆಟ್ಟಿ ಯಾದವಾಡ ದತ್ತಿಯ ವಿಷಯ 12ನೇ ಶತಮಾನದಿ ಶಿವಶರಣೆಯರು ಹಾಗೂ ಗುಡ್ಡಾಪುರದ ದಾನಮ್ಮ ಕುರಿತು ಸಾಹಿತಿ ಚೈತನ್ಯ ಜಿ. ಮುದ್ದೇಬಿಹಾಳ ಮಾತನಾಡಿ 12ನೇ ಶತಮಾನದ ಶಿವಶರಣರು ದೇಶದಲ್ಲಿ ಅಧ್ಯಾತ್ಮಿಕ ಸಾಮಾಜಿಕ ಮತ್ತು ಧಾರ್ಮಿಕ ಸಂದೇಶಗಳನ್ನು ನೀಡಿ ದೇಶದ ಹಣೆ ಬರಹವನ್ನು ಬದಲಾಯಿಸಿದರು. ವಿಶ್ವ ಗುರು ಬಸವಣ್ಣನವರು ವಚನ ಸಾಹಿತ್ಯದಿಂದ ಸಮಾಜವನ್ನು ಸಚ್ಚಾರಿತ್ರ್ಯವಾಗಿ ಕಟ್ಟಿದರು. ಅನುಭವ ಮಂಟಪದಲ್ಲಿ ಶರಣ ಶರಣೆಯರು, ವಚನಗಾರ್ತಿಯರು 12ನೇ ಶತಮಾನದಲ್ಲಿ ಅಪಾರವಾದ ಕೊಡುಗೆ ನಿಡಿದರು ಎಂದರು.

ಸಭೆಯ ಅಧ್ಯಕ್ಷತೆಯನ್ನು ತಾಲುಕಾಧಿಕಾರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಸವರಾಜ ಅಂಗಡಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕೋಶಾದ್ಯಕ್ಷ ಸಂಗಮೇಶ ಮೇತ್ರಿ, ದತ್ತಿ ಗೊಷ್ಠಿಗಳ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸಾಹಿತಿ ಬನುದೇವಿ ಸಂಕನ್ನವರ ಮ.ಗು. ಯಾದವಾಡ, ಎಂ.ಆಯ್. ಬಿರಾದಾರ, ಶಾಮತಾ ಯಾದವಾಡ ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ತ ನಗರ ಘಟಕದ ಅಧ್ಯಕ್ಷೆ ಸಂಗೀತಾ ಮಠಪತಿ ಜಿಲ್ಲಾ ದತ್ತಿ ಸಂಚಾಲಕ ರಾಜೇಸಾಬ ಶಿವನಗುತ್ತಿ ಉಪಸ್ಥಿತರಿದ್ದರು.