ಮಡಿವಾಳಯ್ಯ ಸ್ವಾಮೀಜಿಗಳ 35ನೇಪುಣ್ಯಸ್ಮರಣೆ ರಕ್ತದಾನ ನೇತ್ರದಾನ ಶಿಬಿರ:ಪೂಜ್ಯ ಸದಾಶಿವ ಸ್ವಾಮೀಜಿ

ಸೇಡಂ, ಆ, 03 : 75ನೇ ಆಜಾದಿಕಾ ಅಮೃತ ಮಹೋತ್ಸವ
ಹಾಗೂ ಶ್ರೀ ಮಡಿವಾಳಯ್ಯ ಸ್ವಾಮೀಜಿಗಳ 35ನೇ ಪುಣ್ಯಸ್ಮರಣೆ ಅಂಗವಾಗಿ ಇದೆ ಆಗಸ್ಟ್ 5ರಂದು ಚಿರಾಯು ಆಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ,ಔಷಧ ವಿತರಣೆ ಹಾಗೂ ರಕ್ತದಾನ ನೇತ್ರದಾನ ಶಿಬಿರ ಆಯೋಜಿಸಲಾಗಿದೆ ಎಂದು ಶ್ರೀ ಕೊತ್ತಲ ಬಸವೇಶ್ವರ ದೇವಸ್ಥಾನದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.
ಪಟ್ಟಣದ ಕೊತ್ತಲ ಬಸವೇಶ್ವರ ದೇವಾಲಯದ ಆವರಣದಲ್ಲಿರುವ ಯಾತ್ರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,
ಎಲುಬು ಮತ್ತು
ಕೀಲು ತಜ್ಞ ಡಾ.ಶಿವರಾಜ ಛತ್ರಸಾಲ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ
ನ್ಯಾಯವಾದಿ ಮೋಹನಕುಮಾರ ರಂಜೋಳಕರ ಆಗಮಿಸುವರು.
ಚಿರಾಯು ಆಸ್ಪತ್ರೆಯ ಡಾ.ಮಂಜುನಾಥ ದೋಶೆಟ್ಟಿ ಅಧ್ಯಕತೆ ವಹಿಸುವರು
ಎಂದು ತಿಳಿಸಿದರು. ಅಂದು ಬೆಳಗ್ಗೆ 10:35ಕ್ಕೆ ಶಿವಕುಮಾರ ಅಲ್ಲೂರ ಪರಿವಾರದಿಂದ
ಪೂಜ್ಯರ ಗದ್ದುಗೆಗೆ ರುದ್ರಾಭಿಷೇಕ ನೆರವೇರಲಿದೆ. ದಾಸೋಹ ಸೇವೆಯನ್ನು
ದಿ.ಶಿವರಾಯ ಪಾಟೀಲ ಬಟಗೇರಾ ಪರಿವಾರ, ಶಿವುಕುಮಾರ ಅಲ್ಲೂರ,
ಅನಂತಯ್ಯ ಮುಸ್ತಾಜರ ನೀಡಲಿದ್ದಾರೆ. ಆ.5ರಿಂದ 4.15ರ ವರೆಗೆ ಸಂಜೆ 6:30ರಿಂದ 7:30ರ ವರೆಗೆ ಸದ್ಗುರು ಸಿದ್ದಾರೂಡರ ಚರಿತ್ರಾಮೃತ ಪ್ರವಚನ ನಡೆಯಲಿದೆ. ಜತೆಗೆ ಮಕ್ಕಳಿಂದ ದೇಶ ಭಕ್ತಿ ಗೀತೆ, ಸ್ವಾತಂತ್ರ್ಯ
ಹೋರಾಟಗಾರ ಪರಿಚಯ ಸ್ಪರ್ಧೆ ನಡೆಸಲಾಗುವುದು. ಆ.14ರಂದು
ರಾತ್ರಿ 12ಕ್ಕೆ ಧ್ವಜಾರೋಹಣ ನೆರವೇರಿಸಲಾಗುವುದು, ಆ. 15ರಂದು
ಪಲ್ಲಕ್ಕಿ ಉತ್ಸವ, ಹೂವಿನ ರಥೋತ್ಸವ ಹಾಗೂ ಪ್ರವಚನ ಸಮಾರೋಪ
ಸಮಾರಂಭ ನೆರವೇರುವುದು, ಇದೇ ಸಮಾರಂಭದಲ್ಲಿ ಆಯೋಜಿಸಲಾದ
ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಆಜಾದಿಕಾ ಅಮೃತ ಮಹೋತ್ಸವ
ಪ್ರಶಸ್ತಿ ನೀಡಲಾಗುವುದು ಎಂದು ವಿವರಿಸಿದರು. ಈ ವೇಳೆಯಲ್ಲಿ ಬಸವರಾಜ ರೇವಗೊಂಡ , ಅನಂತಯ್ಯ ಮುಸ್ತಾಜರ , ಡಾ.ಸದಾನಂದ ಬೂದಿ , ಶಿವಕುಮಾರ ಬೋಳಶೆಟ್ಟಿ , ಸಿದ್ದಪ್ಪ ತಳ್ಳಳ್ಳಿ , ವಿಶ್ವನಾಥ ಕೋರಿ , ಭರತ ಬಜಾಜ , ಭಗವಂತರಾವ ಪಾಟೀಲ್ , ಬಸವರಾಜ ಕೋಸಗಿ , ಸಿದ್ದಣ್ಣ ಶೆಟ್ಟಿ , ಸಂಗಮೇಶ ಹತ್ತಿ , ಬಸವರಾಜ ಇನ್ನಿತರರಿದ್ದರು.