ಮಡಿಕೆ ಚಳುವಳಿಗೆ ನಾಳೆ ಕಲಬುರಗಿ ಚಲೋ

ಆಳಂದ: ಸೆ.22:ಸಮಾಜದ ಹಲವು ಬೇಡಿಕೆಗೆ ಒತ್ತಾಯಿಸಿ ಕರ್ನಾಟಕ ಕುಂಬಾರ ಯುವ ಸೈನ್ಯ ಆಶ್ರಯದಲ್ಲಿ ಸೆ.23ರಂದು ಕಲಬುರಗಿಯಲ್ಲಿ ನಡೆಯಲಿರುವ ಮಡಿಕೆ ಚಳವಳಿ ನಿಮಿತ್ತ ಕಲಬುರಗಿ ಚಲೋ ಮಹಾರ್ಯಾಲಿಗೆ ತಾಲೂಕು ಕುಂಬಾರ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಾಲೂಕು ಕುಂಬಾರ ಸಮಾಜ ಅಭಿವೃದ್ಧಿ ಸೇವಾ ಸಂಘದ ಅಧ್ಯಕ್ಷ ವಿದ್ಯಾಧರ ಡಿ. ಕುಂಬಾರ, ಉಪಾಧ್ಯಕ್ಷ ಶರಣು ಟಿ. ಕುಂಬಾರ ಅವರು ಮನವಿ ಮಾಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕುಂಬಾರಿಕೆ ಕುಲ ಕಸುಬು ನಮ್ಮ ಹಕ್ಕು, ನಮಗೂ ಪ್ರತ್ಯೇಕ ಕುಂಭ ಕಲಾ ಅಭಿವೃದ್ಧಿ ನಿಗಮದ ಬೇಡಿಕೆ ಮುಂದಿಟ್ಟು ಸೆ.23ರಂದು ಬೆಳಗಿನ 10:30 ಗಂಟೆಗೆ ಕಲಬುರಗಿಯ ತಿಮ್ಮಾಪೂರ ಸರ್ಕಲ್‍ನಿಂದ ಮಿನಿವಿಧಾನಸೌಧವರೆಗೆ ರ್ಯಾಲಿ ಆಯೋಜಿಸಿದ್ದು, ರ್ಯಾಲಿಯಲ್ಲಿ ಸಮಾಜದ ಬೇಡಿಕೆಯ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾಕ್ಕೆ ಸಲ್ಲಿಸಲಾಗುತ್ತಿದೆ. ಕುಂಬಾರ ಸಮಾಜದ ಸರ್ವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರ್ಯಾಲಿ ಯಶಸ್ವಿಗೊಳಿಸಬೇಕು ಎಂದು ಅವರು ಕೋರಿದರು.