ಮಡಿಕಟ್ಟೆ, ವಿದ್ಯಾರ್ಥಿ ನಿಲಯಗಳಿಗೆ ಅನುದಾನ ಬಿಡುಗಡೆಗೆ ಮನವಿ

ಸಂಜೆವಾಣಿ ವಾರ್ತೆ

ದಾವಣಗೆರೆ.ಜು.೧೧; ಮಡಿಕಟ್ಟೆ ನಿರ್ವಹಣೆ, ಕಟ್ಟಡ ದುರಸ್ತಿ, ಬಾಲಕರ ವಿದ್ಯಾರ್ಥಿ ವಸತಿ ನಿಲಯದ ಕಟ್ಟಡ ನಿರ್ಮಾಣಕ್ಕೆ ಅನುದಾನ, ನೂತನ ಬಾಲಕಿಯರ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಹೊಸದಾಗಿ ಅನುದಾನ ನೀಡುವಂತೆ ಆಗ್ರಹಿಸಿ ದಾವಣಗೆರೆ ಜಿಲ್ಲಾ ಮಡಿವಾಳ ಮಾಚಿದೇವ ಸಂಘ, ಹಾಗೂ ದಾವಣಗೆರೆ ಧೋಬಿಘಾಟ್ ವೃತ್ತಿಪರ ಮಡಿವಾಳರ ಸಂಘವು ಜಂಟಿಯಾಗಿ ತೆರಳಿ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಮನವಿ ಸಲ್ಲಿಸಿತು.ದಾವಣಗೆರೆ ನಗರದ ಹೊರವಲಯದಲ್ಲಿರುವ ಜಿಲ್ಲಾ ಪಂಚಾಯತಿ ಆಫೀಸ್ ಮುಂಬಾಗ ದೋಭಿಘಾಟಿಗೆ ಈ ಹಿಂದೆ ಮಲ್ಲಿಕಾರ್ಜುನ್ ಅವರು ಜಿಲ್ಲಾ ಸಚಿವರಾಗಿದ್ದಾಗ 1.5ಕೋಟಿ ರೂಗಳಲ್ಲಿ ಸುಸರ್ಜಿತವಾದ ಕಟ್ಟಡ ನಿರ್ಮಾಣ ಮಾಡಿ, ಬಟ್ಟೆ ತೊಳೆಯಲು ಅನುಕೂಲ ಆಗುವಂತೆ ಮಡಿಕಟ್ಟೆ ನಿರ್ಮಿಸಲಾಗಿತ್ತು. ಆದರೆ ಕಟ್ಟಡ ಬಳಕೆ, ಸೂಕ್ತ ನಿರ್ವಹಣೆ ಇಲ್ಲದೇ ಶಿಥಿಲ ಆಗುತ್ತಿದ್ದು, ಸ್ಥಳ ಪರಿಶೀಲನೆ ಮಾಡಿ ಅವಶ್ಯವಿರುವ ಬಟ್ಟೆ ತೊಳೆಯುವ ಯಂತ್ರ ಮತ್ತು ಕಟ್ಟಡ ದುರಸ್ತಿ ಹಾಗೂ ನೀರಿನ ವ್ಯವಸ್ಥೆಯನ್ನು ಮಾಡಿಕೊಡಲು ಅವಶ್ಯವಿರುವ ಅನುದಾನವನ್ನು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಅಲ್ಲದೇ ಮಡಿವಾಳ ಸಮಾಜದ ಬಾಲಕರ ವಿದ್ಯಾರ್ಥಿಗಳಿಗೆ ವಸತಿ ನಿಲಯ ನಿರ್ಮಾಣ ನಿಧಾನವಾಗಿ ಸಾಗುತ್ತಿದ್ದು, ಅದನ್ನು ಪೂರ್ಣಗೊಳಿಸಲು 1.5ಕೋಟಿಗೂ ಅಧಿಕ ಹಣ ಅವಶ್ಯಕತೆ ಇದೆ. ಕಾರಣ ಸಚಿವರು ಹಿಂದುಳಿದ ವರ್ಗಗಳ ಅಭಿವೃದ್ದಿ ಇಲಾಖೆಯ ಸಚಿವರಿಗೆ ಸೂಚಿಸಿ, ಅವಶ್ಯವಿರುವ ಹಣವನ್ನು ಮಂಜೂರು ಮಾಡಿಸಬೇಕೆಂದು ಮನವಿ ಮಾಡಿದರು.ಇದಲ್ಲದೇ ಮಹಿಳಾ ವಿದ್ಯಾರ್ಥಿ ನಿಲಯಕ್ಕಾಗಿ ಜೆ.ಹೆಚ್. ಪಟೀಲ್ ಬಡಾವಣೆಯಲ್ಲಿ ಇದ್ದು, ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡಲು 3ಕೋಟಿ ಹಣದ ಅಗತ್ಯ ಇದ್ದು, ಈ ಅನುದಾನವನ್ನು ಸಂಬAಧಪಟ್ಟ ಇಲಾಖೆಗಳಿಗೆ ಸೂಚಿಸಿ ಹಣ ಮಂಜೂರು ಮಾಡಿಸಿಕೊಡಬೇಕೆಂದು ವಿನಂತಿಸಿದರು.ಈ ವೇಳೆ ದಾವಣಗೆರೆ ಜಿಲ್ಲಾ ಮಡಿವಾಳ ಸಮಾಜದ ಅಧ್ಯಕ್ಷ ಎಂ.ನಾಗೇAದ್ರಪ್ಪ, ಕಾರ್ಯಾಧ್ಯಕ್ಷ ಹೆಚ್.ಜಿ.ಉಮೇಶ್, ಉಪಾಧ್ಯಕ್ಷ ಜಿ.ವಿಜಯ್‌ಕುಮಾರ್, ನಿರ್ದೇಶಕ, ಮಾಧ್ಯಮ ಸಲಹೆಗಾರ ಎಂ.ವೈ.ಸತೀಶ್, ಮಡಿಕಟ್ಟೆಯ ಅಧ್ಯಕ್ಷ ಜಿ.ಕಿಶೋರ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಹೆಚ್.ಬಿ.ಬಸವರಾಜ್, ಹನುಮಂತಪ್ಪ, ಎಂ.ರವಿಕುಮಾರ್, ಲಿಂಗರಾಜ್, ಸಂಜು ಇತರರು ಇದ್ದರು.