ಮಡವಿನಕೋಡಿ ಗ್ರಾಮದಲ್ಲಿ ರೈತರೊಂದಿಗೆ ಒಂದು ದಿನ ಕಾರ್ಯಕ್ರಮ

ಕೆ.ಆರ್.ಪೇಟೆ.ನ.15: ಬಿ.ಸಿ.ಪಾಟೀಲ್ ಮಕ್ಕಳಂತೆ ಹಠ ಹಿಡಿದು ಕೃಷಿ ಮಂತ್ರಿಯಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ.ನಾರಾಯಣಗೌಡ ಹೇಳಿದರು.
ತಾಲೂಕಿನ ಮಡವಿನಕೋಡಿ ಗ್ರಾಮದಲ್ಲಿ ಕೃಷಿ ಇಲಾಖೆ ಆಯೋಜಿಸಿದ್ದ ರೈತರೊಂದಿಗೆ ಒಂದು ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು.
ಕೃಷಿ ಮಂತ್ರಿಗಳು ತೆಗೆದುಕೊಂಡಿರುವ ತೀರ್ಮಾನ ತುಂಬ ಚೆನ್ನಾಗಿದೆ ತಿಂಗಳಿಗೆ ಎರಡು ದಿನ ರೈತರೊಂದಿಗೆ ಇರಲು ತೀರ್ಮಾನಿಸಿದ್ದಾರೆ. ಕೃಷಿಯಲ್ಲಿ ಸಕ್ರಿಯವಾಗಿದ್ದರೆ, ದೇಹಕ್ಕೆ ಉತ್ತಮ ಶಕ್ತಿ ಬರುತ್ತದೆ.ಲ ಆರೋಗ್ಯವು ಚೆನ್ನಾಗಿರುತ್ತದೆ ರೈತ ಸ್ವಾವಲಂಭಿ ಆಗಬೇಕು.ಆತ್ಮಹತ್ಯೆ ಮಾಡಿಕೊಳ್ಳುವಂತಹ ನಿರ್ಧಾರವನ್ನು ರೈತರು ತೆಗೆದುಕೊಳ್ಳಬಾರದು.ತರಕಾರಿ ಮತ್ತು ಹಣ್ಣು ಶೇ.2.5 ರಷ್ಟು ರಫ್ತು ಇತ್ತು. ನಾನು ಅಧಿಕಾರಕ್ಕೆ ಬಂದ ಮೇಲೆ ಶೇ.5.5 ರಷ್ಟು ಹೆಚ್ಚಾಗಿದೆ. ಲಾಕ್‍ಡೌನ್ ವೇಳೆ ಉತ್ತಮವಾಗಿ ಕೆಲಸ ಮಾಡಿದ ಅಧಿಕಾರಿಗಳಿಗೆ ಅಭಿನಂದನೆ ತಿಳಿಸಿದರು. ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯವರು ಎಸಿ ರೂಮ್‍ಲ್ಲಿ ಕುಂತು ಕೆಲಸ ಮಾಡಕ್ಕಾಗಲ್ಲ. ಮಳೆಯಲ್ಲಿ ನೆನಿಬೇಕು.ಬಿಸಿಲಲ್ಲಿ ಒಣಗಬೇಕು.ಇದು ಸಿಎಂ ಯಡಿಯೂರಪ್ಪ ಅವರ ಹೋಬಳಿ, ಕಾರ್ಯಕ್ರಮ ನಡೆಯುತ್ತಿರುವುದು ಅವರಿಗೆ ಖುಷಿ ತಂದಿರುತ್ತದೆ ಎಂದು ನನ್ನ ಭಾವನೆ ಎಂದರು.
ಯಡಿಯೂರಪ್ಪನವರು ಚಿಕ್ಕವಯಸ್ಸಿನಲ್ಲಿ ಪ್ರತಿದಿನ ಎರಡು ಹಲಸಿನ ಹಣ್ಣನ್ನು ತೆಗೆದುಕೊಂಡು ಮಾರುಕಟ್ಟೆಯಲ್ಲಿ ಮಾರಿ, ಬಂದಂತಹ ಹಣವನ್ನು ಅವರ ತಾಯಿಗೆ ಅವಶ್ಯಕ ಗೃಹ ವಸ್ತುಗಳನ್ನು ತಂದು ಬಳಿಕೆ ಶಾಲೆಗೆ ಹೋಗುತ್ತಿದ್ದರು ಎಂದು ಕೃಷಿ ಸಚಿವರ ಗಮನಕ್ಕೆ ತಂದರು.
ಕೃಷಿ ಸಚಿವ ಬಿ.ಸಿ.ಪಾಟೀಲ್ ವೇದಿಕೆ ಮುಂಭಾಗದಲ್ಲಿ ರಾಶಿ ಪೂಜೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿ ನಾನು ಹುಟ್ಟು ಹಬ್ಬ ಅಚರಿಸಿಕೊಳ್ಳಬಾರದು ಎಂಬ ಕಾರಣಕ್ಕೆ ರೈತರೊಂದಿಗೊಂದುದಿನ ಕಾರ್ಯಕ್ರಮಕ್ಕೆ ಮುಂದಾಗಿದ್ದೆ.
ಇಲ್ಲಿ ನಾನು ಕತ್ತರಿಸಿದ ಕೇಕ್, ನನಗೆ ತೋಡಿಸಿದ ಪೇಟ, ನನಗೆ ಹಾಕಿದ ಮಾಲೆ ನನ್ನ ಜೀವನದಲ್ಲಿ ಎಂದಿಗೂ ಹಾಕಿರಲಿಲ್ಲ. ಮಂಡ್ಯ ಜನರ ಪ್ರೀತಿಯನ್ನು ಎಂದು ಮರೆಯಲ್ಲ. ಕಾರ್ಯಕ್ರಮಕ್ಕೆ ಮೊದಲು ಮಂಡ್ಯವನ್ನು ಆಯ್ಕೆ ಮಾಡಿಕೊಂಡೆ, ನಂತರ ನಾರಾಯಣಗೌಡರ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದೀನಿ.ನಾವು ಕೋವಿಡ್ ಮಂತ್ರಿಗಳಾಗಿ ಬಂದಿದ್ದೆವು. ಲಾಕ್‍ಡೌನ್ ವೇಳೆ ಕಾರ್ಖಾನೆಗಳು ಮುಚ್ಚಿದ್ದವು. ಅವರಿಗೆ ನಷ್ಟ ಆಗಲಿಲ್ಲ. ಸಾಷ್ಟ್ವೇರ್ ಕಂಪನಿಗಳು ಹೋಂ ಫ್ರಮ್ ವರ್ಕ್ ಮಾಡಿದರು. ಆದರೇ ರೈತ ಹೇಗೆ ಹೋಮ್ ಫ್ರಮ್ ವರ್ಕ ಮಾಡಕಾಗುತ್ತೆ ಎಂದು ಪ್ರಶ್ನಿಸಿದರು. ನಾನು ಸಚಿವನಾದ ಬಳಿಕ ರೈತರ ಆತ್ಮಹತ್ಯೆ ಏಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಕಾರಣ ಕೇಳಲು ತಜ್ಞರ ಸಭೆ ನಡೆಸಿದೆ. ಆಗ ರೈತರಿಗೊಂದು ದಿನ ಕಾರ್ಯಕ್ರಮಕ್ಕೆ ಚಿಂತಿಸಿದೆ. ನಾನು ಏನೋ ಕೊಡೋಕೆ ಬಂದಿಲ್ಲ. ರೈತರ ಅನುಭವ, ಕಷ್ಟ, ನೋವು ತಿಳಿಯಲು ಬಂದಿದ್ದೇನೆ. ರೈತರಿಗೆ ಪ್ಯಾಕೇಜ್ ನೀಡಿದರೇ, ಸಾಲ ಮನ್ನಾ ಮಾಡಿದರೇ ರೈತರ ಆತ್ಮಹತ್ಯೆ ನಿಲ್ಲಲ್ಲ. ಮಂಡ್ಯದಲ್ಲಿ 204 ರಲ್ಲಿ 99 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಲಾರದಲ್ಲಿ 9 ರೈತರು ಮಾತ್ರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾನು ರೈತ ಮಹಿಳೆ ಲಕ್ಷ್ಮಿದೇವಮ್ಮನ ತೋಟಕ್ಕೆ ಹೋಗಿದ್ದೆ. ಆಕೆ ಬಂಗಾರದ ಬಳೆ ಹಾಕಿದ್ದರು. ಎಲ್ಲಿಂದ ಬಂತು ಅಂತಾ ಕೇಳಿದೆ. ರೈತ ಮಹಿಳೆ ಹೇಳಿದರು. ಈ ಭೂಮಿಯಿಂದ ಬಂದ ಹಣದಲ್ಲಿ ಬಂಗಾರ ಮಾಡಿಸಿಕೊಂಡಿದ್ದೇನೆ ಎಂದರು. ನನಗೆ ಬಹಳ ಸಂತೋಷವಾಯಿತು ಎಂದು ಹೇಳಿದರು.
ಕೃಷಿಯನ್ನು ಉದ್ಯಮವನ್ನಾಗಿ ಮಾಡಬೇಕು. ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಸಂಸ್ಕರಣ ಮತ್ತು ಪ್ಯಾಕಿಂಗ್ ಮಾಡಬೇಕು. ರೈತರು ಚಿಕ್ಕದಾಗಿ ಆಹಾರ ಸಂಸ್ಕರಣ ಘಟಕವನ್ನು ಸ್ಥಾಪಿಸಬೇಕು. ರೈತರು ಮಧ್ಯವರ್ತಿಗಳನ್ನು ಬಿಟ್ಟು ನೇರ ಮಾರುಕಟ್ಟೆ ಮಾಡಬೇಕು. ಆಗ ಮಾತ್ರ ಆದಾಯ ದ್ವಿಗುಣ ಆಗುತ್ತದೆ. ಮಂಡ್ಯದವರು ಕಬ್ಬು,ಭತ್ತ ಬಿಟ್ಟು ಮತ್ತೇನು ಬೆಳೆಯಲ್ಲ. ಭತ್ತ ಬೆಳೆದರೆ ಎಂದೂ ರೈತ ಉದ್ದಾರ ಆಗಲ್ಲ. ಸಮಗ್ರ ಕೃಷಿಯಲ್ಲಿ ಒಂದೆರಡು ಬೆಳೆ ಕೈಕೊಟ್ಟರೂ, ಉಳಿದ ಬೆಳೆಗಳು ಕೈಹಿಡಿಯುತ್ತವೆ.
ಲಾಕ್‍ಡೌನ್ ವೇಳೆ ರೈತರ ಕೃಷಿ ಚಟುವಟಿಕೆ ನಿಲ್ಲದಂತೆ ಸಿಎಂ ಯಡಿಯೂರಪ್ಪ ಕೃಷಿ, ತೋಟಗಾರಿಕೆ, ಪಶುಸಂಗೋಪನಾ ಮತ್ತು ಸಹಕಾರ ಇಲಾಖೆಯ ಸಚಿವರನ್ನು ಕರೆದು ಸೂಚನೆ ನೀಡಿದ್ದರು. ರಾಜ್ಯದಲ್ಲಿ 15 ಲಕ್ಷ ಹೆಕ್ಟರ್ ಭೂಮಿ ಬೀಳು ಬಿದ್ದಿದೆ. ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಈಗ ಯಾರಬೇಕಾದರೂ ಕೃಷಿ ಭೂಮಿ ಖರೀದಿಸಬಹುದು. ವೀಕೆಂಡ್ ಪ್ಯಾಶನ್ ಅಗ್ರಿಕಲ್ಚರ್ ಯೋಜನೆ ತರಲು ಸರ್ಕಾರ ಚಿಂತನೆ ನಡೆಸುತ್ತಿದೆ. ಹಿಂದೆ ನಗರದಲ್ಲಿ ವೀಕೆಂಡ್‍ಅಲ್ಲಿ ಪಬ್, ಬಾರ್‍ಗೆ ಹೋಗುತ್ತಿದ್ದರು. ಈಗ ಅವರನ್ನು ವೀಕೆಂಡ್ ಅಗ್ರಿಕಲ್ಚರ್ ಕಡೆ ತರಬೇಕಾಗುತ್ತದೆ. ಸಾಫ್ಟ್ವೇರ್ ಇಂಜಿನಿಯರ್ ಕೂಡ ಕೃಷಿ ಮಾಡುವಂತಾಗಬೇಕು ಎಂದು ಹೇಳಿದರು.
ಅಂತರರಾಷ್ಟ್ರೀಯ ಪ್ರಗತಿಪರ ರೈತ ಮಹಿಳೆ ಪ್ರಶಸ್ತಿ ಪುರಸ್ಕೃತೆ ಕವಿತಾ ಮಿಶ್ರ ಮಾತನಾಡಿ, ರೈತರಿಗೆ ದಯೆ ಬೇಡ, ರೈತರಿಗೆ ವೈಜ್ಞಾನಿಕ ಮಾರುಕಟ್ಟೆ ವ್ಯವಸ್ಥೆ ಕಲ್ಪಸಿದರೆ ರೈತರ ಬಾಳು ಬೆಳಕಾಗುತ್ತದೆ. ರೈತರ ಆಧುನಿಕ ಬೇಸಯದಲ್ಲಿ ಹಲವು ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಕೃಷಿಯಲ್ಲಿ ತೊಡಗಿದ್ದಾಗ ಮಾತ್ರ ಹೆಚ್ಚಿನ ಆದಾಯ ಪಡೆಯಬಹುದು. ಒಕ್ಕಲಿಗರು ಪ್ರತಿ ಊರಿನಲ್ಲಿದ್ದರೆ ಮಾತ್ರ ಸಮೃದ್ಧವಾಗಿರುತ್ತದೆ. ಇಲ್ಲದಿದ್ದರೆ ಬಿಕೋ ಅನಿಸುತ್ತದೆ. ಶ್ರೀಗಂಧ ಬೆಳೆ ಕೋಟಿ ಆದಾಯವನ್ನು ಕೊಡುತ್ತದೆ. ಇಂಜಿನಿಯರ್, ಡಾಕ್ಟರಂತೆ ರೈತರು ಕೋಟಿ ರೂ ಸಂಪಾದಿಸಬೇಕು. ನಾನು ಓದಿದ್ದು ಇಂಜಿನಿಯರಿಂಗ್ ಆದರೂ, ನಾನು ಕೃಷಿಯಲ್ಲಿ ತೊಡಗಿದ್ದೀನಿ, ನನಗೆ ಸನ್ಮಾನ, ಪ್ರಶಸ್ತಿ ಸಿಕ್ಕಿರುವುದು ಕೃಷಿ ಕ್ಷೇತ್ರದಿಂದ, ಸಮಗ್ರ ಕೃಷಿ ಜತೆ ಅರಣ್ಯ ಕೃಷಿ ಮಾಡಬೇಕು. ಹೈನುಗಾರಿಕೆ, ಕುರಿ ಸಾಕಾಣಿಕೆ ಜತಗೆ ಸಮಗ್ರ ಕೃಷಿ ಮಾಡಿದರೆ ಆದಾಯ ಖಚಿತ ಎಂದು ಹೇಳಿದರು.
ಕೃಷಿ ಸಚಿವರ ಹುಟ್ಟುಹಬ್ಬವನ್ನು ವೇದಿಕೆಯಲ್ಲಿ ಆಚರಿಸಿದರು. ಈ ವೇಳೆ ಪತ್ನಿ ವನಜಾಪಾಟಿಲ್, ಪುತ್ರಿಯರಾದ ಸೌಮ್ಯ ಪಾಟೀಲ್, ಸೃಷ್ಠಿ ಪಾಟೀಲ್, ಅಳಿಯ ಸುಜಯ್, ಸಚಿವ ಕೆ.ಸಿ.ನಾರಾಯಣಗೌಡ ಇದ್ದರು.
ಕಾರ್ಯಕ್ರಮದಲ್ಲಿ ಮಂಡ್ಯ ಶಾಸಕ ಎಂ.ಶ್ರೀನಿವಾಸ್, ಜಿಪಂ ಉಪಾಧ್ಯಕ್ಷೆ ಗಾಯಿತ್ರಿ, ತಾಪಂ ಅಧ್ಯಕ್ಷೆ ಜಯಲಕ್ಷ್ಮಿ ಬೆಂಗಳೂರು ಕೃಷಿ ವಿವಿ ಉಪ ಕುಲಪತಿ ಎಸ್.ರಾಜೇಂದ್ರಪ್ರಸಾದ್, ಕೃಷಿ ಇಲಾಖೆ ಆಯುಕ್ತ ಬ್ರಿಜೇಷ್‍ಕುಮಾರ್ ದೀಕ್ಷಿತ್, ಡಿಸಿ ಎಂ.ವಿ. ವೆಂಕಟೇಶ್, ಜಿಪಂ ಸಿಇಒ ಜುಲ್ಫಿಕರ್ ಉಲ್ಲಾ, ಕೃಷಿ ನಿರ್ದೇಶಕ ಬಿ.ವೈ ಶ್ರೀನಿವಾಸ್, ಎಸಿ ಶಿವಾನಂದಮೂರ್ತಿ, ತಹಸೀಲ್ದಾರ್ ಎಂ.ಶಿವಮೂರ್ತಿ, ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್,ಜಿ.ಪಂ.ಮಾಜಿ ಉಪಾಧ್ಯಕ್ಷ ಎಸ್.ಅಂಬರೀಶ್ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜೆ.ವಿಜಯ್‍ಕುಮಾರ್ ತಾಲ್ಲೂಕು ಅಧ್ಯಕ್ಷ ಪರಮೇಶ್ ಸಚಿವರ ಆಪ್ತ ಕಾರ್ಯದರ್ಶಿ ದಯಾನಂದ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ರೈತ ಮುಖಂಡರು ಮತ್ತು ಸಾವಿರಾರು ಸಂಖ್ಯೆಯಲ್ಲಿ ರೈತರು ಸಾರ್ವಜನಿಕರು ಸೇರಿದ್ದರು
ಂಣಣಚಿಛಿhmeಟಿಣs ಚಿಡಿeಚಿ