ಕಮಲಾಪುರ,ಜೂ6: ತಾಲೂಕಿನ ಮಡಕಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಅಡಿಯಲ್ಲಿ ಬ್ರಿಜ್ ಕಮ್ ಬ್ಯಾರೇಜ್ ನಾಲಾ ಹೂಳೆತ್ತುವ ಕಾಮಗಾರಿಯಲ್ಲಿ ತೊಡಗಿದ್ದ 300.ಜನ ಕೂಲಿ ಕಾರ್ಮಿಕರಿಗೆಆರೋಗ್ಯ ಅಮೃತ ಅಭಿಯಾನದಡಿ ರಕ್ತದ ಒತ್ತಡ, ಶುಗರ್, ರಕ್ತ ಪರೀಕ್ಷೆ, ಇನ್ನು ಮುಂತಾದ ಪರೀಕ್ಷೆಗಳನ್ನು ಏಕ ಕಾಲಕ್ಕೆ ಮಾಡಲಾಯಿತು. ಸ್ಥಳದಲ್ಲಿ ತಾ ಪಂಉದ್ಯೋಗ ಖಾತ್ರಿ ಪ್ರಭಾರಿ ಸಹಾಯಕ ನಿರ್ದೇಶಕ ಜಗನ್ನಾಥ್ ರೆಡ್ಡಿ,ಗ್ರಾಪಂ ಅಭಿವೃದ್ಧಿ ಅಧಿಕಾರಿ ದಯಾನಂದ ಜಾಧವ್, ಬಿ ಎಫ್ ಟಿ ಸೂರ್ಯಕಾಂತ,ಕಂಪ್ಯೂಟರ್ ಆಪರೇಟರ್ ಲಿಂಗರಾಜ,ಕೆಎಚ್ ಪಿಟಿ ತಾಲೂಕ ಸಂಯೋಜಕ ಉಮೇಶ್ ಜಾಧವ,ಹೆಲ್ತ್ ಇನ್ಸ್ಪೆಕ್ಟರ್ ಆಫೀಸರ್ ಮೀನಾಕ್ಷಿ, ಹೆಲ್ತ್ ಕಮ್ಯುನಿಟಿ ಆಫೀಸರ್ ರವಿ, ಪ್ರೈಮರಿ ಹೆಲ್ತ್ ಆಫೀಸರ್ ರೂಪ,ಸ್ವಯಂಸೇವಕರಾದ ಸುರೇಖಾ ರತ್ನಮ್ಮ,ಆಶಾ ಕಾರ್ಯಕರ್ತೆನಾಗವೇಣಿ ಉಪಸ್ಥಿತರಿದ್ದರು.