ಮಠ-ಮಾನ್ಯಗಳ ಸೇವೆ ಶ್ಲ್ಯಾಘನೀಯ


ಮುನವಳ್ಳಿ,ಮಾ.14: ಯಕ್ಕುಂಡಿ ಗ್ರಾಮದ ಕುಮಾರೇಶ್ವರ ವಿರಕ್ತಮಠದ ಪೀಠಾಧಿಕಾರಿ ಪಂಚಾಕ್ಷರ ಮಹಾಸ್ವಾಮಿಗಳ ಷಷ್ಠಬ್ದಿ ಹಾಗೂ ನೂತನ ಕುಮಾರೇಶ್ವರ ವಿರಕ್ತಮಠದ ಲೋಕಾರ್ಪಣೆ ಪ್ರಯುಕ್ತ ಶನಿವಾರ ಸಂಜೆ ಬಸವ ಪುರಾಣ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದ ಪಂಚನಗೌಡ್ರ ದ್ಯಾಮನಗೌಡ್ರ ಬಸವಣ್ಣನವರ ಸಿದ್ದಾಂತಗಳು ವಿಶ್ವಕ್ಕೆ ಮಾದರಿಯಾಗಿವೆ. ಯಕ್ಕುಂಡಿ ಗ್ರಾಮವು ಹಿಂದೂ-ಮುಸ್ಲಿಂ ಬಾಂದವರು ಭಾವೈಕ್ಯತೆಯಿಂದ ಇರುವುದು ರಾಜ್ಯಕ್ಕೆ ಮಾದರಿಯಾಗಿದೆ. ಮನುಷ್ಯನ ಮನಸ್ಸಿಗೆ ಶಾಂತಿ ನೆಮ್ಮದಿಗಳು ಸಿಗಬೇಕೆಂದರೆ ಮಠ ಮಾನ್ಯಗಳಲ್ಲಿ ಮಾತ್ರ ಸಾದ್ಯ ಆಧ್ಯಾತ್ಮೀಕ ಶಕ್ತಿಯಿಂದ ಜೀವನದಲ್ಲಿ ಸಾಕಷ್ಟು ಸಾಧನೆ ಮಾಡಬಹುದು ಶರಣ ಸಂಸ್ಕøತಿಯಿಂದ ಸಾಮಾಜಿಕ ಶಾಂತಿ ಸಾಧ್ಯ ಎಂದರು.
ಎಸ್ ಎಸ್ ಮುಗಳಿ ಮಾತನಾಡಿ ಮನಕುಲದ ಅಭ್ಯುದಯ ಹಾಗೂ ಏಳ್ಗೇಗಾಗಿ ಮಾನವರಾಗಿ ಮಾನವತೆಯಿಂದ ಬಾಳಿದಾಗ ಮಾತ್ರ ಒಳ್ಳೆಯ ಜೀವನ ನಡೆಸಲು ಸಾದ್ಯ ಎಂದರು. ಪ್ರಕಾಶ ಮೂಗಬಸವ ಮಾತನಾಡಿ ಶರಣರ ತತ್ವ ಆದರ್ಶ ಜೀವನದಲ್ಲಿ ಪಾಲಿಸಿಕೊಂಡು ಪುರಾಣ ಪ್ರವಚನ ಆಲಿಸಿ ಎಂದರು. ತೊರಗಲ್‍ದ ಚನ್ನಮಲ್ಲಶಿವಾಚಾರ್ಯಸ್ವಾಮಿಗಳು ಸಾನಿದ್ಯವಹಿಸಿ ಆಶೀರ್ವಚನ ನೀಡಿದರು, ಯಕ್ಕುಂಡಿಯ ವಿರಕ್ತಮಠದ ಪಂಚಾಕ್ಷರಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಬೈಲಹೊಂಗಲದ ಬಸವರಾಜ ಕೌಜಲಗಿ, ಮಹಾರಾಜಗೌಡ ಪಾಟೀಲ, ಮಹಾಂತೇಶ ಮತ್ತಿಕೊಪ್ಪ, ಯಕ್ಕುಂಡಿ ಗ್ರಾ ಪಂ ಅಧ್ಯಕ್ಷೆ ಪೈರೋಜಾ ಬಾರಿಗಿಡದ, ಗ್ರಾ ಪಂ ಉಪಾಧ್ಯಕ್ಷೆ ಮಾಸಾಬಿ ಇಮ್ಮನ್ನವರ, ಬಸಲಿಂಗಪ್ಪ ನಾಗನೂರ, ಗಂಗಪ್ಪ ಪಠಾಣಿ, ಶಿವಪುತ್ರಪ್ಪ ಮುರಗೋಡ ಯಕ್ಕುಂಡಿ ಗ್ರಾಮದ ಗುರುಹಿರಿಯರು ಮತ್ತು ಶ್ರೀಮಠದ ಭಕ್ತರು ಉಪಸ್ಥಿತರಿದ್ದರು. ಪ್ರಕಾಶ ಕಮ್ಮಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.