ಮಠ ಮಂದಿರಗಳು ನೆಮ್ಮದಿ ನೀಡುವ ತಾಣಗಳು: ಸಂಗನಬಸವಪ್ಪ ಬಿರಾದಾರ

ವಡಗೇರಾ:ಜೂ.30:ತಾಲೂಕಿನ ಸುಕ್ಷೇತ್ರ ಕೃಷ್ಣವೇಣಿ ಭೀಮಾ ಸಂಗಮದಲ್ಲಿ ಮಣ್ಣು ಎತ್ತಿನ ಅಮಾವಾಸ್ಯೆಯ ನಿಮಿತ್ತ 74ನೇ ಶಿವಾನುಭವ ಗೋಷ್ಠಿ ಕಾರ್ಯಕ್ರಮ. ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮವನ್ನು. ರಾಯಚೂರು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ. ಸಂಗನಬಸವಪ್ಪ ಬಿರಾದರ ಗಣಪೂರವರು. ಉದ್ಘಾಟಿಸಿ ಮಾತನಾಡಿದರು. ಮಠ ಮಂದಿರಗಳು ನೆಮ್ಮದಿ ನೀಡುವ ತಾಣಗಳಾಗಿದ್ದು ಪ್ರತಿಯೊಬ್ಬರೂ ಕೂಡ ಬಿಡುವಿನ ಸಮಯದಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ನೆಮ್ಮದಿಯನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು. ಪೂಜ್ಯರ ಅವಿರತ ಶ್ರಮದಿಂದ ಕೃಷ್ಣ ವೇಣಿ ಭೀಮಾ ಸಂಗಮವು ಅಭಿವೃದ್ಧಿಯತ್ತ ಸಾಗುತ್ತಿದೆ ನಾವುಗಳು ಕೂಡ ಅವರೊಂದಿಗೆ ಕೈಜೋಡಿಸೋಣ ಎಂದು ಅವರು ಹೇಳಿದರು. ಈ ಕಾರ್ಯಕ್ರಮದ ಸಾನಿಧ್ಯವನ್ನು ಕೃಷ್ಣ ವೇಣಿ ಭೀಮಾ ಸಂಗಮದ ಪಿಠಾದಿಪತಿಗಳಾದ ಪೂಜ್ಯ.ಶ್ರೀ ಕರುಣೇಶ್ವರ ಮಹಾಸ್ವಾಮಿಗಳು ವಹಿಸಿಕೊಂಡು ಮಾತನಾಡಿದರು. ಮನುಷ್ಯನಲ್ಲಿ ಭಕ್ತಿ ಅತಿ ಮುಖ್ಯವಾಗಿದೆ ಡಾಂಬಿಕ ಭಕ್ತಿ ಸರಿಯಲ್ಲ ನಿಜವಾದ ಭಕ್ತಿ ಇದ್ದಾಗ ಮಾತ್ರ ಮನುಷ್ಯನ ಜನ್ಮ ಸಾರ್ಥಕ ಪ್ರತಿಯೊಬ್ಬರು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡು ದೀನ ದಲಿತರ ಬಡವರ ಏಳಿಗೆಗಾಗಿ ಶ್ರಮಿಸುವಂತೆ ಭಕ್ತರಿಗೆ ಕಿವಿ ಮಾತು ಹೇಳಿದರು. ಈ ಸಂದರ್ಭದಲ್ಲಿ. ಗಜದಂಡಯ್ಯ ಶಾಸ್ತ್ರಿ. ವೀರಭದ್ರಯ್ಯ ಸ್ವಾಮಿ ದೇವಸಗೂರು. ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಚಂದ್ರಶೇಖರಗೌಡ ಗೋನಾಲ. ಗುರುನಾಥ್ ರೆಡ್ಡಿ ಗೌಡ ಕದ್ರಾಪುರ. ಶ್ರೀಮತಿ ಶಾರದಾ ಬಾಯಿ ಬಿರಾದಾರ.ಮಲ್ಲಿಕಾರ್ಜುನ ರೆಡ್ಡಿ ಬೆನಕನಹಳ್ಳಿ. ಬಸಪ್ಪಗೌಡ ಕಾಳ ಬೆಳಗುಂದಿ. ಬಸಯ್ಯಸ್ವಾಮಿ ಶಿವಪುರ. ಸಿದ್ದಪ್ಪಗೌಡ ಶಿವಪುರ. ಸೈದಪ್ಪ ರಾಮ್ದುರ್ಗ. ಚನ್ನಪ್ಪ ಗೌಡ ಅಗ್ನಿಹಾಳ. ಬಸವರಾಜ ಕಾಟರ್ಪಲ್ಲಿ. ವೀರೇಶ ಸ್ವಾಮಿ. ಗುರುರಾಜ. ಸೈದಪ್ಪ ಶಿವಪುರ. ಮಹೇಶ. ಹಾಗೂ ಇನ್ನಿತರರು ಉಪಸ್ಥಿತರಿದ್ದರು.