
ಆಳಂದ: ಫೆ.27:ಪಟ್ಟಣದ ಶ್ರೀ ಮಹಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ ಮಹಾಂತ ಶಿವಯೋಗಿಗಳ ಪುಣ್ಯರಾಧನೆ, ಧಾರ್ಮಿಕ ಸಮಾರಂಭ ಹಾಗೂ ಶ್ರೀಮಠದ ನೂತನ ಪೀಠಾಧಿಕಾರಿಗಳು, ಅಭಿನವ ಶ್ರೀ ಡಾ ಚನ್ನಬಸವ ಶಿವಾಚಾರ್ಯಾ ಮಹಾಸ್ವಾಮಿಗಳುÀ ಪುರಪ್ರವೇಶ ನಿಮಿತ್ತ ಭಾನುವಾರ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಧಾರ್ಮಿಕ ಸಮಾರಂಭ ಅದ್ಧೂರಿಯಾಗಿ ನೆರವೇರಿತು.
ಭಕ್ತಾದಿಗಳು ಸ್ವಾಗತ ಸ್ವೀಕರಿಸಿ ಧಾರ್ಮಿಕ ಸಮಾರಂಭದಲ್ಲಿ ಶ್ರೀಮಠದ ಅಭಿನವ ಡಾ. ಚನ್ನಬಸವ ಶಿವಾಚಾರ್ಯರು ಮಾತನಾಡಿ, ಸಮಾಜದಲ್ಲಿನ ಮೌಡ್ಯವನ್ನು ವಿರೋಧಿಸಬೇಕು. ಆದರೆ ಪರಂಪರೆಗೆ ವಿರೋಧ ಬೇಡ್, ಧಾರ್ಮಿಕ ಕಾರ್ಯಗಳಿಂದ ಸಮಾಜದಲ್ಲಿ ಶಾಂತಿ ನೆಮ್ಮದಿ ಸನಾರ್ಗಕ್ಕೆ ದಾರಿಮಾಡಿಕೊಡುತ್ತೇದೆ. ಭಕ್ತಾದಿಗಳು ಧರ್ಮ ಮತ್ತು ಸಮಾಜ ಕಾರ್ಯದೊಂದಿಗೆ ಬದುಕನ್ನು ಹಸನಾಗಿಸಿಕೊಳ್ಳಬೇಕು ಎಂದು ಹೇಳಿದ ಅವರು, ಶಾಖಾ ಮಠದ ನೆರೆಯ ಬಸವಕಲ್ಯಾಣದಲ್ಲಿನ ಹತ್ತರಗಾ ಮಠದಲ್ಲಿ ಸೋಮವಾರ ಪುರಪ್ರವೇಶ ಹಾಗೂ ಬಿಜಾಪೂರ ಜಿಲ್ಲೆ ಜಾಲವಾದಿ ಶಾಖಾಮಠದಿಂದಲೂ ಮಾರ್ಚ 17 ರಂದು ಅದ್ದೂರಿ ಕಾರ್ಯಕ್ರಮ ನಡೆಯಲಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಫೀರೋಜಾಬಾದ ಮಠದ ಶ್ರೀ ಗುರುಬಸವ ಮಹಾಸ್ವಾಮಿಗಳು, ಅಧ್ಯಕ್ಷತೆ ವಹಿಸಿದ್ದ ಶ್ರೀಮಠದ ಹಿರಿಯ ಪೀಠಾಧಿಪತಿ ಶ್ರೀ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಶಾಸಕ ಸುಭಾಷ ಗುತ್ತೇದಾರ ಅವರು ಮಾತನಾಡಿ, ಮಠ, ಪೀಠಗಳಿಂದ ಧಾರ್ಮಿಕ ಸಂಸ್ಕಾರ ಜನಪರ ಕಾರ್ಯಗಳು ನಡೆಯುತ್ತಿವೆ. ಶ್ರೀ ಮಹಾಂತೇಶ್ವರ ಮಠದ ಮೂಲಕ ನಡೆಯುವ ಸಮಾಜೋ ಧಾರ್ಮಿಕ ಕಾರ್ಯಕ್ಕೆ ಮುಂದೆಯೂ ಎಲ್ಲಾ ರೀತಿಯಿಂದಲೂ ಸಹಕರಿಸಲಾಗುವುದು ಎಂದು ಹೇಳಿದರು. ಮಾಜಿ ಶಾಸಕ ಬಿ.ಆರ್. ಪಾಟೀಲ ಅವರು ಮಾತನಾಡಿ, ಶ್ರೀಮಠವು ಜನಪರ ಕಾರ್ಯಗಳಿಗೆ ನಿರಂತರವಾಗಿ ಸಹಾಯ ಸಹಕಾರ ನೀಡಲಾಗುವುದು ಭಕ್ತಾದಿಗಳು ಶ್ರೀಮಠದ ಪೂಜ್ಯರು ಕೈಗೊಳ್ಳುವ ಧಾರ್ಮಿಕ ಕಾರ್ಯದ ಲಾಭವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಹುಡಗಿ ವಿರಕ್ತ ಮಠದ ಚನ್ನಬಸವ ಮಹಾಸ್ವಾಮಿಗಳು, ಹರಸೂರ ಮಠದ ಕರಿಸಿದ್ಧೇಶ್ವರ ಶ್ರೀ, ಚಂದ್ರಶೇಖರ ಶಾಸ್ತ್ರಿ, ನಾಗಭೂಷಣ ಶಾಸ್ತ್ರಿ ಮಾತನಾಡಿದರು.
ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ್ ಪಾಟೀಲ, ವೀರಶೈವ ಸಮಾಜದ ಅಧ್ಯಕ್ಷ ಶರಣಬಸಪ್ಪಾ ಪಾಟೀಲ, ನಿಜಲಿಂಗಪ್ಪ ಕೊರಳ್ಳಿ, ವಿಠ್ಠಲ ಜವಳಿ ಹುಮನಾಬಾದ, ಸೇರಿದಂತೆ ನಂದವಾಡಗಿ, ಜಾಲವಾದಿ ಸೇರಿ ಅನೇಕ ಭಕ್ತಾದಿಗಳು ಭಾಗವಹಿಸಿದ್ದರು.
ಭೀಮಳ್ಳಿಯ ಉದಯ ಶಾಸ್ತ್ರಿಗಳು ಪ್ರವಚನ ಮಹಾಮಂಗಲ ನೆರವೇರಿಸಿದರು. ಆಕಾಶವಾಣಿ ಕಲಾವಿದ ಶಿವಶರಣಪ್ಪಾ ಪೂಜಾರಿ, ಮಡಿವಾಳಯ್ಯಾ ಸ್ವಾಮಿ, ಗುರುಶಾಂತಯ್ಯಾ ಸ್ಥಾವರಮಠ, ತಬಲಾ ಬಸವರಾಜ ಆಳಂದ ಸಂಗೀತ ನೆಡೆಸಿಕೊಟ್ಟರು. ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಬುಕ್ಕೆ ನಿರೂಪಿಸಿದರು.
ಬೆಳಗಿನ ಜಾವ ಹನುಮಾನ ದೇವಸ್ಥಾನದ ಬಳಿಯಿರುವ ಅಗಸಿಯ ಮೂಲಕ ಶ್ರೀಗಳನ್ನು ಸ್ವಾಗತಿಸಿದ ಭಕ್ತಾದಿಗಳು ಅಡ್ಡಪಲ್ಲಕ್ಕಿಯಲ್ಲಿ ಶ್ರೀಗಳ ಉತ್ಸವ ಪ್ರಮುಖ ರಸ್ತೆಗಳಲ್ಲಿ ವಾದ್ಯ ವೈಭವ, ಸುಮಂಗಲೆಯರಿಂದ ಕುಂಬ ಕಳಸ, ಪುರವಂತರ ಕುಣಿತ, ಡೊಳ್ಳು ಬಾಜಿ ಭಜೆಂತ್ರಿಯ ಮೂಲಕ ಉತ್ಸವ ಶ್ರೀಮಠದ ವರೆಗೆ ನೆರವೇರಿತು.