ಮಠ, ದೇವಸ್ಥಾನ ಅಭಿವೃದ್ಧಿಗೆ 14.65 ಕೋಟಿ ಅನುದಾನ

ಬೀದರ ,ಜು.24-ರಾಜ್ಯದಲ್ಲಿರುವ ವಿವಿಧ ಸಮಾಜಗಳ ಮಠ, ದೇವಸ್ಥಾನ, ಸಂಘ ಸಂಸ್ಥೆಗಳು/ಟ್ರಸ್ಟ್‍ಗಳು, ಸಮುದಾಯ ಚಟುವಟಿಕೆಗಳು, ಅಭಿವೃದ್ದಿ/ಜೀರ್ಣೋಧ್ಧಾರ ಕಾರ್ಯಗಳು ಹಾಗೂ ಸಮುದಾಯ ಭವನ/ ವಿದ್ಯಾರ್ಥಿನಿಲಯ ಕಟ್ಟಡಗಳ ನಿರ್ಮಾಣಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಜಿಯವರು, ಬೀದರ ಲೋಕಸಭಾ ಕ್ಷೇತ್ರಕ್ಕೆ ಒಟ್ಟು 14 ಕೋಟಿ 65 ಲಕ್ಷ ಅನುದಾನ ನೀಡಿದ್ದಾರೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.
ಬೀದರ ಲೋಕಸಭಾ ಕ್ಷೇತ್ರದ ಮಠಗಳಾದ ಆಳಂದ ತಾಲ್ಲೂಕಿನ ಮಾದನಹಿಪ್ಪರಗಾದ ಶಿವಲಿಂಗೇಶ್ವರ ವಿದ್ಯಾವರ್ಧಕ ಸಂಸ್ಥೆಗೆ ರೂ. 50 ಲಕ್ಷ, ಚಿಂಚೋಳಿ ತಾಲ್ಲೂಕಿನ ಚಂದನಕೇರಾದ ಭೃಂಗಿ ಪಾಚೇಶ್ವರ ಸಂಸ್ಥಾನ ಕಟ್ಟಿಮಠ ಪ್ರತಿಷ್ಠಾನ ಟ್ರಸ್ಟ್ರಗೆ ರೂ. 25 ಲಕ್ಷ, ಕಾಳಗಿ ತಾಲ್ಲೂಕಿನ ಸುಗುರಿನ ರುದ್ರಮುನೀಶ್ವರ ಹಿರೇಮಠಕ್ಕೆ ರೂ. 25 ಲಕ್ಷ, ಚಿಂಚೋಳಿ ತಾಲ್ಲೂಕಿನ ನಿಡಗುಂದಾದ ಕಂಚಾಳಕುಂಟಿ ನಂದೀಶ್ವರ ಮಠಕ್ಕೆ ರೂ. 25 ಲಕ್ಷ, ಆಳಂದ ತಾಲ್ಲೂಕಿನ ನರೋಣಾದ ಚನ್ನಮಲ್ಲದೇವರು ಹೊಸಮಠಕ್ಕೆ 50 ಲಕ್ಷ, ಕಾಳಗಿ ತಾಲ್ಲೂಕಿನ ಕಲ್ಲಹಿಪ್ಪರಗಿ ಗುರು ಗಂಗಾಧರೇಶ್ವರ ಹಿರೇಮಠಕ್ಕೆ ಮಠಕ್ಕೆ 50 ಲಕ್ಷ, ಆಳಂದ ತಾಲ್ಲೂಕಿನ ಕಿಣ್ಣಿ ಸುಲ್ತಾನ ಗ್ರಾಮದ ಶಾಂತಲಿಂಗೇಶ್ವರ ಹಿರೇಮಠಕ್ಕೆ 30 ಲಕ್ಷ, ಆಳಂದ ತಾಲ್ಲೂಕಿನ ಬಂಗರಗಾದ ಚರಂತೇಶ್ವರ ಹಿರೇಮಠ ಕ್ಕೆ 50 ಲಕ್ಷ, ಅನುದಾನ ನೀಡಿದ್ದಾರೆ.
ಬೀದರ್À ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಗಡಿಗೌಡಗಾಂವ ಹಾವಗಿಲಿಂಗೇಶ್ವರ ಮಠಕ್ಕೆ 50 ಲಕ್ಷ, ಹಿರನಾಗಾಂವನ ಶಾಂತಲಿಂಗೇಶ್ವರ ಮಠಕ್ಕೆ 50 ಲಕ್ಷ, ಹುಮನಾಬಾದ ತಾಲ್ಲೂಕಿನ ಹಳ್ಳಿಕೇಡ (ಕೆ) ಗ್ರಾಮದ ಗುರುವರ್ಯರ ತತ್ವ ದರ್ಶನ ಪೀಠಕ್ಕೆ 25 ಲಕ್ಷ, ಕಮಠಾಣ ಗವಿಮಠಕ್ಕೆ 50 ಲಕ್ಷ, ಹಳ್ಳಿಖೇಡ (ಬಿ) ಗುರು ಸಿದ್ದೇಶ್ವರ ಸಂಸ್ಥಾನ ಚಿಕ್ಕಮಠಕ್ಕೆ 50 ಲಕ್ಷ, ಬಸವಕಲ್ಯಾಣ ತಾಲ್ಲೂಕಿನ ಪರ್ತಾಪೂರದ ಚನ್ನಮಲ್ಲಸ್ವಾಮಿಗಳು ಕೆಂಪೇನ್ ವಿರಕ್ತಮಠಕ್ಕೆ 50 ಲಕ್ಷ, ಹುಮನಾಬಾದ ತಾಲ್ಲೂಕಿನ ಹುಡಗಿಯ ಚನ್ನಮಲ್ಲೇಶ್ವರ ವಿರಕ್ತಮಠ ಟ್ರಸ್ಟ್‍ಗೆ 50 ಲಕ್ಷ, ಬಸವಕಲ್ಯಾಣ ತಾಲ್ಲೂಕಿನ ರಾಜೇಶ್ವರದ ಘನಲಿಂಗ ರುದ್ರಮುನಿ ಶಿವಾಚಾರ್ಯರು ಸಂಸ್ಥಾನ ಹಿರೇಮಠಕ್ಕೆ 50 ಲಕ್ಷ ಅನುದಾನ ಕಲ್ಪಿಸಿದ್ದಾರೆ.
ಕ್ಷೇತ್ರದ ದೇವಸ್ಥಾನಗಳಾದ ಕಾಳಗಿ ತಾಲ್ಲೂಕಿನ ಸುಂಠಾಣದ ಚನ್ನರುದ್ರಮುನಿಶ್ವರ ದೇವಸ್ಥಾನಕ್ಕೆ ರೂ. 50 ಲಕ್ಷ, ರುದ್ರಮುನೀಶ್ವರ ಗ್ರಾಮೀಣಾಭಿವೃದ್ದಿ ಟ್ರಸ್ಟ್, ಚಿತ್ತಾಪುರ ತಾಲ್ಲೂಕಿನ ಗುಂಡಗುರ್ತಿಯ ದ್ವಾದಶ ಜ್ಯೋತಿರ್ಲಿಂಗ್ ದೇವಸ್ಥಾನಕ್ಕೆ 50 ಲಕ್ಷ, ಭಾಲ್ಕಿ ತಾಲೂಕಿನ ಅಟರ್ಗಾ ಗ್ರಾಮದ ಮಹಾದೇವ ದೇವಸ್ಥಾನಕ್ಕೆ 20 ಲಕ್ಷ ಹಾಗೂ ಅಟ್ಟರ್ಗಾದ ವಿಠಲ ಮಂದಿರ ಅಟ್ಟರ್ಗಾ 20 ಲಕ್ಷ, ಭಾಲ್ಕಿ ನಗರದ ದೇಶಪಾಂಡೆ ಗಲ್ಲಿಯ ಬಲಭಿಮ್ ಹನುಮಾನ ದೇವಸ್ಥಾನಕ್ಕೆ 10 ಲಕ್ಷ, ಬೀದರ ತಾಲೂಕಿನ ಯಾಕತಪೂರ ಹನುಮಾನ ದೇವಸ್ಥಾನಕ್ಕೆ 10 ಲಕ್ಷ, ಔರಾದ ತಾಲೂಕಿನ ಡೋಣಗಾಂವ (ಎಮ್) ಗುರು ಹಾವಗಿಸ್ವಾಮಿ ಮಠ ಸಂಸ್ಥಾನ ಟ್ರಸ್ಟ್ ದೇವಸ್ಥಾನಕ್ಕೆ 50 ಲಕ್ಷ, ಬಸವಕಲ್ಯಾಣ ತಾಲೂಕಿನ ಪರ್ತಾಪೂರ ವೀರಭದ್ರೇಶ್ವರ ದೇವಸ್ಥಾನಕ್ಕೆ 50 ಲಕ್ಷ, ಹುಲಸೂರಿನ ವೀರಭದ್ರೇಶ್ವರ ಮಂದಿರಕ್ಕೆ 25 ಲಕ್ಷ, ಭಾಲ್ಕಿ ತಾಲ್ಲೂಕಿನ ಮೇಹಕರದ ಮಹಾದೇವ ಮಂದಿರಕ್ಕೆ 25 ಲಕ್ಷ, ಚಳಕಾಪೂರದ ಹನುಮಾನ ಮಂದಿರಕ್ಕೆ 50 ಲಕ್ಷ ಅನುದಾನ ನೀಡಲಾಗಿದೆ.
ಭಾಲ್ಕಿ ಪಟ್ಟಣದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 100 ಲಕ್ಷ ಅನುದಾನ ನೀಡಲಾಗಿದೆ.
ಸಂಸ್ಥೆ/ಟ್ರಸ್ಟಗಳಡಿ ಕಟ್ಟಡಗಳ ನಿರ್ಮಾಣ/ಜಿರ್ಣೋದ್ಧಾರಕ್ಕಾಗಿ ಕಾಳಗಿಯ ಗುರು ರುದ್ರಮುನೀಶ್ವರ ಜನಕಲ್ಯಾಣ ಪ್ರತಿಷ್ಟಾನ ಸಂಸ್ಥಾನ ಹಿರೇಮಠಕ್ಕೆ 25 ಲಕ್ಷ, ಹುಮನಾಬಾದ ತಾಲ್ಲೂಕಿನ ಎಸ್.ಜಿ.ಎಸ್.ಬಿ.ವ್ಹಿ ಟ್ರಸ್ಟ್ ಬಸವತಿರ್ಥ ಮಠಕ್ಕೆ 50 ಲಕ್ಷ, ಔರಾದ ತಾಲ್ಲೂಕಿನ ಜೊನ್ನಿಕೇರಿ ಗುರು ಪತ್ರಿಸ್ವಾಮಿ ಚಾರಿಟೇಬಲ್ ಟ್ರಸ್ಟ್‍ಗೆ 50 ಲಕ್ಷ, ಬಸವಕಲ್ಯಾಣ ತಾಲ್ಲೂಕಿನ ಕಿಟ್ಟಾದ ಗುರುಸಿದ್ದೇಶ್ವರ ಜನಕಲ್ಯಾಣ ಪ್ರತಿಷ್ಠಾನ ಟ್ರಸ್ಟ್‍ಗೆ 50 ಲಕ್ಷ, ಅನುದಾನ ನೀಡಿದ್ದಾರೆ.
ಶೈಕ್ಷಣಿಕ ಸಂಸ್ಥೆಗಳ ಅಭಿವೃದ್ದಿ, ವಿದ್ಯಾರ್ಥಿನಿಲಯ/ಕಟ್ಟಡಗಳ ನಿರ್ಮಾಣಕ್ಕಾಗಿ ಆಳಂದ ತಾಲೂಕಿನ ಪಡಸಾವಳಿ ಗ್ರಾಮದಲ್ಲಿರುವ ಶಿವಲಿಂಗೇಶ್ವರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಟ್ರಸ್ಟ್ ಕಮಿಟಿಗೆ 50 ಲಕ್ಷ, ಚಿಂಚೋಳಿ ತಾಲೂಕಿನ ರಟಕಲ್ ಗ್ರಾಮದ ಜಗದ್ಗೂರು ರೇವಣಸಿದ್ದೇಶ್ವರ ಸಾಂಸ್ಕøತಿಕ ಮತ್ತು ಶೈಕ್ಷಣೀಕ ಅಭಿವೃದ್ದಿ ಸಂಸ್ಥೆಗೆ 50 ಲಕ್ಷ, ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದ ರಂಭಾಪೂರಿ ಶಿಕ್ಷಣ ಪ್ರತಿಷ್ಥಾನಕ್ಕೆ 50 ಲಕ್ಷ ಅನುದಾನ ನೀಡಿದ್ದಾರೆ.
ಇದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಸಮಸ್ತ ಮಠಾಧೀಶರ ಪರವಾಗಿ, ದೇವಸ್ಥಾನಗಳ ಆಡಳಿತ ಮಂಡಳಿಯ ಪರವಾಗಿ, ಎಲ್ಲಾ ಸಮುದಾಯದ ಮುಖಂಡರ ಪರವಾಗಿ, ವಿವಿಧ ಟ್ರಸ್ಟ್, ಸಂಘಸಂಸ್ಥೆಗಳ ಹಾಗೂ ಶೈಕ್ಷಣೀಕ ಸಂಸ್ಥೆಗಳ ಮುಖಂಡರ ಪರವಾಗಿ ಭಗವಂತ ಖೂಬಾ ಅವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.