`ಮಠ’ ಅವರಿಗೆ `ಖುಷಿ’ ಕೊಟ್ಟ ಕಿರುಚಿತ್ರ

*ದಿಯಾ ಖ್ಯಾತಿಯ ಖುಷಿ ರವಿ, ಎಂಕೆ ಮಠ ನಟನೆಯ ” ಎವ್ವೆರಿಥಿಂಗ್ ಫಾಸಿಬಲ್ ” ’ ಕಿರುಚಿತ್ರ ಬಿಡುಗಡೆಯಾಗಿದ್ದು ಮಠ ಅವರಲ್ಲಿ ಖುಷಿ ಹೆಚ್ಚಿಸಿದೆ. ಅಮೇಜಾನ್ ಒಟಿಟಿಯಲ್ಲಿಯೂ ಲಭ್ಯವಿದೆ. ದೇವರನಾಡಲ್ಲಿ ಚಿತ್ರದಲ್ಲಿ ಇಕ್ಷ್ವಾಕು ರಾಮ್ ಸಾರಥ್ಯದ  ಕಿರುಚಿತ್ರ ಇದಾಗಿದೆ.

 ನಾಯಕಿ ಖುಷಿ ರವಿ ಮಾತಾನಾಡಿ, ಸೈನ್ಸ್ ಫಿಕ್ಷನ್ ಜಾನರ್ ಚಿತ್ರ ಶಾರ್ಟ್ ಮೂವೀ. ತುಂಬಾ ಅದ್ಭುತ ಕಾನ್ಸೆಪ್ಟ್ ಇದೆ ಪ್ರತಿಯೊಬ್ಬರು ನೋಡಿ ಬೆಂಬಲ ಕೊಡಿ ಎಂದರು.

 ಕಿರುಚಿತ್ರಕ್ಕೆ ಪೂರ್ಣಿಮಾ ಮನೋಜ್, ಯಶ್ವಿಕ್ ನಿರ್ಮಾಣ ಮಾಡಿದ್ದು, ಎರಿಕ್ ವಿಜೆ ಛಾಯಾಗ್ರಾಹಣ ಜೊತೆಗೆ ಸಂಕಲನದ ಜವಾಬ್ದಾರಿ ನಿಭಾಯಿಸಿದ್ದು, ಸ್ವಾಮಿನಾಥನ್ ಆರ್. ಕೆ. ಸಂಗೀತ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಸಿನಿಮಾಕ್ಕಿದ್ದು, ನಮ್ಮ ಫ್ಲಿಕ್ಸ್, ಅಮೇಜಾನ್, ಏರ್ ಟೆಲ್ ಎಕ್ಟ್ರೀಮ್‌ ಒಟಿಟಿಯಲ್ಲಿ ಬಿಡುಗಡೆಯಾಗಿದೆ.