ಮಠದ ಕುರುಬರಹಟ್ಟಿಯಲ್ಲಿ ಗಾಂಧಿಸ್ಮರಣೆ

ಚಿತ್ರದುರ್ಗ. ಅ.೧೩: ಮಠದ ಕುರುಬರಹಟ್ಟಿ ಚೋಳ ಘಟ್ಟ ಸಿದ್ಧಾಪುರ ಗ್ರಾಮ ಪಂಚಾಯಿತಿಗಳ ಕಾಂಗ್ರೆಸ್ ಪ್ರಾಜೆಕ್ಟ್ ಪ್ರತಿನಿಧಿ ಗ್ರಾಮ ಪಂಚಾಯಿತಿ ಮಟ್ಟದ ಸಮಿತಿಗಳ ರಚನೆ ,ಎಪ್ಪತ್ತೈದನೆ ಸ್ವಾತಂತ್ರ‍್ಯ ಸಂಭ್ರಮ ಹಾಗೂ ಮಹಾತ್ಮಾ ಗಾಂಧಿ ಜನ್ಮದಿನದ ಅಂಗವಾಗಿ ರಾಷ್ಟ್ರಪಿತ ಗಾಂಧೀಜಿ ಸ್ಮರಣೆ ಕಾರ್ಯಕ್ರಮವನ್ನು ಮಠದ ಕುರುಬರಹಟ್ಟಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮವನ್ನು ಉದ್ಘಾಟಿಸಿದ  ಕೆಪಿಸಿಸಿ ಕಾರ್ಯದರ್ಶಿ ಕಾಂಗ್ರೆಸ್ ಮುಖಂಡರಾದ ಹನುಮಲಿ ಷಣ್ಮುಖಪ್ಪ ಮಾತನಾಡಿ ಕಾಂಗ್ರೆಸ್ ಪಕ್ಷದ ಸಾಧನೆ ಭಾರತೀಯ ಜನತಾ ಪಕ್ಷದ ವೈಫಲ್ಯಗಳನ್ನು ಜನತೆಯ ಮುಂದೆ ಎತ್ತಿ ಹಿಡಿಯುವ ಪ್ರಯತ್ನವನ್ನು ಮಾಡಿದರು.ಭಾರತ ರಾಷ್ಟ್ರಕ್ಕೆ ಸ್ವಾತಂತ್ರ‍್ಯ ಬಂದು ಎಪ್ಪತ್ತೈದು ವರ್ಷ ಸುವರ್ಣ ಮಹೋತ್ಸವವನ್ನು ಈ ದೇಶ ಆಚರಿಸುವಂತೆ ಸಂದರ್ಭದಲ್ಲಿ ಅರುವತ್ತು ವರ್ಷಗಳ ಕಾಲ ಈ ದೇಶವನ್ನು ಮುನ್ನಡೆಸುವಂತಹ ಕಾಂಗ್ರೆಸ್ ಪಕ್ಷವು ಈ ದೇಶಕ್ಕೆ ಸ್ವಾತಂತ್ರ‍್ಯ ಕೊಡಿಸುವುದರ ಜೊತೆಗೆ ಅನೇಕ ತ್ಯಾಗ ಬಲಿದಾನಗಳನ್ನು ನೀಡಿದೆ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಇತರೆ ಸ್ವಾತಂತ್ರ ಸೇನಾನಿಗಳನ್ನು ಸ್ಮರಣೆ ಮಾಡುತ್ತಾ ಪಂಡಿತ್ ಜವಾಹರ್ ಲಾಲ್ ನೆಹರೂರವರ ಕಾಲದಿಂದ ನೆಹರೂರವರ ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾಜಿ, ರಾಜೀವ್ ಗಾಂಧಿ, ಪಿ ವಿ ನರಸಿಂಹರಾವ್ ಹಾಗೂ ಮನ್ ಮೋಹನ್ ಸಿಂಗ್ ರವರ ಆಳ್ವಿಕೆ ವರೆಗೂ ಕಾಂಗ್ರೆಸ್ ಪಕ್ಷವು ಈ ದೇಶಕ್ಕೆ ಅನೇಕ ಕೊಡುಗೆಗಳನ್ನು ನೀಡಿದೆ ಎಂದು ಕಾಂಗ್ರೆಸ್ ಸಾಧನೆಗಳನ್ನು ಕೊಂಡಾಡಿದರು.ಈ ಸಂದರ್ಭದಲ್ಲಿ ಮಾಜಿ ತಾಲ್ಲೂಕು ಪಂಚಾಯ್ತಿ ಸದಸ್ಯೆ ರಾಧಮ್ಮ ಜೆ , ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ನಿಗಮದ ಮಾಜಿ ಅಧ್ಯಕ್ಷ ಓ ಶಂಕರ್ , ಡಿಸಿಸಿ ಕಾರ್ಯದರ್ಶಿ ಎ ಎಂ ಮರುಳಾರಾಧ್ಯ , ವೃತ್ತಿಪರ ವಿಭಾಗದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಹಡಿ ಶಿವಮೂರ್ತಿ ಇದ್ದರು.