ಮಠಗಳ ಏಳಿಗೆಗಾಗಿ ನಿರಂತರವಾಗಿ ಶ್ರಮಿಸುವ ಮಹಾಚೇತನ ಶ್ರೀಸಂಗನಬವಶ್ರೀಗಳು

ಸಂಜೆವಾಣಿ ವಾರ್ತೆ
ಕುರುಗೋಡು .ನ.24  ಮಠ-ಮಾನ್ಯಗಳ ಏಳಿಗೆಗಾಗಿ  ಹಗಲಿರುಳು ನಿರಂತರವಾಗಿ ಶ್ರಮಿಸಿದ ಮಹಾಚೇತನ ಹಾಲ್‍ಕೆರೆ ಡಾ. ಸಂಗನಬಸವಮಹಸ್ವಾಮಿಗಳು ಎಂದು ಕುರುಗೋಡು ಕೊಟ್ಟೂರುಸ್ವಾಮಿಮಠದ ಅರ್ಚಕ ವಿಜಯಕುಮಾರಶಾಸ್ತಿ ತೀವ್ರ ಸಂತಾಪ ವ್ಯಕ್ತಪಡಿಸಿದರು.
ಅವರು ಪಟ್ಟಣದ ಕೊಟ್ಟೂರುಸ್ವಾಮಿಮಠದ ಆವರಣದಲ್ಲಿ ಹಾಲ್‍ಕೆರೆ ಡಾ. ಅಭಿನವ ಸಂಗನಬಸವಮಹಾಸ್ವಾಮಿಗಳ ನಿಧನದಿಂದಾಗಿ ಭಕ್ತರಿಂದ ಹಮ್ಮಿಕೊಳ್ಳಲಾಗಿದ್ದ ಸಂತಾಪಸಭೆಯಲ್ಲಿ ಭಾವುಕರಾಗಿ ಮಾತನಾಡಿದ ಅವರು, ಹಂಪಿಹೇಮಕೂಟ, ಬಳ್ಳಾರಿ ಮತ್ತು ಹಾಲಕೆರೆಮಠ, ಬಾದಾಮಿ ಶಿವಯೋಗಮಂದಿರದ ಅದ್ಯಕ್ಷರು ಆದ ಡಾ. ಸಂಗನಬಸವ ಮಹಸ್ವಾಮಿಗಳು ಲಿಂಗೈಕ್ಯರಾಗಿರುವುದು ಭಕ್ತ ಸಮೂಹದಲ್ಲಿ ನೋವನ್ನುಂಟು ಮಾಡಿದೆ ವಿವಿದ ರಂಗಗಳಲ್ಲಿ ನಿಶ್ವಾರ್ಥವಾಗಿ ಸೇವೆಸಲ್ಲಿಸಿದ ಡಾ.ಶ್ರೀಸಂಗನಬಸವಮಹಾಸ್ವಾಮಿಗಳು ಸಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕವಾಗಿ ಅಪಾರ ಪ್ರಮಾನದಲ್ಲಿ ಸೇವೆಸಲ್ಲಿಸಿ ತಮ್ಮ ಛಾಪುಮೂಡಿಸಿದ್ದಾರೆ ಎಂದು ಅವರ ಕೊಡುಗೆಗಳನ್ನು ಸ್ಮರಿಸಿದರು.
ಚಾನಾಳುಅಂಬರೇಷ್ ಮಾತನಡಿ, ಮಠಗಳ ಜವಾಬ್ದಾರಿಯನ್ನು  ಭಕ್ತರ ಸಮೂಹದೊಂದಿಗೆ ಸಮರ್ಥವಾಗಿ ನಿಭಾಯಿಸುತ್ತಿದ್ದ, ಡಾ. ಸಂಗನಬಸವಮಹಾಸ್ವಾಮಿಗಳು ನಾಡಿಬ ಬಡವರು, ಸೌಲಭ್ಯವಂಚಿತ ಜನಸಾಮಾನ್ಯರ ಏಳಿಗೆಗಾಗಿ ಶ್ರಮಿಸಿದ ಕೀರ್ತಿ ಅಪ್ಪಾಜಿಯವರಿಗೆ ಸಲ್ಲುತ್ತಿದೆ ಎಂದು ಭಾವುಕರಾಗಿ ನುಡಿದರು. ಡಾ. ಸಂಗನಬಸವ ಮಹಾಸ್ವಾಮಿಗಳ ಅಗಲಿಕೆಯಿಂದಾಗಿ ದುಃಖ ಬರಿಸುವ ಶಕ್ತಿ ಆ ಭಗವಂತ ಎಲ್ಲರಿಗೂ ಕರುಣಿಸಲಿ ಎಂದು ಸಂತಾಪ ಸೂಚಿಸಿದರು. ಸಂತಾಪ ಸಭೆಯಲ್ಲಿ ಕುರುಗೋಡು ವೀರಶೈವ ಸಮಾಜದ ಮುಖಂಡ ತೆಂಗಿಮಲ್ಲೇಶಪ್ಪ, ಖಾದೀ ಗ್ರಾಮೋದ್ಯೋಗ ಮಂಡಳಿಯ ಸಿಬ್ಬಂದಿವರ್ಗದವರು, ಮತ್ತು ವಿಜಯಕುಮಾರಶಾಸ್ತಿಯವರ ಕುಟುಂಬವರ್ಗದವರು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿದ್ದರು..