ಮಠಗಳೆಂದರೆ ಜೀವಂತ ಮಂದಿರಗಳಿದ್ದಂತೆ


ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಮೇ.16 :- ಬಸವಣ್ಣನವರ ತತ್ವ ಸಿದ್ದಾಂತಗಳನ್ನು ಚನ್ನವೀರಸ್ವಾಮಿ ಅಳವಡಿಸಿಕೊಂಡು, ಸಮಾಜದಲ್ಲಿ ಅನಿಷ್ಠ ಪದ್ದತಿಗಳನ್ನು ಹೋಗಲಾಡಿಸಿದ ಮಹಾನ್ ಸಂತ ಎಂದು ಡಾ.ನಾಡೋಜ ಶ್ರೀ ಅನ್ನದಾನೇಶ್ವರ ಮಹಾಶಿವಯೋಗಿಗಳು ಮುಂಡರಿಗಿ ತಿಳಿಸಿದರು.
ತಾಲೂಕಿನ ಅರಸನಾಳು ಗ್ರಾಮದ ಜಂಗಮ ಕ್ಷೇತ್ರ ಲಿಂಗನಾಯಕನಹಳ್ಳಿ ಚನ್ನವೀರಸ್ವಾಮಿ ಶಾಖಾ ಮಠದ ಜೀರ್ಣೋಧ್ದಾರ ಕಾರ್ಯಕ್ರಮ ಹಾಗೂ ಪುರಾಣ ಮಂಗಲೋತ್ಸವ, ಸಾಮೂಹಿಕ ವಿವಾಹ  ನೇತೃತ್ವ ವಹಿಸಿ ಬುಧವಾರ ಮಾತನಾಡಿದರು. ಮನುಷ್ಯನು ಯಾವುದೇ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡು ನಿಷ್ಠೆ, ಶ್ರಧ್ದಾ ಭಕ್ತಿಯಿಂದ ನಿರ್ವಹಿಸಿದಲ್ಲಿ ಭಗವಂತನ ಕೃಪೆಗೆ ಪಾತ್ರನಾಗುತ್ತಾನೆ. ಚನ್ನವೀರ ಸ್ವಾಮಿಗಳು ಮನುಷ್ಯನ ಜನನವಾಗುವುದು ಪುಣ್ಯದ ಫಲವಾಗಿದೆ, ಪ್ರಗತಿಯನ್ನು ಸಾಧಿಸದ ಹೊರತು ಏನನ್ನೂ ಜಯಿಸಲಾರ ಎನ್ನುವ ತತ್ವವನ್ನು ಹೊಂದಿ ಸಮಾಜದಲ್ಲಿನ ಅನಿಷ್ಠ ಪದ್ದತಿಗಳನ್ನು ಹೋಗಲಾಡಿಸಿ, ಸರ್ವಧರ್ಮೀಯರ ಸಮಾನತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಶರಣ ಎಂದರು.
ಗುಡ್ಡದ ವಿರಕ್ತ ಮಠ ಚನ್ನಬಸವ ಶಿವಯೋಗಿ ಸ್ವಾಮಿ ಮಾತನಾಡಿ :- ಮಠಗಳೆಂದರೆ ಜೀವಂತ ಮಂದಿರಗಳಿದ್ದಂತೆ, ನಾಡಿನಲ್ಲಿ ಸಾವಿರಾರು ಮಠಗಳು , ಉಚಿತವಾಗಿ ಶಿಕ್ಷಣ ಮತ್ತು ಅನ್ನದಾಸೋಹಗಳನ್ನು ನಡೆಸುತ್ತಾ ದೀನದಲಿತ ಮಕ್ಕಳ ಬಾಳಿಗೆ ಬೇಳಕನ್ನು ನೀಡುತ್ತಾ ಬಂದಿವೆ, ಈ ಶಾಖಾ ಮಠವು ನಾಡಿನಲ್ಲಿ ಶಿಕ್ಷಣ ಅನ್ನದಾಸೋಹಗಳನ್ನು ನಡೆಸುತ್ತಾ ಮುಂದಿನ ದಿನಗಳಲ್ಲಿ ಉನ್ನತ ಮಟ್ಟದಲ್ಲಿ ಬೆಳೆಯಲು ಸಹಕರಿಸಿರಿ, ಗ್ರಾಮೀಣ ಭಾಗದಲ್ಲಿ ಇಂದಿಗೂ ಜಾತಿಪದ್ದತಿಗಳು ಜೀವಂತವಾಗಿವೆ, ಆ ರೀತಿಯ ಬಾಲಿಷ ಧೋರಣೆಯನ್ನು ಕಾಣದೆ, ಸಮಾಜದಲ್ಲಿ ಎಲ್ಲರೂ ಒಂದೇ ರೀತಿಯ ವಾತಾವರಣ ನಿರ್ಮಿಸಿಕೊಂಡು, ಶರಣ ಚನ್ನವೀರಸ್ವಾಮಿಯ ತತ್ವ ಸಿದ್ದಾಂತಗಳನ್ನು ರೂಢಿಸಿಕೊಳ್ಳಿ, ಆಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಶ್ರಮವಹಿಸಿ ದುಡಿಯಿರಿ ಎಂದರು.
ವಕೀಲ ಪ್ರಕಾಶ್ ಪಾಟೀಲ್ ಮಾತನಾಡಿ :- ಒಂದೂವರೆ ವರ್ಷಗಳ ಸತತ ಪ್ರಯತ್ನ ಮತ್ತು ಊರಿನ ಎಲ್ಲಾ ಸಮಾಜದವರ ಸಹಕಾರದಿಂದ, 65 ಲಕ್ಷಕ್ಕೂ ಅಧಿಕ ಖರ್ಚಿನೊಂದಿಗೆ ಚನ್ನವೀರಸ್ವಾಮಿಗಳ ದೇವಸ್ಥಾನವು ಯಶಸ್ವಿಯಾಗಿ ನೆರವೇರಿದೆ. ಇಂತಹ ಧಾರ್ಮಿಕ ಕಾರ್ಯದಲ್ಲಿ ಅತೀ ಕಡುಬಡವನಾದ ಲಕ್ಕಪ್ಪನು ಕೇವಲ ಅರ್ಧ ಎಕ್ಕರೇ ಜಮೀನು ಹೊಂದಿದ ವ್ಯಕ್ತಿಯ ದೇವಸ್ಥಾನ ನಿರ್ಮಾಣಕ್ಕಾಗಿ 45 ಸಾವಿರ ರೂಗಳನ್ನು ದೇಣಿಗೆ ನೀಡಿದ್ದಾನೆ ಎಂದು ಸ್ಮರಿಸಿ, ಈ ರೀತಿಯ ನಿಸ್ವಾರ್ಥ ಸೇವೆಗಳು ನೀಡಲು ಪ್ರತಿಯೊಬ್ಬರ ಮುಂದೆ ಬಂದಲ್ಲಿ ನಮ್ಮ ಗ್ರಾಮದ ಅಭಿವೃಧ್ದಿಗಾಗಿ ಯಾರ ಸಹಕಾರವಿಲ್ಲದೇ ಬೆಳೆಯಬಹುದು ಎಂದರು.
ಡಾ.ನಾಡೋಜ ಶ್ರೀ ಅನ್ನದಾನೇಶ್ವರ ಮಹಾಶಿವಯೋಗಿಗಳು ಮುಂಡರಿಗಿ, ಗುಡ್ಡದ ವಿರಕ್ತ ಮಠ ಚನ್ನಬಸವ ಶಿವಯೋಗಿ ಸ್ವಾಮಿ, ಚನ್ನವೀರ ಶಿವಯೋಗಿ ಸ್ವಾಮಿ ಲಿಂಗನಾಯಕನಹಳ್ಳಿ, ಶಾಂತಲಿಂಗ ದೇಶೀಕೇಂದ್ರ ಸ್ವಾಮಿಗಳು ಅರಸೀಕೆರೆ, ಶಿವಕುಮಾರಸ್ವಾಮಿ ದಳವಾಹಿಮಠ ಹಾವನೂರು, , ಡಿ ಕೊಟ್ರಬಸಪ್ಪ ಚನ್ನವೀರಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ, ವಕೀಲ ಪ್ರಕಾಶ್ ಪಾಟೀಲ್, ಶ್ರೀಕಾಂತರೆಡ್ಡಿ, ಹೆಚ್ ರುದ್ರಪ್ಪ, ಗಿರಿರಾಜರೆಡ್ಡಿ, ಶ್ರೀಧರ, ಡಿ ವಿಠೋಬಪ್ಪ, ಬಸವರಾಜಪ್ಪ ಬಣಕಾರ, ಕೂಭ್ಯಾನಾಯ್ಕ ಅಧ್ಯಕ್ಷರು ಕುಂಚೂರು ಗ್ರಾಮ ಪಂಚಾಯ್ತಿ, ಪ್ರಭಾವತಿ ಕೃಷ್ಣ ಪಾಟೀಲ್, ಜಗನ್ನಾಥ ರೆಡ್ಡಿ ಹಾಗೂ ಇತರರಿದ್ದರು.