ಮಠಗಳು ಸಾಂಸ್ಕøತಿಕ ಕೇಂದ್ರವಾಗಲಿ: ಡಾ.ಜಯದೇವಿ

ಕಲಬುರಗಿ:ಜು.18:ಹನ್ನೆರಡನೆಯ ಶತಮಾನದ ಶರಣ ಚಳವಳಿಯಲ್ಲಿ ಶರಣೆಯರ ಕೊಡುಗೆ ಕೂಡಾ ಅಪಾರ ಸಾಮಾಜಿಕ ನ್ಯಾಯ,ಸಮಸಮಾಜದ ನಿರ್ಮಾಣದ ದೃಷ್ಟಿಯಿಂದ ಚಳವಳಿ ಸಾಹಿತ್ಯವನ್ನು ಏಕಕಾಲಕ್ಕೆ ಕಟ್ಟಿ ದವರು.ವಚನಕಾರ್ತಿಯರು ಅವರಿಗೆ ಬೆನ್ನೆಲುಬಾಗಿ ನಿಂತು ಮನೆ ಮತ್ತು ಸಮಾಜದ ಏಳಿಗೆಗೆ ಶ್ರಮಿಸಿದ ಕಾಯಕ ಜೀವಿಗಳು ಹೀಗಾಗಿ ಮಠಗಳು ಕೇವಲ ಧರ್ಮಕ್ಕೆ ಸೀಮಿತವಾಗದೇ ಸಾಂಸ್ಕೃತಿಕ ಕೇಂದ್ರಗಳಾಗ ಬೇಕೆಂದು ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯೆ ಡಾ.ಜಯದೇವಿ ಗಾಯಕವಾಡ ಅಭಿಮತ ವ್ಯಕ್ತಪಡಿಸಿದರು.
ಮುಕ್ತಂಪೂರದ ಗದ್ದುಗೆ ಮಠದಲ್ಲಿ ಸೊಮವಾರ ಅಮವಾಸ್ಯೆದಂದು ಸದ್ಭಾವನ ಗೋಷ್ಠಿಯಲ್ಲಿ ವಚನ ಕಾರ್ತಿಯರ ಪರಂಪರೆ ಕುರಿತು ಮಾತನಾಡಿ ಮಹಿಳಾ ಅಭಿವ್ಯಕ್ತಿ ಸ್ವಾತಂತ್ರ್ಯ ಬಸವಣ್ಣನವರು ನೀಡಿದ್ದರಿಂದ ಮಹಿಳೆ ಮುಕ್ತವಾದ ಅವಕಾಶ ದೊರೆಯಿತು.ಅಕ್ಕಮ್ಮ, ಅಕ್ಕಮಹಾದೇವಿ,ಸೂಳೆಸಂಕವ್ವೆ,ಕಾಳವ್ವೆ,ಗಂಗಾಂಬಿಕೆ, ನೀಲಾಂಬಿಕೆ,ಸತ್ಯಕ್ಕ,ಮೊದಲಾದ ಮೂವತ್ತು ಮೂರು ವಚನಕಾರ್ತಿಯರ ಕೊಡುಗೆ ಇಂದಿಗೂ ಅನುಕರಣೀ ಯವೆಮದರು
ಅತಿಥಿಯಾಗಿ ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ ಮಾತನಾಡಿ ಶರಣರು ಹಾನಗಲ್ಲ ಕುಮಾರಸ್ವಾಮಿಗಳು ಲಿಂ.ಸಿದ್ದಾರಾಮೇಶ್ವರರ ಸಾಧನೆಯ ಮೂಲಕ ಯುವ ಸ್ವಾಮೀಜಿಗಳಾದ ಚರಲಿಂಗೇಶ್ವರರು ಗದ್ದುಗೆ ಮಠದ ವಿಸ್ತಾರಮಾಡುವ ಮೂಲಕ ಸಾಮಾಜಿಕ,ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆ ಮೂಲಕ ಭಕ್ತಾದಿಗಳ ಹೃದಯ ಗೆದ್ದು ಇಂದು ಹಲವು ಯೋಜನೆ ಹಾಕಿದ್ದು ಸ್ಮರಣಾರ್ಹ.ವಚನಕಾರ್ತಿಯರರ ಪರಂಪರೆ ನಮ್ಮ ವಚನ ಸಾಹಿತ್ಯ ಮಹತ್ವದ ಭಾಗವೆಂದರು ಸಾನಿಧ್ಯ ವಹಿಸಿದ ಪೂಜ್ಯ ಚರಲಿಂಗ ಮಹಾಸ್ವಾಮಿಗಳು ನಮ್ಮ ಭವ್ಯ ಪರಂಪರೆ ಹೊಂದಿದ ನಾಡು ಗದ್ದುಗೆ ಮಠದ ಇತಿಹಾಸ,ಚರಿತ್ರೆ ಜೊತೆಗೆ ನಮ್ಮ ಸಮಾಜದ ಅಭಿವೃದ್ಧಿ ಆಗಬೇಕು ಆ ನಿಟ್ಟಿನಲ್ಲಿ ನಮ್ಮ ಮಠ ಕೆಲಸ ಮಾಡಲಿದೆ. ನಾವು ಕೇವಲ ಜಾತಿಗೆ ಸೀಮಿತವಾಗದೇ ಭಕ್ತರ, ಮನುಕುಲ ಉದ್ದಾರವೇ ನಮ್ಮ ಗುರಿಯಾಗಿದೆ ಎಂದರು
ಅಕ್ಕನ ಬಳಗದಿಂದ ಭಜನೆ,ಪ್ರಾರ್ಥನೆ ಗೀತೆ ಸ್ವಾಗತವನ್ನು ಡಾ.ನಾನಾಗೌಡ ಪಾಟೀಲ,ಕುಮಾರಿ ಸುಷ್ಮಾ ವಾಗನಕೇರಿ ನಿರೂಪಿಸಿ ವಂದಿಸಿದರು.