ಮಠಂ ಗುರುಪ್ರಸಾದ್‍ರಿಂದ ಪ್ಲವನಾಮ ಸಂವತ್ಸರದ ಪಂಚಾಂಗ ವಿಶ್ಲೇಷಣೆ

ಬಳ್ಳಾರಿ, ಏ.16 : ಬಳ್ಳಾರಿ ಕಲ್ಚರಲ್ ಅಕ್ಟಿವಿಟೀಸ್ ಅಸೋಸಿಯೇಷನ್ ಅಧ್ಯಕ್ಷ ಶೀಲಾ ಬ್ರಹ್ಮಯ್ಯ ಅವರ ನೇತೃತ್ವದಲ್ಲಿ ಶ್ರೀ ಪ್ಲವನಾಮ ಸಂವತ್ಸರದ ಪಂಚಾಂಗ ವಿಶ್ಲೇಷಣೆಯನ್ನು ಲೇಖಕ ಪಂಡಿತ್ ಮಠಂ ಗುರುಪ್ರಸಾದ್ ಬಿಡುಗಡೆ ಮಾಡಿದ್ದಾರೆ.
ಪಂಚಾಂಗ ಎಂದರೆ ತಿಥಿ, ವಾರದ, ನಕ್ಷತ್ರ, ಯೋಗ, ಕರಣ. ಈ ಐದನ್ನು ತಿಳಿಸುವುದು ಶ್ರೀ ಫ್ಲವನಾಮ ಸಂವತ್ಸರದ ಪಂಚಾಂಗದ ಪ್ರಕಾರ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರು ಜನರ ಸೇವೆಗೆ ಅಂಕಿತವಾಗುತ್ತಾರೆ. ಕುಲ, ಮತ, ಪ್ರಾಂತಗಳ ಬೇಧಗಳು ಕಡಿಮೆಯಾಗುತ್ತವೆ.ಆಡಳಿತವು ಚೆನ್ನಾಗಿರುತ್ತದೆ. ಎಲ್ಲಾ ವರ್ಗದ ಜನರಿಗೆ ಸರ್ಕಾರದಿಂದ ನ್ಯಾಯವು ದೊರಕುತ್ತದೆ.ಹಿರಿಯ ನಾಗರೀಕರಿಗೆ ಸರ್ಕಾರವು ಉತ್ತಮ ಯೋಜನೆಗಳನ್ನು ಒದಗಿಸಿಕೊಡುತ್ತದೆ. ಧನ, ಧಾನ್ಯ, ಸಮೃದ್ಧಿ ಚೆನ್ನಾಗಿರುತ್ತದೆ. ವ್ಯವಸಾಯವು ಕಳೆದ ವರ್ಷಕ್ಕಿಂತ ಚೆನ್ನಾಗಿರುತ್ತದೆ. ಭೂಮಿಗೆ ಬಂಗಾರದಂತ ಬೆಲೆಲ ಬರುತ್ತದೆ. ಕಠಿಣವಾದ ಕಾನೂನುಗಳು ಜಾರಿಗೆ ಬರುತ್ತವೆ.ವ್ಯವಸಾಯಕ್ಕೆ ಅನುಕೂಲಕರವಾದ ಮಳೆ ಬರುತ್ತದೆ.ರೈತರಿಗೆ ಸರ್ಕಾರದಿಂದ ಸರಿಯಾದ ಬೆಲೆ ಲಭಿಸುತ್ತದೆ. ವ್ಯವಸಾಯವು ಒಳ್ಳೆಯ ಲಾಭದಾಯಕವಾಗಿರುತ್ತದೆ. ಈ ಸಂವತ್ಸರವೂ ಕೂಡಾ ಇಸ್ರೋ ಸಂಸ್ಥೆ ಅಭಿವೃದ್ಧಿಯ ಪಥದಲ್ಲಿ ಹಾಗೂ ವಿಜಯಪಥದಲ್ಲಿ ಸಾಗುತ್ತದೆ.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಅವಿನೀತಿಗೆ ಸ್ಥಾನವಿರುವುದಿಲ್ಲ.ಪ್ರಪಂಚದಲ್ಲಿ ಭಾರತವು “ಸೂಪರ್ ಪವರ್” ಆಗುತ್ತದೆ. ಭಾರತಕ್ಕೆ ಪ್ರಪಂಚದ ದೇಶಗಳ ಸಹಾಯ, ಸಹಕಾರಗಳು ಲಭಿಸುತ್ತವೆ.ಭಾರತ ಹಾಗೂ ಅಮೇರಿಕಾ ದೇಶದ ನಡುವಿನ ಸಂಬಂಧಗಳು ಬಲಪಡುತ್ತವೆ. ಆರೋಗ್ಯ ವಿಷಯದಲ್ಲಿ ಜನರು, ಜಾಗ್ರತೆ, ಸ್ವಚ್ಛತೆಯನ್ನು ಕಾಯ್ದುಕೊಳ್ಳುವುದರ ಮೂಲಕ ಕೊರೋನಾ ರೋಗದಿಂದ ಪಾರಾಗುತ್ತಾರೆ.ವಾಣಿಜ್ಯ ಬ್ಯಾಂಕುಗಳ ಆದಾಯ ಹಾಗೂ ಅಭಿವೃದ್ಧಿ ಹೆಚ್ಚುತ್ತದೆ ಎಂದು ಮಠಂ ಗುರುಪ್ರಸಾದ್ ಅವರು ವಿಶ್ಲೇಸಿದ್ದಾರೆ.