ಮಟ್ಕಾ ದಂಧೆಗೆ ಕಡಿವಾಣ ಎಂದು?

@h18 = ಎಚ್ಚರಗೊಳ್ಳದ ಪೋಲಿಸ್ ಇಲಾಖೆ : ಜೂಜಾಟ ದಂಧೆಗೆ ವಿದ್ಯಾರ್ಥಿಗಳು ಬಲಿ
ದೇವಪ್ಪ ಹಂಚಿನಾಳ
ಗಬ್ಬೂರು.ನ.12- ದೇವದುರ್ಗ ತಾಲೂಕು ಹಿಂದೂಳಿದ ಪ್ರದೇಶವೆಂದು ಹಲವು ವರ್ಷಗಳಿಂದ ಘೋಷಣೆಯಾಗುತ್ತಲೇ ಬಂದಿರುವ ತಾಲೂಕಿನಲ್ಲಿ ರೈತಾಪಿ ವರ್ಗ ಜೂಜಾಟಕ್ಕೆ ಬಲಿಯಾಗುತ್ತಿರುವುದು ದುರಂತ. ಜನರಿಗೆ ತಮ್ಮ ಜೀವನ ಸಾಗಿಸಲು ದುಡಿಮೆ ಸಿಗದ ಕಾರಣ ಮಟ್ಕಾ ಜೂಜಾಟಕ್ಕೆ ಜನರು ಬಲಿಯಾಗುತ್ತಿದ್ದಾರೆ. ಅಂಕಿಗಳಿಗೆ ಹಣ ತುಂಬುವ ಮೂಲಕ ಲಕ್ಷಾಂತರ ರೂ. ಕಳೆದುಕೊಳ್ಳುತ್ತಿದ್ದಾರೆ.
ಮಟ್ಕಾ ದಂಧೆಗೆ ಹೈಟೆಕ್ ಸ್ಪರ್ಷ: ಮಟ್ಕಾ ದಂಧೆಕೋರರಿಗೆ ಕಡಿವಾಣ ಹಾಕಲು ಪೋಲಿಸ್ ಇಲಾಖೆ ಕೆಲವು ಕ್ರಮಗಳನ್ನು ತೆಗೆದುಕೊಂಡ ಹಿನ್ನೆಲೆಯಲ್ಲಿ ಬುಕ್ಕಿಗಳು ಹೈಟೆಕ್ ತಂತ್ರಜ್ಞಾನಕ್ಕೆ ಮೊರೆ ಹೋಗಿದ್ದಾರೆ. ಚೀಟಿ ಪದ್ಧತಿ ಕೈ ಬಿಟ್ಟು ಮೊಬೈಲ್ ಬಳಸಿ ಮಟ್ಕಾ ದಂಧೆ ಜೋರು ಮಾಡಿದ್ದಾರೆ. ಎಸ್ಎಮ್ಎಸ್ ಮುಖಾಂತರ ನಂಬರ್ ಗಳನ್ನು ಪಡೆದು ಪಟ್ಟಿ ತೆಗೆದುಕೊಳ್ಳಲಾಗುತ್ತದೆ. ಹಾಗಾಗಿ ತಾಲೂಕಿನಾದ್ಯಂತ ತೆರೆಮರೆಯಲ್ಲಿ ಮಟ್ಕಾ ಸದ್ದಿಲ್ಲದೆ ಜೋರಾಗಿಯೇ ನೆಡೆಯುತ್ತಿದೆ. ಬೀದಿಗೆ ಬೀಳುತ್ತಿರುವ ಕುಟುಂಬಗಳು: ತಾಲೂಕಿನಲ್ಲ ಬಹಳಷ್ಟು ಜನರು ಹೈಟೆಕ್ ಮಟ್ಕಾದಿಂದ ದಿವಾಳಿಯಾಗುತ್ತಿದ್ದು,ಕೆಲವರು ದುಡಿದ ಹಣವನ್ನು ಈ ಆಟಕ್ಕೆ ಖರ್ಚು ಮಾಡಿ ಊರು ಬಿಡುವ ಪರಿಸ್ಥಿತಿ ಬಂದಿದೆ.
ಕೆಲ ಕುಟುಂಬಗಳು ಸಂಪೂರ್ಣ ಹಣ ಕಳೆದುಕೊಂಡು ಬೆಂಗಳೂರಿಗೆ ಗುಳೆ ಹೋಗಲು ಮುಂದಾಗುತ್ತಿದ್ದಾರೆ. ಎಲ್ಲಿಲ್ಲಿ ಮಟ್ಕಾ ದಂಧೆ ಜೋರು? ತಾಲೂಕಿನ ಮಟ್ಕಾದ ತವರು ಮನೆಯಂದೆ ಹೆಸರುವಾಸಿ ಆಗಿರುವ ಯರಮಸಾಳ, ಜಾಲಹಳ್ಳಿ, ಅರಕೇರಾ, ಮಸರಕಲ್, ಗಬ್ಬೂರು, ಜಾಗಟಗಲ್, ಮುಷ್ಟುರು, ಗೂಗಲ್, ಇಟಗಿ, ಹೀರೆರಾಯಕುಂಪಿ, ರಾಮದುರ್ಗ, ಹಂಚಿನಾಳ, ಬೂದಿನಾಳ, ಹೀರೆಬೂದುರು, ಮಾತ್ಪಳ್ಳಿ, ಮಲದಕಲ್,ಗಣೇಕಲ್, ಇಂಗಳದಾಳ, ಮುಂಡರಗಿ, ಸುಂಕೇಶ್ವರಹಾಳ, ಕಾಕರಗಲ್, ಪಟ್ಟಣದ ಹಲವು ಕಡೆ ಜೋರಾಗಿಯೇ ಜರುಗುತ್ತಿದೆ. ವಿದ್ಯಾರ್ಥಿಗಳು ಬಲಿ: ಮಟ್ಕಾ ದಂಧೆಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಇತ್ತೀಚಿಗೆ ಬಲಿಯಾಗುತ್ತಿರುವ ಹಲವು ನಿದರ್ಶನಗಳು ಕಂಡುಬರುತ್ತಿದೆ.ಈ ಕುರಿತು ಕೆಲ ಕಾಲೇಜುಗಳ ಪ್ರಾಂಶುಪಾಲರು ಪೋಷಕರ ಗಮನಕ್ಕೆ ತಂದಿದ್ದಾರೆ. ಕೆಲ ಪೋಲಿಸ್ ಪೇದೆಗಳು ಜೂಜಾಡುವರಿಂದ ಹಣ ಪಡೆದುಕೊಳ್ಳುತ್ತಾ, ಮಟ್ಕಾ ಆಡಲು ಅನುಮತಿ ನೀಡಿರುವುದರಿಂದ ಹಲವರು ಇದಕ್ಕೆ ಬಲಿಯಾಗುತ್ತಿದ್ದಾರೆ. ಈ ಕುರಿತು ಮೇಲಾದಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ, ಯಾವ ಪ್ರಯೋಜನವು ಆಗಿಲ್ಲ ಎಂಬುದೇ ನೋವಿನ ಸಂಗತಿ. ಮೇಲಾಧಿಕಾರಿಗಳು ಈ ಬಗ್ಗೆ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಆಮ್ ಆದ್ಮಿ ಮುಖಂಡ ಭೀಮರಾಯ ಆಗ್ರಹಿಸಿದರು.