ಮಟ್ಕಾ ಜೂಜಾಟ -ಇಬ್ಬರ ಬಂಧನ

.ಅ. 30:- ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಇಬ್ಬರು ವ್ಯಕ್ತಿಗಳ ಮೇಲೆ ಹೊಸಹಳ್ಳಿ ಪೊಲೀಸರು ದಾಳಿ ನಡೆಸಿ ಅವರ ಬಳಿಯಿದ್ದ 2800ರೂ ಜಪ್ತಿ ಮಾಡಿರುವ ಘಟನೆ ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ಜರುಗಿದೆ. ಹುಲಿಕೆರೆ ಗ್ರಾಮದ ಮಂಜುನಾಥ (40) ಹಾಗೂ ಮುನಿರಾಜು (36) ಮಟ್ಕಾ ಜೂಜಾಟದಲ್ಲಿ ತೊಡಗಿದ್ದರ ಬಗ್ಗೆ ಖಚಿತ ಮಾಹಿತಿ ಆಧಾರಿಸಿದ ಹೊಸಹಳ್ಳಿ ಪಿಎಸ್ಐ ನಾಗರಾಜ ತಮ್ಮ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಇಬ್ಬರನ್ನು ಬಂಧಿಸಿ ಅವರ ಬಳಿಯಿದ್ದ ಮಟ್ಕಾಜೂಜಾಟದ 2800ರೂ ಹಣ ಜಪ್ತಿಮಾಡಿ ನ್ಯಾಯಾಲಯದ ಪರವಾನಿಗೆ ಪಡೆದು ಸರ್ಕಾರದ ಪರವಾಗಿ ಪಿಎಸ್ಐ ನಾಗರಾಜ ನೀಡಿದ ದೂರಿನಂತೆ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.