ಮಟ್ಕಾ ಅಡ್ಡೆಯ ಮೇಲೆ ಪೊಲೀಸ್ ದಾಳಿ ಇಬ್ಬರು ವಶ

ಕಾರಟಗಿ:ಜ:12: ಠಾಣೆ ವ್ಯಾಪ್ತಿಯ ಮಟ್ಕಾ ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ,
ಪಿಎಸ್ಐ ಬಿಎಲ್ ಅಗ್ನಿ ನೇತೃತ್ವದಲ್ಲಿ ನಗರದ ವೈಷ್ಣವಿ ವೈನ್ ಶಾಪ್ ಹತ್ತಿರ ದಾಳಿ ಮಾಡಿ ಹುಲಗಪ್ಪ ತಂ/ ಪರಸಪ್ಪ ಕಾರಟಗಿ ಇವರನ್ನು ಬಂದಿಸಲಾಗಿದ್ದು 2150 ರೂಪಾಯಿಗಳನ್ನು ಜಪ್ತಿ ಮಾಡಲಾಗಿದೆ, ಇನ್ನೊಬ್ಬ ಆರೋಪಿ ಮಲ್ಲಯ್ಯ ಸ್ವಾಮಿ ಪರಾರಿಯಾಗಿದ್ದಾರೆ,
ಚಳ್ಳೂರು ಕ್ರಾಸ್ ಬಳಿ ಎರಡನೆ ದಾಳಿ ಮಾಡಲಾಗಿದ್ದು ಮರಿಸ್ವಾಮಿ ತಂ/ ಬಸವರಾಜ್ ಎನ್ನುವ ಆರೋಪಿಯನ್ನು ಬಂದಿಸಲಾಗಿದ್ದು 4580 ರೂ ಜಪ್ತಿ ಮಾಡಲಾಗಿದೆ, ಇನ್ನಾರ್ವ ಆರೋಪಿ ಮೈಲಾರ ಶರಣಪ್ಪ ಪರಾರಿಯಾಗಿದ್ದನೆಂದು ಕಾರಟಗಿ ಪಿಎಸ್ಐ ಎಲ್ ಬಿ ಅಗ್ನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ,