ಮಟಮಾರಿ ರೈಲ್ವೆ ಅಂಡರ್ ಬ್ರಿಡ್ಜ್ ಕಾಮಗಾರಿಗೆ ಚಾಲನೆ

ರಾಯಚೂರು, ಜು.೨೭- ತಾಲ್ಲೂಕಿನ ಮಟಮಾರಿ ರೈಲ್ವೆ ನಿಲ್ದಾಣ ಗೇಟ್ ಹತ್ತಿರ ಹಿಸ ರೈಲ್ವೆ ಅಂಡರ್ ಬ್ರಿಡ್ಜ್ ಕಾಮಗಾರಿಗೆ ರೈಲ್ವೆ ಅಧಿಕಾರಿಗಳು ಚಾಲನೆ ನೀಡಿದರು.
ಮಟಮಾರಿ ರೈಲ್ವೆ ನಿಲ್ದಾಣದ ಗೇಟ್ ದಾಟಿ ಮಟಮಾರಿ, ಅರೋಲಿ, ಗಾರಲದಿನ್ನಿ, ಹೀರಾಪೂರ, ಹನುಮಾಪುರ, ತುರುಕುಣದೋಣಿ, ಯದ್ಲಾಪೂರ, ಗಿಲ್ಲೆಸೂಗೂರು ಕ್ಯಾಂಪ್ ಕುರ್ಡಿ ಗ್ರಾಮಗಳಿಗೆ ಓಡಾಡುವ ಸಾವಿರಾರು ಪ್ರಯಾಣಿಕರ ಅನುಕೂಲಕ್ಕಾಗಿ ಮಾಡಲಾಗಿದೆ. ಪ್ರಯಾಣಿಕರ ಅನೇಕ ವರ್ಷಗಳ ಬೇಡಿಕೆಗೆ ಇಲಾಖೆ ಸ್ಪಂದಿಸಿದೆ. ಸಂಸದ ರಾಜಾ ಅಮರೇಶ್ವರ ನಾಯಕ ಅವರು ಕೇಂದ್ರ ರೈಲ್ವೆ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಸಚಿವರು ಹಾಗೂ ಇಲಾಖೆಯ ಅಧಿಕಾರಿಗಳು ಅದಕ್ಕೆ ಸ್ಪಂದಿಸಿ ಕಾಮಗಾರಿಗೆ ಹಸಿರು ನಿಶಾನೆ ತೋರಿದ್ದು ಶ್ಲಾಘನೀಯ ಎಂದು ರೈಲ್ವೆ ಬೋರ್ಡ್ ಸದಸ್ಯ ಬಾಬುರಾವ್ ತಿಳಿಸಿದ್ದಾರೆ.