ಮಟಮಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದದ್ದಲ್ ಭೇಟಿ

ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಚನೆ
ರಾಯಚೂರು.ಮೇ.೨೮- ಗ್ರಾಮೀಣ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಬಸನಗೌಡ ದದ್ದಲ್ ಅವರು ಮಟಮಾರಿ ಗ್ರಾಮದ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಶಾಸಕರು ಭೇಟಿ ನೀಡಿ ಅಲ್ಲಿ ಇರುವ ಔಷಧಿ ಕೊಠಡಿಗೆ ಭೇಟಿ ವೀಕ್ಷಣೆ ಮಾಡಿ ನಂತರ ರೋಗಿಗಳ ಅರೋಗ್ಯವನ್ನು ವಿಚಾರಿಸಿದರು.
ಕೋವಿಡ್ ೨ ನೇಯ ಅಲೆ ತೀವ್ರವಾಗಿ ಹರುಡುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ವೈದ್ಯರು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಮನೆ ಮನೆಗೆ ತೆರಳಿ ಕೋವಿಡ್ ಪರೀಕ್ಷೆ ಮಾಡಬೇಕು ಎಂದು ಶಾಸಕರು ವೈದ್ಯಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ ಆಸ್ಪತ್ರೆಗೆ ಬರುವಂತ ಜನರಿಗೆ ಸಮರ್ಪಕವಾಗಿ ವ್ಯಾಕ್ಸಿನ್ ನೀಡಬೇಕು ಮತ್ತು ನೆಗಡಿ ಕೆಮ್ಮು ಜ್ವರ ಕಾಯಿಲೆಗಳ ಇದ್ದರೆ ಚಿಕಿತ್ಸೆ ನೀಡಬೇಕು, ಆಸ್ಪತ್ರೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಯಾರನ್ನು ಕೂಡ ನಿರ್ಲಕ್ಷಿಸಬಾರದು, ಸುತ್ತಮುತ್ತ ಹಳ್ಳಿಗಳಿಂದ ಬರುವಂತೆ ಗ್ರಾಮಾಂತರದ ಜನರು ವೈದ್ಯಧಿಕಾರಿಗಳನ್ನು ದೇವರು ಎಂದು ಪೂಜಿಸುತ್ತಾರೆ.
ಈಗಾಗಲೇ ೪೫ ವಯಸ್ಸು ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ಪಡೆದುಕೊಳ್ಳಬೇಕು. ಮತ್ತು ಎಲ್ಲರೂ ತಪ್ಪದೇ ವ್ಯಾಕ್ಸಿನ್ ಪಡೆದುಕೊಳ್ಳಲಿ ಎಂದರು, ನಾವು ಎಲ್ಲರು ಸೇರಿ ಕೋವಿಡ್ ಕುರಿತು ಜನರಿಗೆ ಜಾಗೃತಿ ಮೂಡಿಸಬೇಕು.ಸಾಮಾಜಿಕ ಅಂತರ ಕಾಪಡಿಕೋಳಬೇಕು , ಮಾಸ್ಕ್ ಸ್ಯಾನಿಟೈಜರ್ ತಪ್ಪದೇ ಬಳಸಬೇಕೇಂದು ಹೇಳಿದರು.
ರಾಯಚೂರು ಗ್ರಾಮೀಣ ಕ್ಷೇತ್ರದ ವ್ಯಾಪ್ತಿಗೆ ಬರುವಂತಹ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆಗೆ ಬರುವಂತಹ ಸಾರ್ವಜನಿಕರಿಗೆ ಮಾನ್ಯ ಶಾಸಕರು ಸ್ವಂತ ಖರ್ಚಿನಲ್ಲಿ ಪ್ರತಿದಿನ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಗಿದು, ಮಟಮಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳಿಗೆ ಸ್ಟಾಪ್ ನರ್ಸ್‌ಗಳಿಗೆ, ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ,ಚಿಕಿತ್ಸೆ ಪಡೆಯುತ್ತಿರುವಂತ ಜನರಿಗೆ ಶಾಸಕರು ಎಲ್ಲರಿಗೂ ಊಟ ಬಡಿಸಿದರು, ಕೋವಿಡ್ ಪಾಸಿಟಿವ್ ಇರುವಂತಹ ವ್ಯಕ್ತಿಗಳನ್ನು ರಾಯಚೂರಿನ ಕೋವಿಡ್ ಕೇಂದ್ರಗಳಿಗೆ ಚಿಕಿತ್ಸೆಗೆ ಕಳಿಸಿಕೊಟ್ಟು ಆಕ್ಸಿಜನ್ ವೆಂಟಿಲೇಟರ್ ರೇಮಿಡಿಸಿವರ್ ವ್ಯಾಕ್ಸಿನ್ ನನ್ನು ಸೂಕ್ತವಾಗಿ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮರೆಡ್ಡಿ, ಕಂದಾಯ ನಿರೀಕ್ಷಕ ಅಧಿಕಾರಿಗಳು ಗ್ರಾಮ ಲೆಕ್ಕಕಾಧಿಕರಿಗಳು ಪಿಡಿಓ ವೈದ್ಯಾಧಿಕಾರಿಗಳು, ಸ್ಟಾಫ್ ನರ್ಸುಗಳು, ಅಂಗನವಾಡಿ ಕಾರ್ಯಕರ್ತಯರು, ಆಶಾ ಕಾರ್ಯಕರ್ತರು, ಊರಿನ ಹಿರಿಯ ಮುಖಂಡರು ಗ್ರಾಮಸ್ಥರು ಕಾರ್ಯಕರ್ತರು ಉಪಸ್ಥಿತರಿದ್ದರು.