ಮಟನ್ ಲಿವರ್ ಪೆಪ್ಪರ್ ಡ್ರೈ

ಬೇಕಾಗುವ ಸಾಮಗ್ರಿಗಳು:

  • ಮಟನ್ ಲಿವರ್ – ಕಾಲು ಕೆಜಿ
  • ಕಾಳುಮೆಣಸಿನಪುಡಿ – ೨ ಚಮಚ
  • ಈರುಳ್ಳಿ – ೨
  • ಹಸಿರು ಮೆಣಸಿನಕಾಯಿ – ೩
  • ಅರಿಶಿನ – ಅರ್ಧ ಚಮಚ
  • ಎಣ್ಣೆ – ೧೦೦ ಮಿ. ಲೀ.
  • ಸೋಯಾ ಸಾಸ್ – ೨ ಚಮಚ
  • ಟೊಮೊಟೊ – ೧
  • ಕೊತ್ತಂಬರಿ ಸೊಪ್ಪು – ೩ ಚಮಚ
  • ನಿಂಬೆಹಣ್ಣು – ಅರ್ಧ
  • ಉಪ್ಪು – ೧ ಚಮಚ
  • ಕರಿಬೇವು – ೧೦ ಎಲೆ
  • ಬೆಳ್ಳುಳ್ಳಿ – ೧
  • ಗರಂ ಮಸಾಲ – ೨ ಚಮಚ
  • ನೀರು – ೪೦೦ ಮಿ. ಲೀ.

ಮಾಡುವ ವಿಧಾನ:
ಬಾಣಲಿಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಈರುಳ್ಳಿ, ಬೆಳ್ಳುಳ್ಳಿ, ಕರಿಬೇವು, ಹಸಿರುಮೆಣಸಿನಕಾಯಿ, ಲಿವರ್ ಹಾಕಿ ಚೆನ್ನಾಗಿ ಕಲಸಿ, ನಂತರ ಗರಂ ಮಸಾಲ, ಕಾಳುಮೆಣಸಿನಪುಡಿ, ಅರಿಶಿನ, ಧನಿಯಾ, ಸೋಯಾ ಸಾಸ್, ಚಿಕ್ಕದಾಗಿ ಕಟ್ ಮಾಡಿದ ಟೊಮೊಟೊ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಹುರಿದು, ಮುಚ್ಚಳ ಮುಚ್ಚಿ ಚೆನ್ನಾಗಿ ಬೇಯಿಸಿ ಇದಕ್ಕೆ ನಿಂಬೆರಸ, ಕೊತ್ತಂಬರಿಸೊಪ್ಪು ಹಾಕಿದರೆ ಮಟನ್ ಲಿವರ್ ಪೆಪ್ಪರ್ ಡ್ರೈ ರೆಡಿ.