ಮಟನ್ ಪೆಪ್ಪರ್ ಸಾಲ್ಟ್

ಬೇಕಾಗುವ ಸಾಮಗ್ರಿಗಳು

*ಮಟನ್ – ೧/೨ ಕೆ.ಜಿ
*ಕಾಳು ಮೆಣಸು – ೨ ಚಮಚ
*ಬೆಳ್ಳುಳ್ಳಿ – ೩ ಗಡ್ಡೆ
*ಕೊತ್ತಂಬರಿ ಸೊಪ್ಪು – ೧ ಕಟ್ಟು
*ನೀರು – ೧೦೦ ಮಿ.ಲೀ.
*ತುಪ್ಪ – ೪ ಚಮಚ
*ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ :

ಕಾಳು ಮೆಣಸು, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪಿಗೆ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಡಿ. ಕುಕ್ಕರ್‌ನಲ್ಲಿ ತುಪ್ಪದ ಜೊತೆಗೆ ಮಟನ್ ಪೀಸುಗಳನ್ನು ಹಾಕಿ ಕೈಯಾಡಿಸಿ, ರುಬ್ಬಿಕೊಂಡ ಮಸಾಲೆಯನ್ನು ಸೇರಿಸಿ ೪ ವಿಷಲ್ ಕೂಗಿಸಿದರೆ ಮಟನ್ ಪೆಪ್ಪರ್ ಸಾಲ್ಟ್ ರೆಡಿ.