ಮಟನ್ ಚಾಪ್ಸ್

ಬೇಕಾಗುವ ಸಾಮಗ್ರಿಗಳು

*ಮಟನ್ – ೧/೨ ಕೆ.ಜಿ
*ಕಾಳು ಮೆಣಸು – ೧ ಚಮಚ
*ಚಕ್ಕೆ – ೪ ಪೀಸ್
*ಲವಂಗ – ೧೦
*ಈರುಳ್ಳಿ – ೧
*ಪುದೀನ ಸೊಪ್ಪು – ಸ್ವಲ್ಪ
*ಹಸಿರು ಮೆಣಸಿನಕಾಯಿ -೫
*ಅರಿಶಿಣ ಪುಡಿ – ೩ ಚಮಚ
*ಶುಂಠಿ, ಬೆಳ್ಳುಳ್ಳಿ ಪೇಸ್ಟ್ – ೧ ಚಮಚ
*ಧನಿಯಾ ಪುಡಿ – ೧/೨ ಚಮಚ
*ಕೊಬ್ಬರಿತುರಿ – ೨ ಚಮಚ
*ಮೆಂತ್ಯಸೊಪ್ಪು -೨ ಚಮಚ
*ಎಣ್ಣೆ – ೫ ಚಮಚ

ಮಾಡುವ ವಿಧಾನ :

ಪ್ಯಾನಿನಲ್ಲಿ ಎಣ್ಣೆ ಹಾಕಿ. ಕಾದ ನಂತರ ಕಾಳು ಮೆಣಸು, ಚಕ್ಕೆ, ಲವಂಗವನ್ನು ಹದವಾಗಿ ಹುರಿಯಿರಿ. ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ, ಪುದೀನ, ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಶುಂಠಿ, ಬೆಳ್ಳುಳ್ಳಿ ಪೇಸ್ಟ್‌ನ್ನು ಬಾಡಿಸಿಕೊಳ್ಳಿ. ಅರಿಶಿಣ ಪುಡಿ, ಧನಿಯಾ ಪುಡಿ, ಕೊಬ್ಬರಿತುರಿ ಹಾಕಿ ಮಿಕ್ಸ್ ಮಾಡಿ. ತಣ್ಣಗಾದ ನಂತರ ನುಣ್ಣಗೆ ರುಬ್ಬಿಕೊಳ್ಳಿ. ಕುಕ್ಕರ್‌ಗೆ ಎಣ್ಣೆ, ಸಣ್ಣಗೆ ಹೆಚ್ಚಿದ ಈರುಳ್ಳಿ, ಮೆಂತ್ಯಸೊಪ್ಪು, ಪುದೀನಾ ಸೊಪ್ಪು, ಅರಿಶಿಣ ಪುಡಿ, ಮಟನ್ ರುಚಿಗೆ ತಕ್ಕಷ್ಟು ಉಪ್ಪು, ರುಬ್ಬಿಕೊಂಡ ಮಸಾಲೆ, ನೀರು ಹಾಕಿ. ೩ ವಿಷಲ್ ಕೂಗಿಸಿದರೆ ರುಚಿಮಟನ್ ಚಾಪ್ಸ್ ಸವಿಯಲು ಸಿದ್ಧ.