ಮಟನ್ ಗ್ರೀನ್ ಕರ್ರಿ

ಬೇಕಾಗುವ ಸಾಮಗ್ರಿಗಳು

*ಮಟನ್ – ೧/೪ ಕೆ.ಜಿ
*ಕಾಳು ಮೆಣಸು – ೧ ಚಮಚ
*ಹಸಿರು ಮೆಣಸಿನಕಾಯಿ – ೫
*ಕೊತ್ತಂಬರಿ ಸೊಪ್ಪು – ೧/೪ ಕಪ್
*ತೆಂಗಿನಕಾಯಿ ತುರಿ – ೧/೪ ಕಪ್
*ಟೊಮೆಟೊ – ೨
*ಗಸಗಸೆ- ೧/೨ ಚಮಚ
*ನೀರು –
*ಲವಂಗ – ೨-೩
*ಬೆಳ್ಳುಳ್ಳಿ – ೫
*ಅರಿಶಿಣ – ೧/೪ ಚಮಚ
*ಪುದೀನ – ೧/೪ ಕಪ್
*ಎಣ್ಣೆ – ೧೦೦ ಮಿ.ಲೀ
*ಚಕ್ಕೆ – ೨ ಪೀಸ್
*ಸೋಂಪು – ೧ ಚಮಚ
*ಶುಂಠಿ – ೧
*ಈರುಳ್ಳಿ – ೨
*ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ :

ಪಾತ್ರೆಗೆ ಎಣ್ಣೆ ಹಾಕಿ. ಬಿಸಿಯಾದ ಮೇಲೆ ಚಕ್ಕೆ, ಲವಂಗ, ಸೋಂಪು, ಕಾಳು ಮೆಣಸು, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ, ಈರುಳ್ಳಿಯನ್ನು ಹಾಕಿ ಹಸಿವಾಸನೆ ಹೋಗುವವರೆಗೂ ಫ್ರೈ ಮಾಡಿ. ಜೊತೆಗೆ ಕೊತ್ತಂಬರಿ ಸೊಪ್ಪು, ಪುದೀನ ಹಾಕಿ ಹುರಿದು, ಇದು ತಣ್ಣಗಾದ ಮೇಲೆ ರುಬ್ಬಿ ಬೌಲ್‌ಗೆ ಹಾಕಿಕೊಳ್ಳಿ. ನಂತರ ತೆಂಗಿನಕಾಯಿ ತುರಿ, ಟೊಮೆಟೋ, ಗಸಗಸೆಯನ್ನು ರುಬ್ಬಿ ಪೇಸ್ಟ್ ಮಾಡಿಕೊಳ್ಳಿ ಕುಕ್ಕರ್‌ಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸೋಂಪು, ಈರುಳ್ಳಿ ಹಾಕಿ ಫ್ರೈ ಮಾಎಡಿ. ಆಮೇಲೆ ಪುದೀನ ಮತ್ತು ಮಟನ್ ಪೀಸ್‌ಗಳನ್ನು ಹುರಿದು ಜೊತೆಗೆ ಅರಿಶಿಣ ಪುಡಿ, ರುಬ್ಬಿಕೊಮಡ ಮಸಾಲ ಹಾಕಿ ಬೇಯಿಸಿ. ಇದಕ್ಕೆ ರುಬ್ಬಿಕೊಂಡ ತೆಂಗಿನಕಾಯಿ ತುರಿ, ಟೊಮೆಟೋ, ಗಸಗಸೆ, ಸ್ವಲ್ಪ ಉಪ್ಪು ಮತ್ತು ನೀರು ಹಾಕಿ ೩ ವಿಷಲ್ ಕೂಗಿಸಿದರೆ ಮಟನ್ ಗ್ರೀನ್ ಕರ್ರಿ ರೆಡಿ.