ಮಟನ್ ಕೈಮಾ ಶಾಮೀ ಕಬಾಬ್

ಬೇಕಾಗುವ ಸಾಮಗ್ರಿಗಳು

*ಕೈಮಾ – ೧/೨ ಕೆ.ಜಿ
*ಚಕ್ಕೆ -೩ ಪೀಸ್
*ಲವಂಗ – ೪
*ಅಚ್ಚಖಾರದ ಪುಡಿ – ೧ ಚಮಚ
*ಕಪ್ಪು ಏಲಕ್ಕಿ – ೧
*ಶುಂಠಿ – ೧/೨ ಇಂಚು
*ಬೆಳ್ಳುಳ್ಳಿ -೧
*ಈರುಳ್ಳಿ – ೨
*ಕಾಳು ಮೆಣಸು –
*ನೀರು –
*ನೆನೆಸಿದ ಕಡಲೇಬೇಳೆ – ೧೦೦ ಗ್ರಾಂ
*ಬೇಯಿಸಿದ ಆಲೂಗಡ್ಡೆ – ೧ ದೊಡ್ಡದು
*ಜೀರಿಗೆ – ೧/೨ ಚಮಚ
*ಪುದೀನಾ ಸೊಪ್ಪು –
*ಹಸಿಮೆಣಸಿನಕಾಯಿ – ೪
*ಮೊಟ್ಟೆ – ೧
*ಉಪ್ಪು – ರುಚಿಗೆ ತಕ್ಕಷ್ಟು
*ಎಣ್ಣೆ – ೧/೨ ಲೀ.

ಮಾಡುವ ವಿಧಾನ :

ಕುಕ್ಕರಿಗೆ ಕೈಮಾ, ನೆನೆಸಿದ ಕಡಲೆ ಬೇಳೆ, ಚಿಕ್ಕದಾಗಿ ಹೆಚ್ಚಿದ ಶುಂಠಿ, ಬೆಳ್ಳುಳ್ಳಿ, ಜೀರಿಗೆ, ಮೆಣಸು, ದಪ್ಪಗೆ ಹೆಚ್ಚಿದ ಈರುಳ್ಳಿ, ಚಕ್ಕೆ , ಲವಂಗ, ಕಪ್ಪು ಏಲಕ್ಕಿ, ೧ ಲೋಟ ನೀರು ಹಾಕಿ, ಚೆನ್ನಾಗಿ ಬೆರೆಸಿ ಮೂರು ವಿಶಲ್ ಬೆರೆಸಿ. ತಣ್ಣಗಾದ ನಂತರ ನುಣ್ಣಗೆ ರುಬ್ಬಿಕೊಳ್ಳಿ. ಇದನ್ನು ಬಾಣಲಿಗೆ ಹಾಕಿ. ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ ಹಾಕಿ ಚೆನ್ನಾಗಿ ಕಲಸಿ ನೀರು ಇಂಗುವವರೆಗೂ ಚೆನ್ನಾಗಿ ಬೇಯಿಸಿ. ಈ ಮಿಶ್ರಣವನ್ನು ವಡೆಯಾಕಾರ ಮಾಡಿ, ಬೀಟ್ ಮಾಡಿದ ಮೊಟ್ಟೆಯಲ್ಲಿ ಅದ್ದಿಕೊಂಡು, ಕಾದ ಎಣ್ಣೆಯಲ್ಲಿ ಶ್ಯಾಲೂ ಫ್ರೈ ಮಾಡಿದರೆ ಮಟನ್ ಕೈಮಾ ಶಾಮೀ ಕಬಾಬ್ ತಿನ್ನಲು ಸಿದ್ಧ.