ಮಟಕಿ ಗ್ರಾಮದಲ್ಲಿ ಹಾವು ಕಡಿದು ಮಹಿಳೆ ಸಾವು

ಆಳಂದ:ಡಿ.4:ತಾಲ್ಲೂಕಿನ ಮಟಕಿ ಗ್ರಾಮದ ಮಮತಾ ಗಂಡ ರಾಜಶೇಖರ ಎಮ್ಮೆ (20) ಎಂಬ ಮಹಿಳೆ ಡಿ 2 ರಂದು ಸಾಯಂಕಾಯ ತಮ್ಮ ಸ್ವಂತ ತೋಟದಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿ ಸಾವನ್ನಪ್ಪಿದ್ದಾಳೆ.

ಈಕೆ ಸುಮಾರು 2 ವರ್ಷಗಳಿಂದ ಹಿಂದೆ ಮದುವೆಯಾಗಿದ್ದು, ಹಾವು ಕಚ್ಚಿದ ತಕ್ಷಣ ಆಸ್ಪತ್ರೆಗೆ ದಾವಿಸಿದರು. ಚಿಕಿತ್ಸೆ ಫಲಕಾರಿಯಾಗದೇ ದಾರಿ ಮಧ್ಯೆ ಪ್ರಾಣ ಬಿಟ್ಟಿದ್ದಾಳೆ, ಮೃತಳ ಶವ ಪರೀಕ್ಷೆಯನ್ನು ಆಳಂದ ಆಸ್ಪತ್ರೆಯಲ್ಲಿ ತಹಶೀಲ್ದಾರ ಯಲ್ಲಪ್ಪ ಸುಬೇದಾರ ಇವರ ಸಮ್ಮಕ್ಷಮ ಪಂಚನಾಮೆ ಮಾಡಿ ನಂತರ ಮೃತಳ ಸಂಬಂಧಿಕರಿಗೆ ಶವ ನೀಡಲಾಗಿದೆ. ಈ ಸಂಬಂಧ ಆಳಂದ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.