ಮಟಕಾ:6 ಜನರ ಬಂಧನ, 28,845 ರೂ.ಜಪ್ತಿ

ಕಲಬುರಗಿ,ನ.20-ನಗರದ ವಿವಿಧೆಡೆ ದಾಳಿ ನಡೆಸಿರುವ ಪೊಲೀಸರು ಮಟಕಾ ಬರೆದುಕೊಳ್ಳುತ್ತಿದ್ದ 6 ಜನರನ್ನು ಬಂಧಿಸಿ 28,845 ರೂಪಾಯಿ ನಗದು 3 ಮೊಬೈಲ್ ಜಪ್ತಿ ಮಾಡಿದ್ದಾರೆ.
ರಾಘವೇಂದ್ರ ನಗರ ಪೊಲೀಸ್ ಠಾಣೆಯ ಪಿಐ ಅರುಣ್ ಮರಗುಂಡಿ ಹಾಗೂ ಸಿಬ್ಬಂದಿ ದಾಳಿ ನಡೆಸಿ ನಗರದ ಮಿರ್ಚಿ ಗೋದಾಮ ಬಳಿ ಇರುವ ಪೆಟ್ರೋಲ್ ಪಂಪ್ ಹತ್ತಿರ ಮಟಕಾ ಬರೆದುಕೊಳ್ಳುತ್ತಿದ್ದ ಓರ್ವ ವ್ಯಕ್ತಿಯನ್ನು ಬಂಧಿಸಿ 4350 ರೂ.ನಗದು ಮತ್ತು ಒಂದು ಮೊಬೈಲ್ ಜಪ್ತಿ ಮಾಡಿದ್ದಾರೆ.
ಸಬ್ ಅರ್ಬನ್ ಪೊಲೀಸ್ ಠಾಣೆಯ ಪಿಐ ಬಾಸು ಚವ್ಹಾಣ ಮತ್ತು ಸಿಬ್ಬಂದಿ ದಾಳಿ ನಡೆಸಿ ರೇವಣಸಿದ್ಧೇಶ್ವರ ಕಾಲೋನಿಯ ಗೇಟ್ ಹತ್ತಿರ ಮಟಕಾ ಬರೆದುಕೊಳ್ಳುತ್ತಿದ್ದ ಓರ್ವನನ್ನು ಬಂಧಿಸಿ 870 ರೂ. ಜಪ್ತಿ ಮಾಡಿದ್ದಾರೆ.
ಸಿಸಿಬಿ ಪೊಲೀಸ್ ಠಾಣೆಯ ಪಿಐ ವಾಜೀದ್ ಪಟೇಲ್ ಮತ್ತು ಸಿಬ್ಬಂದಿ ದಾಳಿ ನಡೆಸಿ ಖಮರ್ ಕಾಲೋನಿಯ ಮಹ್ಮದ್ ರಫಿಕ್ ಚೌಕ್ ಹತ್ತಿರ ಮಟಕಾ ಬರೆದುಕೊಳ್ಳುತ್ತಿದ್ದ ಓರ್ವನನ್ನು ಬಂಧಿಸಿ 9025 ರೂ.ನಗದು ಮತ್ತು ಮೊಬೈಲ್ ಜಪ್ತಿ ಮಾಡಿದ್ದಾರೆ.
ಎಂ.ಬಿ.ನಗರ ಪೊಲೀಸ್ ಠಾಣೆಯ ಪಿಐ ಚಂದ್ರಶೇಖರ ತಿಗಡಿ ಮತ್ತು ಸಿಬ್ಬಂದಿ ದಾಳಿ ನಡೆಸಿ ಕೆಬಿಎನ್ ಝಡ್ ಫಂಕ್ಷನ್ ಹಾಲ್ ಹತ್ತಿರ ಮಟಕಾ ಬರೆದುಕೊಳ್ಳುತ್ತಿದ್ದ ಓರ್ವನನ್ನು ಬಂಧಿಸಿ 3,100 ರೂ.ನಗದು ಜಪ್ತಿ ಮಾಡಿದ್ದಾರೆ.
ಬ್ರಹ್ಮಪುರ ಪೊಲೀಸ್ ಠಾಣೆಯ ಪಿಐ ರಾಘವೇಂದ್ರ ಎಸ್.ಎಚ್. ಹಾಗೂ ಸಿಬ್ಬಂದಿ ದಾಳಿ ನಡೆಸಿ ಎಸ್.ಟಿ.ಬಿ.ಟಿ ಕ್ರಾಸ್ ಹತ್ತಿರ ಮಟಕಾ ಬರೆದುಕೊಳ್ಳುತ್ತಿದ್ದ ಓರ್ವನನ್ನು ಬಂಧಿಸಿ 1,100 ಜಪ್ತಿ ಮಾಡಿದ್ದಾರೆ.
ಫರಹತಾಬಾದ ಪೊಲೀಸ್ ಠಾಣೆಯ ಪಿಐ ರಾಘವೇಂದ್ರ ಹಾಗೂ ಸಿಬ್ಬಂದಿ ದಾಳಿ ನಡೆಸಿ ಹಾಗರಗುಂಡಗಿಯ ಶರಣಬಸವೇಶ್ವರ ಗುಡಿ ಬಳಿ ಮಟಕಾ ಬರೆದುಕೊಳ್ಳುತ್ತಿದ್ದ ಓರ್ವನನ್ನು ಬಂಧಿಸಿ 10,400 ರೂ.ನಗದು ಜಪ್ತಿ ಮಾಡಿದ್ದಾರೆ. ಹೀಗೆ ಒಟ್ಟು 6 ಕಡೆ ದಾಳಿ ನಡೆಸಿ 6 ಜನರ ಬಂಧಿಸಿ 28,845 ರೂ. ನಗದು ಮತ್ತು 3 ಮೊಬೈಲ್ ಜಪ್ತಿ ಮಾಡಲಾಗಿದೆ ಎಂದು ಡಿಸಿಪಿ ಆಡೂರು ಶ್ರೀನಿವಾಸಲು ಅವರು ತಿಳಿಸಿದ್ದಾರೆ.