ಮಟಕಾ: ಮೂವರ ಬಂಧನ

ಕಲಬುರಗಿ,ಆ.16-ನಗರದ ಎಂ.ಜಿ.ರೋಡ್ ಫ್ಯಾನ್ಸಿ ಸರ್ಕಲ್ ಹತ್ತಿರ ಮತ್ತು ಆರ್.ಟಿ.ಓ ಕ್ರಾಸ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ನಿಂತು ಮಟಕಾ ನಂಬರ್ ಬರೆದುಕೊಳ್ಳುತ್ತಿದ್ದ ಮೂವರನ್ನು ಎಂ.ಬಿ.ನಗರ ಪೊಲೀಸರು ಬಂಧಿಸಿದ್ದಾರೆ.
ಎ.ಎಸ್.ಐ ನಜಮೊದ್ದೀನ್ ಮತ್ತು ಸಿಬ್ಬಂದಿಗಳಾದ ದಸ್ತಯ್ಯ, ಸಂಗಮೇಶ ಅವರು ದಾಳಿ ನಡೆಸಿ ಎಂ.ಜಿ.ರೋಡ್ ಫ್ಯಾನ್ಸಿ ಸರ್ಕಲ್ ಹತ್ತಿರ ಮಟಕಾ ಬರೆದುಕೊಳ್ಳುತ್ತಿದ್ದ ಶಿವಾಜಿ ನಗರದ ಬಸವರಾಜ ಕಂಠಿ (71) ಎಂಬಾತನನ್ನು ಬಂಧಿಸಿ 1,100 ರೂ.ನಗದು ಮತ್ತು ಒಂದು ಬಾಲ್‍ಪೆನ್, ಒಂದು ಮಟಕಾ ಬರೆದ ಚೀಟಿ ಜಪ್ತಿ ಮಾಡಿದ್ದಾರೆ.
ಸಿವಿಲ್ ಹೆಡ್ ಕಾನ್ಸಟೇಬಲ್ ಹಣಮಂತ ತೋಟದ, ಸಿಬ್ಬಂದಿಗಳಾದ ಬೀರಪ್ಪ, ಸೋಮನಾಥ ಅವರು ದಾಳಿ ನಡೆಸಿ ಆರ್.ಟಿ.ಓ ಕ್ರಾಸ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಬರೆದುಕೊಳ್ಳುತ್ತಿದ್ದ ಆಜಾದಪುರ ರಸ್ತೆಯ ಮಹ್ಮದ್ ಶಕೀಲ್, ಗುರುಲಿಂಗಪ್ಪ ಹರಸೂರ ಎಂಬುವವರನ್ನು ಬಂಧಿಸಿ 700 ರೂ.ನಗದು ಒಂದು ಬಾಲ್‍ಪೆನ್, ಮಟಕಾ ಬರೆದ ಚೀಟಿ ಜಪ್ತಿ ಮಾಡಿದ್ದಾರೆ. ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.