ಮಟಕಾ ಬುಕ್ಕಿ ಬಂಧನ

ಕಲಬುರಗಿ:ಡಿ.03: ನಗರದ ಪ್ರಗತಿ ಕಾಲನಿಯಲ್ಲಿ ಮಟಕಾ ಬರೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿಯಂತೆ ಇನ್‍ಸ್ಪೆಕ್ಟರ್ ಚಂದ್ರಶೇಖರ ತಿಗಡಿ ಹಾಗೂ ಸಿಬ್ಭಂದಿ ದಾಳಿ ನಡೆಸಿ ಬುಕ್ಕಿಯನ್ನು ಶುಕ್ರವಾರ ಬಂಧಿಸಿದ್ದಾರೆ.
ರಾಜಕುಮಾರ ನಾಟೀಕಾರ ಬಂಧಿತ ಮಟಕಾ ಬುಕ್ಕಿ. ಈತ ಬಳಿಯಿದ್ದ 15,200 ರೂ. ಹಾಗೂ ಮಟಕಾ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಂಬಿ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.