ಮಟಕಾ ನಂಬರ್ ಬರೆದುಕೊಳ್ಳುತ್ತಿದ್ದ ವ್ಯಕ್ತಿ ಬಂಧನ

ಕಲಬುರಗಿ,ಆ.21-ತಾಲ್ಲೂಕಿನ ಜೋಗುರ ಗ್ರಾಮದ ರಾಮಲಿಂಗ ದೇವಸ್ಥಾನದ ಎದುರು ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೊಬ್ಬ ಮಟಕಾ ನಂಬರ್ ಬರೆದುಕೊಳ್ಳುತ್ತಿದ್ದಾನೆ ಎಂಬ ಮಾಹಿತಿ ಮೇಲೆ ಸಿಸಿಬಿ ಘಟಕದ ಪಿಎಸ್‍ಐ ಬಸವರಾಜ, ಸಿಬ್ಬಂದಿಗಳಾದ ಅಶೋಕ, ಶ್ರೀಶೈಲ, ಅಂಬಾಜಿ, ನಾಗರಾಜ, ಸುನೀಲಕುಮಾರ ಅವರು ದಾಳಿ ನಡೆಸಿದ್ದಾರೆ.
ಜೋಗೂರ ಗ್ರಾಮದ ಶಿವಶರಣಪ್ಪ ಮಾಲಿಪಾಟೀಲ (70) ಎಂಬುವವರನ್ನು ಬಂಧಿಸಿ 7,620 ರೂ.ನಗದು, ಒಂದು ಬಾಲ್‍ಪೆನ್ ಮತ್ತು ಮಟಕಾ ಚೀಟಿ ಜಪ್ತಿ ಮಾಡಿದ್ದಾರೆ. ಈ ಸಂಬಂಧ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.