ಮಟಕಾ ನಂಬರ್ ಬರೆದುಕೊಳ್ಳುತ್ತಿದ್ದ ವ್ಯಕ್ತಿ ಬಂಧನ

ಕಲಬುರಗಿ,ಆ.10-ನಗರದ ಮಹಿಬೂಬ್ ಸುಬಾನಿ ದರ್ಗಾ ಹತ್ತಿರ ಮಟಕಾ ಬರೆದುಕೊಳ್ಳುತ್ತಿದ್ದ ವ್ಯಕ್ತಿಯೊಬ್ಬನನ್ನು ಸಿಸಿಬಿ ಘಟಕದ ಪೊಲೀಸರು ಬಂಧಿಸಿದ್ದಾರೆ.
ಸಿಸಿಬಿ ಘಟಕದ ಪಿಎಸ್‍ಐ ಬಸವರಾಜ, ಸಿಬ್ಬಂದಿಗಳಾದ ಅಶೋಕ, ನಾಗರಾಜ, ಅಶೋಕ ಕಟಕೆ, ಶಿವಕುಮಾರ ಮತ್ತು ಉದಯಕುಮಾರ ಅವರು ದಾಳಿ ನಡೆಸಿ ಛೋಟಾ ರೋಜಾ ರಾಮಜಿ ನಗರದ ಉದಯಕುಮಾರ ಹಾಗರಗಿ (42) ಎಂಬಾತನನ್ನು ಬಂಧಿಸಿ 3,360 ರೂ.ನಗದು ಮಟಕಾ ಚೀಟಿ ಜಪ್ತಿ ಮಾಡಿದ್ದಾರೆ.
ಈತ ಮಟಕಾ ನಂಬರ್ ಬರೆದುಕೊಂಡು ನಂತರ ಹಣ ಮತ್ತು ಮಟಕಾ ಚೀಟಿಯನ್ನು ಭವಾನಿ ನಗರದ ಗಂಗಾದರ ಎಂಬಾತನಿಗೆ ನೀಡುತ್ತಿದ್ದ ಎಂದು ತಿಳಿದುಬಂದಿದೆ. ಈ ಸಂಬಂಧ ಉದಯಕುಮಾರ ಮತ್ತು ಗಂಗಾಧರ ವಿರುದ್ಧ ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.