ಮಟಕಾ ಜೂಜಾಟ: ಓರ್ವನ ಬಂಧನ

ಕಲಬುರಗಿ,ಆ.18-ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದ ಸಾರ್ವಜನಿಕ ಸ್ಥಳದಲ್ಲಿ ಮಟಕಾ ನಂಬರ್ ಬರೆದುಕೊಳ್ಳುತ್ತಿದ್ದ ವ್ಯಕ್ತಿಯೊಬ್ಬನನ್ನು ಸ್ಟೇಷನ್ ಬಜಾರ್ ಪೊಲೀಸರು ಬಂಧಿಸಿದ್ದಾರೆ.
ಪಿಎಸ್‍ಐ ವಂದನಾ ಮತ್ತು ಸಿಬ್ಬಂದಿಗಳಾದ ಮೊಸೀನ್, ಸಂಗಣ್ಣ, ಫಿರೋಜ್, ಭೋಗೇಶ್ ಅವರು ದಾಳಿ ನಡೆಸಿ ಸ್ಟೇಷನ್ ಬಜಾರ್ ವಿಠ್ಠಲ ಮಂದಿರ ಏರಿಯಾದ ರಾಜು ಜಗದಾಳೆ (48) ಎಂಬಾತನನ್ನು ಬಂಧಿಸಿ 2,250 ರೂ.ನಗದು, ಬಾಲ್ ಪೆನ್ ಮತ್ತು ಮಟಕಾ ಚೀಟಿ ಜಪ್ತಿ ಮಾಡಿದ್ದಾರೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.