ಕಲಬುರಗಿ,ಜೂ 24: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಟಕಾ ಬರೆದುಕೊಳ್ಳುತ್ತಿದ್ದ ಇಬ್ಬರನ್ನು ಬಂಧಿಸಿದ ನಗರ ಪೊಲೀಸರು ಬಂಧಿತರಿಂದ 24510 ರೂ. ನಗದು ವಶಪಡಿಸಿಕೊಂಡಿದ್ದಾರೆ.
ಹುಮನಾಬಾದ್ ಬೇಸ್ ಹತ್ತಿರ ಮಟಕಾ ಬರೆದುಕೊಳ್ಳುತ್ತಿದ್ದ ದಾನಪ್ಪ ಶರಣಬಸಪ್ಪ ಪಾಟೀಲ ಓಕಳಿ ಎಂಬಾತನನ್ನು ಬಂಧಿಸಿದ ಚೌಕ ಠಾಣೆ ಪಿಐ ರಾಜಶೇಖರ ಹಳಿಗೋದಿ ಮತ್ತು ಸಿಬ್ಬಂದಿಗಳು ಆರೋಪಿಯಿಂದ 19010 ರೂ ನಗದು ವಶಪಡಿಸಿಕೊಂಡಿದ್ದಾರೆ.
ಖದೀರ್‍ಚೌಕ ಹತ್ತಿರ ಮಟಕಾಚೀಟಿ ಬರೆದುಕೊಳ್ಳುತ್ತಿದ್ದ ಅರ್ಶಫ್ ಮಹಮ್ಮದ್ ಖಾಜಾ ಬಾಂಬೆಮಿಠಾಯಿವಾಲೆ ಎಂಬಾತನನ್ನು ಬಂಧಿಸಿದ ರಾಘವೇಂದ್ರ ನಗರ ಠಾಣೆ ಪೊಲೀಸರು ಆತನಿಂದ 5500 ರೂ ನಗದು ಮತ್ತು 2 ಸಾವಿರ ರೂ ಮೌಲ್ಯದ ಮೊಬೈಲ್ ಜಪ್ತಿ ಮಾಡಿದ್ದಾರೆ.