ಮಜ್ಜಿಗೆ ದೋಸೆ ರೆಸಿಪಿ

ಸಾಮಾಗ್ರಿಗಳು:
ಉದ್ದಿನ ಬೇಳೆ – ಅರ್ಧ ಕಪ್
ಅಕ್ಕಿ – ಎರಡು ಕಪ್
ಮೊಸರು – ಅರ್ಧ ಕಪ್
ಅವಲಕ್ಕಿ – ಒಂದು ಮುಷ್ಟಿ
ಉಪ್ಪು – ರುಚಿಗೆ ತಕ್ಕಷ್ಟು
ಬೆಲ್ಲ – ಸ್ವಲ್ಪ
ಮಾಡುವ ವಿಧಾನ:
ಮೊದಲಿಗೆ ಅಕ್ಕಿ ಮತ್ತು ಉದ್ದನ್ನು ೩ ಗಂಟೆಗಳ ನೆನೆಸಬೇಕು ಮತ್ತು ಇದನ್ನು ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿಕೊಳ್ಳುತ್ತಿರುವಾಗ ಅವಲಕ್ಕಿಯನ್ನು ತೊಳೆದು ಹಿಟ್ಟಿಗೆ ಸೇರಿಸಿ. ಅಕ್ಕಿ ಹಿಟ್ಟನ್ನು ಹುಳಿ ಬರುವುದಕ್ಕಾಗಿ ಎಂಟು ಗಂಟೆಗಳ ಕಾಲ ಮುಚ್ಚಿಡಿ. ಇದೇ ಸಮಯದಲ್ಲಿ ಹಿಟ್ಟಿಗೆ ಮೊಸರು ಮತ್ತು ತುರಿದ ಬೆಲ್ಲ ಹಾಗೂ ಉಪ್ಪನ್ನು ಸೇರಿಸಿ. ಹಿಟ್ಟು ಹುಳಿ ಬಂದ ನಂತರ ಪಾತ್ರೆಯಲ್ಲಿ ಹಿಟ್ಟಿನ ಪ್ರಮಾಣ ಹೆಚ್ಚಾಗಿರುವುದನ್ನು ನೀವು ಗಮನಿಸಬಹುದು. ಕಾವಲಿಯನ್ನು ಬಿಸಿ ಮಾಡಿ ಮತ್ತು ಅದಕ್ಕೆ ಒಂದು ಸ್ಪೂನ್‌ನಷ್ಟು ಎಣ್ಣೆಯನ್ನು ಹಾಕಿ. ಒಂದು ಸೌಟಿನಷ್ಟು ಹಿಟ್ಟನ್ನು ತೆಗೆದುಕೊಂಡು ದೋಸೆ ಆಕಾರದಲ್ಲಿ ಹುಯ್ಯಿರಿ. ೫ ನಿಮಿಷಗಳ ತರುವಾಯ ದೋಸೆಯ ಎರಡೂ ಬದಿಗೆ ಸ್ವಲ್ಪ ಎಣ್ಣೆ ಸವರಿ ಚೆನ್ನಾಗಿ ಬೇಯಿಸಿಕೊಳ್ಳಿ.