ಮಜಡಾ ಗಾಡಿ ಮಗುಚಿ ಬಿದ್ದು ಚಾಲಕ ಸ್ಥಳದಲ್ಲೇ ಸಾವು


ಹರಿಹರ.ನ.15 : ಸ್ವರಾಜ್ ಮಜ್ಡಾ ಗಾಡಿಯಲ್ಲಿ ಬೂದಿ ತುಂಬಿಕೊಂಡು ಬರುತ್ತಿದ್ದ ಲಾರಿಯು ಚಾಲಕನ ಅಜಾಗರೂಕತೆ ಯಿಂದ ಹರಿಹರ ಹರಪನಹಳ್ಳಿ ರಸ್ತೆಯ ಕೆಇಬಿ ಗ್ರಿಡ್ ಬಳಿ ಲಾರಿ ಮಗುಚಿ ಬಿದ್ದ ಪರಿಣಾಮ ಒಬ್ಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದರೆ ಇಬ್ಬರಿಗೆ  ಗಾಯಗಳಾಗಿರುವ ಘಟನೆ ನಡೆದಿದೆ ಪ್ರಭು (21) ಮೃತ ದುರ್ದೈವಿ.  ಹರೀಶ್ .ಬಸವರಾಜ್ ಎಂಬುವವರಿಗೆ ಗಂಭೀರಗಾಯಗಳಾಗಿದ್ದು ದಾವಣಗೆರೆ ಸಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಘಟನೆಯ ವಿವರ ನ 13 ರಂದು ಬೆಳಗ್ಗೆ 7 ಗಂಟೆಗೆ ಗುತ್ತೂರು  ಗ್ರಾಮದಿಂದ ಇಟ್ಟಗಿಗಳನ್ನು ತುಂಬಿಕೊಂಡು ಶಿವಮೊಗ್ಗಕ್ಕೆ ತೆರಳಿ ಅಲ್ಲಿ   ಬೂದಿಯನ್ನು ತುಂಬಿಕೊಂಡು ಹರಿಹರ  ಗುತ್ತುರು ಗ್ರಾಮಕ್ಕೆ ಬರುವಾಗ ರಾತ್ರಿ 9ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಹರಿಹರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸ್ ಐ ವೀರಬಸಪ್ಪ ಕುಸಲಾಪುರ ಮುಂದಿನ ತನಿಖೆಯನ್ನು  ಕೈಗೊಂಡಿದ್ದಾರೆ.