ಮಗು ದತ್ತು ಪಡೆಯಲು ದಂಪತಿಗಳ ಒಲವು

ಬೆಂಗಳೂರು,ಏ.೧೧-ಹುಟ್ಟಿದ ಪ್ರತಿಯೊಬ್ಬರು ಮದುವೆ, ಕುಟುಂಬ ಮತ್ತು ಮಕ್ಕಳನ್ನು ಹೊಂದುವುದು ಅನಾದಿ ಕಾಲದಿಂದಲೂ ನಡೆದು ಬಂದ ದಾರಿ ಇದೆ ಹಾದಿಯಲ್ಲಿ ಸಾಗಬೇಕು ಎಂಬುದು ನಿಯಮ.ಆದರೆ ಇಂದಿನ ಯುವ ದಂಪತಿಗಳು ಮಕ್ಕಳನ್ನು ಹೊಂದುವ ಬಗ್ಗೆ ಯೋಚಿಸುತ್ತಿಲ್ಲ. ಮದುವೆ ಬೇಕು, ಮಕ್ಕಳು ಬೇಡ ಎನ್ನುವವರು ಅನೇಕರು ನಮ್ಮಲ್ಲಿ ಇದ್ದಾರೆ. ಮಕ್ಕಳಾಗದಿರುವುದು ಕೂಡ ಈಗ ವಿಶೇಷ ಜೀವನ ಶೈಲಿ ಎನ್ನಿಸುತ್ತದೆ.ಆದರೆ ಹೆಚ್ಚಿನ ದಂಪತಿಗಳು ಮಗುವನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ ಎನ್ನುತ್ತೇವೆ ವರದಿಗಳು.
ಇತ್ತೀಚಿನ ದಿನಗಳಲ್ಲಿ ಜನರ ಜೀವನ ಶೈಲಿ ಬದಲಾಗಿದೆ. ಕೆಲಸದ ಒತ್ತಡ, ಸಮಯದ ಅಭಾವ, ಏರುತ್ತಲೇ ಇರುವ ದೈನಂದಿನ ವೆಚ್ಚಗಳು, ಆರೋಗ್ಯ ಸಮಸ್ಯೆಯಿಂದ ಸ್ವಂತ ಮಕ್ಕಳ ಹೊಂದುವ ಬಯಕೆಯನ್ನು ಇಂದಿನ ಜನತೆ ವ್ಯಕ್ತಪಡಿಸುವುದಿಲ್ಲ. ಹೀಗಾಗಿ ಹೆಚ್ಚಿನ ಜನರು ದತ್ತು ಮಕ್ಕಳನ್ನು ಪಡೆಯುವತ್ತ ತಮ್ಮ ಚಿತ್ತ ಹರಿಸಿದ್ದಾರೆ.ಆದರೆ ದತ್ತು ಪಡೆಯುವುದು ಅಷ್ಟು ಸುಲಭವಾಗಿ ತೋರುವುದಿಲ್ಲ ಅದಕ್ಕೆ ಅನೇಕ ಕಾನೂನು ಪ್ರಕ್ರಿಯೆಗಳು ಇವೆ.ಭಾರತದಲ್ಲಿ ಮಕ್ಕಳ ದತ್ತು ಸ್ವೀಕಾರ ಪ್ರಕ್ರಿಯೆಯನ್ನು ಸರಳಗೊಳಿಸುವ ಅಗತ್ಯವನ್ನು ಸುಪ್ರೀಂ ಕೋರ್ಟ್ ಒತ್ತಿಹೇಳಿದೆ.
ಬೆಂಗಳೂರು ಸೇರಿದಂತೆ ರಾಜ್ಯಾದಂತ ಮಕ್ಕಳನ್ನು ದತ್ತು ಪಡೆಯಲು ಅಸಂಖ್ಯಾತ ಅರ್ಜಿಗಳು ಬಂದಿವೆ. ಅದರಲ್ಲಿ ಕಳೆದ ವರ್ಷದಿಂದ ಇಲ್ಲಿಯವರೆಗೂ ಸುಮಾರು ೧ ಲಕ್ಷದ ೧೦ ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ. ಹಾಗೆ ೨೦೨೧ರಲ್ಲಿ ೬೫ ಸಾವಿರ, ೨೦೨೨ರಲ್ಲಿ ೮೦ ಸಾವಿರ ಅರ್ಜಿಗಳು ಬಂದಿವೆ. ಈ ಅರ್ಜಿಗಳ ವಿಲೇವಾರಿಗೆ ೪ ರಿಂದ ೫ ವರ್ಷ ಬೇಕಾಗಬಹುದು ಎನ್ನಲಾಗಿದೆ.
೨೦೨೧ರಲ್ಲಿ ಪ್ಯೂ ರಿಸರ್ಚ್ ಸೆಂಟರ್ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ ೧೮ ರಿಂದ ೪೯ ವರ್ಷದ ಶೇ ೪೪ರಷ್ಟು ಜನರು ಮಕ್ಕಳು ಹೊಂದುವುದು ತಮಗೆ ಇಷ್ಟವಿಲ್ಲ ಎಂಬ ಅಭಿಪ್ರಾಯವನ್ನೇ ವ್ಯಕ್ತಪಡಿಸಿದ್ದಾರೆ. ೨೦೧೮ರಲ್ಲಿ ಮಕ್ಕಳು ಬೇಡ ಎನ್ನುವವರ ಸಂಖ್ಯೆ ಶೇ ೩೭ ರಷ್ಟಿತ್ತು. ಇತ್ತೀಚಿನ ದಿನಗಳಲ್ಲಿ ಇದರ ಪ್ರಮಾಣ ಇನ್ನಷ್ಟು ಹೆಚ್ಚಿದೆ.
ಅಧ್ಯಯನ ವರದಿಗಳ ಪ್ರಕಾರ ಶೇ ೫೬ರಷ್ಟು ಮಂದಿ ಮಕ್ಕಳನ್ನು ಹೊಂದುವ ಸಾಧ್ಯತೆ ಇಲ್ಲ ಎಂಬ ಅಂಶಗಳನ್ನು ಹೊರ ಹಾಕಿದೆ. ಇದರಲ್ಲಿ ಶೇ ೧೯ರಷ್ಟು ಮಂದಿ ವೈದ್ಯಕೀಯ ಕಾರಣ ಹೇಳುತ್ತಾರೆ. ಶೇ ೧೭ ರಷ್ಟು ಮಂದಿ ಆರ್ಥಿಕ ಕಾರಣ ತಿಳಿಸಿದರೆ, ಇನ್ನೂ ಶೇ ೧೫ರಷ್ಟು ಮಂದಿ ನಮಗೆ ಸಂಗಾತಿಯಿಲ್ಲ ಎಂಬ ಮಾತು ಹಂಚಿಕೊಂಡಿದ್ದಾರೆ.