ಮಗು ತುಟಿಗೆ ಮುತ್ತಿಟ್ಟ ದಲೈಲಾಮ ವಿವಾದಕ್ಕೆಡೆ

ನವದೆಹಲಿ,ಏ.೧೦- ಟಿಬೆಟಿಯನ್ ಧರ್ಮಗುರು, ಬೌದ್ಧ ಸನ್ಯಾಸಿ ದಲೈಲಾಮಾ ಅವರು ಮಗುವಿನ ತುಟಿಗಳಿಗೆ ಮುತ್ತಿಟ್ಟು “ನಾಲಿಗೆಯನ್ನು ಹೀರುವಂತೆ” ಕೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕಿಡಿ ಹೊತ್ತಿಸಿದೆ.
ದಲೈಲಾಮಾ ಅವರಿಗೆ ಬಾಲಕ ಗೌರವ ಸಲ್ಲಿಸಲು ಬಂದಾಗ, ಬಾಲಕನ ತುಟಿಗಳಿಗೆ ಮುತ್ತು ಕೊಡುವುದನ್ನು ಕಾಣಬಹುದುದಾಗಿದೆ. ಈ ವೇಳೆ ದಲೈಲಾಮ ಅವರ ನಡವಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಬಾಲಕನ್ನು ನಾಲಿಗೆ ಹೀರುವಂತೆ ಕೇಳುವ ಸಮಯದಲ್ಲಿ ಬೌದ್ಧ ಸನ್ಯಾಸಿಯು ತನ್ನ ನಾಲಿಗೆ ಚಾಚಿಕೊಂಡಿರುವುದು ಕಂಡುಬಂದಿದೆ. ಇದು ಎಲ್ಲಿ ಯಾವಾಗ ನಡೆದಿದೆ ಎನ್ನುವ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಬಾರಿ ವೈರಲ್ ಆಗಿದೆ.
ಈ ವೀಡಿಯೊ ಟ್ವಿಟರ್ ಬಳಕೆದಾರರು ವಿಡಿಯೋವನ್ನು ಅಸಹ್ಯ ಎಂದು ಕರೆದಿದ್ದಾರೆ. ಇನ್ನು ಕೆಲವು ಬಳಕೆದಾರರು ಇದು “ಅಸಹ್ಯ”, “ಅತಿರೇಕದ” ಮತ್ತು “ಖಂಡನೀಯ” ಎಂದು ಆಕ್ರೋಶ ಹೊರಹಾಕಿದ್ದಾರೆ.
ವೀಡಿಯೊವನ್ನು ಹಂಚಿಕೊಂಡ ಟ್ವಿಟ್ಟರ್ ಬಳಕೆದಾರ ಜೂಸ್ಟ್ ಬ್ರೋಕರ್ಸ್, “ಹಾಗಾದರೆ ದಲೈ ಲಾಮಾ ಬೌದ್ಧ ಸಮಾರಂಭದಲ್ಲಿ ಭಾರತೀಯ ಹುಡುಗನನ್ನು ಚುಂಬಿಸುತ್ತಿದ್ದಾನೆ ಮತ್ತು ಅವನ ನಾಲಿಗೆಯನ್ನು ಸ್ಪರ್ಶಿಸಲು ಪ್ರಯತ್ನಿಸುತ್ತಾನೆ. ಅವನು ನಿಜವಾಗಿ “ನನ್ನ ನಾಲಿಗೆಯನ್ನು ಹೀರು” ಎಂದು ಹೇಳುತ್ತಾನೆ. ಈಗ ಅವನು ಅದನ್ನು ಏಕೆ ಮಾಡುತ್ತಾನೆ ಎಂದು ಪ್ರಶ್ನಿಸಿದ್ದಾರೆ.
“ಇದು ಅನಪೇಕ್ಷಿತ ಮತ್ತು ಈ ದುಷ್ಕೃತ್ಯವನ್ನು ಯಾರೂ ಸಮರ್ಥಿಸಬಾರದು ಎಂದು ಅನೇಕ ಟ್ವಿಟ್ಟರ್ ಬಳಕೆದಾರರು ದಲೈಲಾಮ ಅವರ ನಡೆ ಮತ್ತು ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಜಾಸ್ ಒಬೆರಾಯ್ ಎನ್ನುವರು, “ನಾನು ಏನು ನೋಡುತ್ತಿದ್ದೇನೆ. ಇದು ದಲೈ ಲಾಮಾ ಅವರು ಶಿಶುಕಾಮಕ್ಕಾಗಿ ಬಂಧಿಸಬೇಕಾಗಿದೆ. ಇದೊಂದು ಅಸಹ್ಯಕರ” ಎಂದು ಟ್ವೀಟ್ ಮಾಡಿದ್ದಾರೆ.
೨೦೧೯ ರಲ್ಲಿ, ದಲೈ ಲಾಮಾ ಅವರು ತಮ್ಮ ಉತ್ತರಾಧಿಕಾರಿ ಮಹಿಳೆಯಾಗಬೇಕಾದರೆ, ಅವರು “ಆಕರ್ಷಕ” ವಾಗಿರಬೇಕು ಎಂದು ಹೇಳಿ ದೊಡ್ಡ ವಿವಾದವನ್ನು ಹುಟ್ಟುಹಾಕಿದ್ದರು. ‘ಹೆಣ್ಣು ದಲೈಲಾಮಾ ಬಂದರೆ ಹೆಚ್ಚು ಆಕರ್ಷಕವಾಗಿರಬೇಕು’ ಎಂದು ಹೇಳಿ ವಿವಾದವಾದ ಬಳಿಕ ಕ್ಷಮೆಯಾಚಿಸಿದ್ದರು.