ಮಗು ಕಳ್ಳತನ ಯತ್ನ: ತಾಯಿಯಿಂದ ರಕ್ಷಣೆ

ವಿಜಯಪುರ ಜು 21: ಅಂಗಡಿಗೆ ಬಂದಿದ್ದ ಮಗುವನ್ನು ಕದ್ದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಬೆನ್ನಟಿದ್ದ ತಾಯಿ ಮಗುವನ್ನು ರಕ್ಷಿಸಿದ ಘಟನೆ
ವಿಜಯಪುರ ನಗರದ ಬುರಾಣಪುರ ಬಳಿಯ ಬಸವ ನಗರದಲ್ಲಿ ನಡೆದಿದೆ..ಬಳಿಕ ಸ್ಥಳೀಯರು ಕದಿಯಲು ಯತ್ನಿಸಿದ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ.
.ಸಂತೋಷ್ ಮತ್ತು ರೇಣುಕಾ ದಂಪತಿಯ 4 ವರ್ಷದ ಗಂಡು ಮಗು ಅಂಗಡಿಗೆ ಹೋದಾಗ ವ್ಯಕ್ತಿಯೊಬ್ಬ ಹೊತ್ತುಕೊಂಡು ಹೋಗಲು ಯತ್ನಿಸಿದ್ದಾನೆ.ಮಗು ಅಳುವ ದ್ವನಿ ಕೇಳಿ ತಾಯಿ ರೇಣುಕಾ ಹೊರಗೆ ಬಂದು ಕಳ್ಳನ ಬೆನ್ನಟ್ಟಿ ಹಿಡಿದು ಮಗುವಿನ ರಕ್ಷಣೆ ಮಾಡಿದ್ದಾರೆ.
ಜನ ಜಮಾಯಿಸಿದ್ದು ನೋಡಿ ಮಾನಸಿಕ ಅಸ್ವಸ್ಥನಂತೆ ಕಳ್ಳ ನಾಟಕ ಶುರು ಮಾಡಿದ್ದಾನೆ.ಹೆಸರು ಕೇಳಿದರೆ.ದಾದಾಪೀರ, ಕಾಸೀಮ್, ಸಲೀಮ್, ಮೈಬೂಬ್ ಎಂದೆಲ್ಲ ಹೆಸರು ಹೇಳಿ ಜನರನ್ನು ಗೊಂದಲಕ್ಕೆ ಕೆಡವಿದ್ದಾನೆ .ಬಳಿಕ ಸ್ಥಳೀಯರು ಕಳ್ಳನನ್ನ ಪೆÇಲೀಸರಿಗೊಪ್ಪಿಸಿದ್ದಾರೆ.ವಿಜಯಪುರ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.