ಮಗು ಕಳೆದುಕೊಂಡ ದಂಪತಿಗೆ  ಸಾಂತ್ವನ

ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೨೯: ಹರಿಹರ ತಾಲ್ಲೂಕಿನ ಕುಂಬಳೂರು ಗ್ರಾಮದದಲ್ಲಿ ಮನೆ ಕುಸಿದು ಸಾವಿಗೀಡಾದ ೧ ವರ್ಷದ ಮಗು ಸ್ಪೂರ್ತಿ ಇವರ ಮನೆಗೆ ಭೇಟಿ ನೀಡಿದ ಇನ್‌ಸೈಟ್ ತರಬೇತಿ ಸಂಸ್ಥಾಪಕ ಬಿ.ಜೆ. ವಿನಯಕುಮಾರ್ ದಂಪತಿಗೆ ಸಾಂತ್ವನ ಹೇಳಿ, ದಂಪತಿಯ ಮತ್ತೊಂದು ಮಗುವಿನ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ ಮಾಡುವುದಾಗಿ ಭರವಸೆ ನೀಡಿದರು.ಇದೇ ವೇಳೆ ಮಾತನಾಡಿದ ವಿನಯಕುಮಾರ್, ಮಕ್ಕಳನ್ನು ಕಳೆದುಕೊಂಡರೆ ಆಗುವ ಸಂಕಟ ಎಂಥದ್ದೆAದು ಅರ್ಥವಾಗುತ್ತದೆ. ನೀವು ಧೃತಿಗೆಡಬೇಡಿ, ಮಕ್ಕಳಿಗೆ ಶಿಕ್ಷಣ ನೀಡಿದರೆ ಸಮಾಜದಲ್ಲಿ ಉತ್ತಮ ನಾಗರೀಕರಾಗಲು ಸಾಧ್ಯವಾಲಿದೆ. ಕಷ್ಟಕರ ಜೀವನದಿಂದಲೇ ನಾನು ಈ ಹಂತಕ್ಕೆ ತಲುಪಿದ್ದೇನೆ. ಆದ್ದರಿಂದ ನಿಮ್ಮ ೪ ವರ್ಷದ ಮಗನ ವಿದ್ಯಾಭ್ಯಾಸದ ಖರ್ಚನ್ನು ನಾವು ಭರಿಸುತ್ತೇವೆ ಎಂದು ಭರವಸೆ ಕೊಟ್ಟರು.