ಮಗುವಿನ ಹೃದಯ ರಂಧ್ರಕ್ಕೆ ಯಶಸ್ವಿ ಚಿಕಿತ್ಸೆ


ಬಾಗಲಕೋಟೆ: ಏ. 7 : ನಗರದ ಬಿ.ವಿ.ವಿ ಸಂಘದ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯಲ್ಲಿ ಹೃದಯ ತಜ್ಞರಾದ ಡಾ.ಸಮೀರಕುಮಾರ ಕುಲಕರ್ಣಿ ಅವರು ನಾಲ್ಕು ವರ್ಷದ ಮಗುವಿನ ಹೃದಯ ರಂಧ್ರಕ್ಕೆ ಅತ್ಯಾಧುನಿಕ ಯಂತ್ರದ ಮೂಲಕ `ಡಿವೈಸ್’ ಅಳವಡಿಸಿ ಯಶಸ್ವಿ ಚಿಕಿತ್ಸೆ ನಡೆಸಿದರು.
ಕಳೆದ ಎರಡು ವರ್ಷಗಳಿಂದ ಪೆಟೆಂಟ್ ಡಕ್ಟಸ್ ಆರ್ಟೆರಿಯಸಸ್ (ಪಿ.ಡಿ.ಎ) ಕಾಯಿಲೆಯಿಂದ ಬಳಲುತ್ತಿದ್ದ ಬಾಗಲಕೋಟ ನಗರದ ನಾಲ್ಕು ವರ್ಷದ ಮಗುವಿನ ಹೃದಯದಲ್ಲಿ ರಂಧ್ರ ಕಾಣಿಸಿಕೊಂಡಿತ್ತು. ಹೃದಯದಲ್ಲಿನ ರಂಧ್ರದ ಪರಿಣಾಮ ಮಗುವಿನಲ್ಲಿ ಎದೆಬಡಿತ ಮತ್ತು ಉಸಿರಾಟದ ತೊಂದರೆಗಳು ಕಾಣಿಸಿಕೊಂಡು ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯ ಹೃದಯರೋಗ ವಿಭಾಗದಲ್ಲಿ ದಾಖಲಿಸಲಾಗಿತ್ತು.
ಈ ಸಂದರ್ಭ ಆಸ್ಪತ್ರೆಯ ಹೃದಯ ತಜ್ಞರು ಮಗುವಿನ ಹೃದಯಲ್ಲಿನ ರಂಧ್ರವನ್ನು ತೆರೆದ ಹೃದಯದ ಶಸ್ತ್ರಚಿಕಿತ್ಸೆಯಿಲ್ಲದೆ ಅತ್ಯಾಧುನಿಕ ವಿಧಾನದ ಮೂಲಕ ಮುಚ್ಚುವ ಚಿಕಿತ್ಸೆ ನೀಡಿದರು. ಈ ಅತ್ಯಾಧುನಿಕ ವಿಧಾನದಲ್ಲಿ ಡಿವೈಸನ್ನು ತಂತಿಯ ಸಹಾಯದಿಂದ ಹೃದಯದ ಹತ್ತಿರ ಕೊಂಡೊಯ್ದು ರಂಧ್ರದ ಸ್ಥಳದಲ್ಲಿ ಅಳವಡಿಸಲಾಯಿತು. ಈ ವಿಧಾನವು ಅತ್ಯಂತ ಕ್ಲಿಷ್ಟಕರÀ ವಿಧಾನವಾಗಿದೆ. ಈ ಚಿಕಿತ್ಸೆಯಿಂದ ರೋಗಿಯ ಎದೆಯ ಮೇಲೆ ಯಾವುದೇ ಗಾಯದ ಗುರುತುಗಳಿರುವುದಿಲ್ಲ. ಈ ಚಿಕಿತ್ಸೆಯನ್ನು ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯ ಆಯುಷ್ಮಾನ ಭಾರತ ಯೋಜನೆಯಡಿಯಲ್ಲಿ ನೀಡಲಾಗಿದೆ. ಚಿಕಿತ್ಸೆಯ ನಂತರ ಮಗು ಸಂಪೂರ್ಣ ಗುಣಮುಖನಾಗಿದ್ದು ಆಸ್ಪತ್ರೆಯಿಂದ ಕೇವಲ ಎರಡು ದಿನಗಳಲ್ಲಿ ಬಿಡುಗಡೆಗೊಳಿಸಲಾಗಿದೆ ಎಂದು ಡಾ.ಸಮೀರಕುಮಾರ ಕುಲಕರ್ಣಿ ತಿಳಿಸಿದ್ದಾರೆ.
ಈ ತರಹದ ಹೃದಯ ರಂಧ್ರವು ಸಾವಿರ ಮಕ್ಕಳಲ್ಲಿ ಒಬ್ಬರಲ್ಲಿ ಕಂಡುಬರುತ್ತದೆ. ಇದು ಹುಟ್ಟಿನಿಂದಲೇ (ಛಿoಟಿgeಟಿiಣಚಿಟ) ಇರುವುದು. ಮಕ್ಕಳಲ್ಲಿ ಹೃದಯದ ರಂಧ್ರಗಳು ಹಲವು ಬಗೆಗಳಾಗಿದ್ದು, ಇವುಗಳನ್ನು ಸರಿಯಾದ ಸಮಯದಲ್ಲಿ ಕಂಡು ಹಿಡಿಯುವುದು ಮತ್ತು ಚಿಕಿತ್ಸೆ ಪಡೆಯುವುದು ಅಷ್ಟೆ ಅಗತ್ಯವಾಗಿದೆ. ಮಕ್ಕಳಲ್ಲಿ ಕಂಡು ಬರುವ ಮೊಲೆಹಾಲು ಕುಡಿಯುವ ತೊಂದರೆ, ಎದೆಬಡಿತ, ಎದುಸಿರು ಮತ್ತು ಬೆಳವಣಿಗೆ ಕುಂಠಿತವಾಗುವ ಲಕ್ಷಣಗಳು ಕಂಡು ಬಂದಲ್ಲಿ ಇದು ಹೃದಯದಲ್ಲಿ ರಂಧ್ರವಿರುವ ಸಾಧ್ಯತೆಗಳಿರುತ್ತವೆ. ಇದನ್ನು ವೈದ್ಯರ ಬಳಿ ತಕ್ಷಣ ಪರೀಕ್ಷಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು.
ಇಂತಹ ವಿಶಿಷ್ಟ ಚಿಕಿತ್ಸೆ ನೀಡಿದ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯ ಹೃದಯ ತಜ್ಞ ಡಾ.ಸಮೀರಕುಮಾರ ಕುಲಕರ್ಣಿ ಅವರನ್ನು ಬಿ.ವಿ.ವಿ. ಸಂಘದ ಕಾರ್ಯಾಧ್ಯಕ್ಷರು ಹಾಗೂ ಶಾಸಕರಾದ ಡಾ.ವೀರಣ್ಣ ಚರಂತಿಮಠ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷರಾದ ಅಶೋಕ.ಎಮ್.ಸಜ್ಜನ (ಬೇವೂರ) ಮತ್ತು ಮೆಡಿಕಲ್ ಕಾಲೇಜ್ ಪ್ರಾಚಾರ್ಯರಾದ ಡಾ.ಅಶೋಕ ಮಲ್ಲಾಪೂರ ಅಭಿನಂದಿಸಿದ್ದಾರೆ.