ಮಗುವಿನ ಸರ್ವೋತೋಮುಖ ಬೆಳವಣಿಗೆಗೆ ಪೌಷ್ಟಿಕ ಆಹಾರ ಅಗತ್ಯ- ಭಾರತಿ

ರಾಯಚೂರು,ಸೆ.೨೫- ಮಗುವಿನ ಸರ್ವೋತೋಮುಖ ಬೆಳವಣಿಗೆಗೆ ಪವಷ್ಟಿಕ ಆಹಾರ ಅಗತ್ಯವಾಗಿದ್ದು, ಪೌಷ್ಟಿಕ ಆಹಾರ ಸ್ವಚ್ಚತೆ ಕುರಿತು ಗರ್ಭಿಣಿ ಮಹಿಳೆಯರಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕಿ ಭಾರತಿ ಭಾಯಿ ಹೇಳಿದರು.
ಅವರಿಂದು ನಗರದ ಹೊಸ ಆಶ್ರಯ ಕಾಲೋನಿ ಅಂಘನವಾಡಿ ಕೇಮದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಶಿಶು ಅಭಿವೃದ್ಧಿ ಯೋಜನೆಯಡಿ, ಪೋಷಣಾ ಮಾಸಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಪೌಷ್ಟಿಕ ಆಹಾರದ ಅರಿಯು, ಅದರ ಪ್ರಾಮುಖ್ಯತೆ, ಪ್ರದರ್ಶನ ಸೇರಿದಂತೆ ಇನ್ನಿತರ ವಿವಿಧ ಕಾರ್ಯಕ್ರಮಗಳನ್ನು ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದು, ಮಗುವಿನ ಸರ್ವೋತೋಮುಖ ಬೆಳವಣಿಗೆಗೆ ಮೊದಲ ಸಾವಿರ ದಿನಗಳು ಬಹಳ ಪ್ರಮುಖವಾಗಿದ್ದು, ಗರ್ಭಿಣಿಯಾದಾಗಿನಿಂದ ಮಗು ೨ ವರ್ಷ ಆಗುವ ವರೆಗೆ ಮಗುವಿನ ಹಾಗೂ ತಾಯಿಯ ಆರೋಗ್ಯ ಹಾಗೂ ಆರೈಕೆ ಅಗತ್ಯವಾಗಿದೆ. ಗರ್ಭಿಣಿ ಮಹಿಳೆಯರು ಆರೋಗ್ಯ =ದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಕಬ್ಬಿಣಾಂಶ ಇರುವ ಮಾತ್ರೆಗಳನ್ನು ಸೇವಿಸಬೇಕು. ಹಾಲಿನ ಪದಾರ್ಥ, ತರಕಾರಿ, ಸೊಪ್ಪು, ಹಾಗೂ ದ್ವದಳ ದಾನ್ಯಗಳನ್ನು ಹೆಚ್ಚಾಗಿ ಸೇವಿಸಬೇಕು ಎಂದರು.
ನಗರಸಭೆ ಸದಸ್ಯ ತಿಮ್ಮಾರೆಡ್ಡಿ ಮಾತನಾಡಿ, ಇಲಾಖೆಯ ಅಧಿಕಾರಿಗಳು ತಿಳಿಸಿದಂತೆ ಅವರ ಮಾರ್ಗದರ್ಶನದಂತೆ ಪೌಷ್ಟಿಕ ಆಹಾರ, ಸೇವನೆ ಮಾಡಿ, ಮಕ್ಕಳ ಹಾಗೂ ಗರ್ಭಿಣಿಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಹೇಳಿದರು.
ಈ ಸಮದರ್ಭದಲ್ಲಿ ಮೇಲ್ವಿಚಾರಿಕಿ ಗಂಗಮ್ಮ, ಶಂಶಾದ್ ಬೇಗಂ, ಖದೀರ್ ಖಾನ್, ವಿರುಪಾಕ್ಷಮ್ಮ, ಶಾಂತ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.