ಮಗುವಿನ ಶೈಕ್ಷಣಿಕ ಜೀವನಕ್ಕೆ ಇಸಿಸಿಇ ಭದ್ರ ಬುನಾದಿ

ಚಿತ್ತಾಪೂರ:ಫೆ.1: ಶಿಕ್ಷಣ ನೀತಿಯಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ‘ಪೂರ್ವ ಬಾಲ್ಯಾವಸ್ಥೆಯ ಆರೈಕೆ ಮತ್ತು ಶಿಕ್ಷಣ’ದ (Early Childhood Care and Education-23) ಅಡಿಯಲ್ಲಿ ತಂದು ಔಪಚಾರಿಕ ಶಿಕ್ಷಣದ ಭಾಗವಾಗಿ ಅಳವಡಿಸಲಾಗಿದೆ. ಇದರಿಂದ ಕೋಟ್ಯಂತರ ಮಗುವಿನ ಶೈಕ್ಷಣಿಕ ಜೀವನಕ್ಕೆ ಭದ್ರ ಬುನಾದಿ ಸಿಗಲಿದೆ ಎನ್ನಬಹುದು. ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ತರಲು ಕಾರ್ಯಗಳು ನಡೆಯುತ್ತಿವೆ. ಅದರಲ್ಲೂ ಇಸಿಸಿಇ ವಿಭಾಗದಲ್ಲಿ ಬಿರುಸಿನ ಕಾರ್ಯಗಳು ನಡೆಯುತ್ತಿವೆ ಎಂದು ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸಂಯೋಜಕ ರವಿಚಂದ್ರ ಹೇಳಿದರು.

ತಾಲೂಕಿನ ಜೀವಣಗಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಆರಂಭಿಕ ಬಾಲ್ಯದ ಹಾರೈಕೆ ಮತ್ತು ಶಿಕ್ಷಣದ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ರಾಷ್ಟ್ರೀಯ ಶಿಕ್ಷಣ ನೀತಿ-2020 ಈ ಶತಮಾನದ ಮೊದಲನೆಯ ಶಿಕ್ಷಣ ನೀತಿಯಾಗಿದೆ. ಈ ನೀತಿಯನ್ನು ದೇಶದಲ್ಲಿ ಜಾರಿಗೆ ತಂದು ಒಂದು ವರ್ಷ ಕಳೆದಿದೆ. 21ನೇ ಶತಮಾನದ ಕೌಶಲಗಳನ್ನು ಮಕ್ಕಳಲ್ಲಿ ಬೆಳೆಸುವುದರೊಂದಿಗೆ ಭಾರತದ ಸಾಂಸ್ಕøತಿಕ ನೆಲೆಯಲ್ಲಿ ಶಿಕ್ಷಣವನ್ನು ರೂಪಿಸುವುದು ಈ ನೀತಿಯ ಧೈಯವಾಗಿದೆ ಎಂದರು.

ದಂಡೋತಿ ಅಂಗನವಾಡಿಯ ವಿಧ್ಯಾನಿಧಿ ಮಾತನಾಡಿ ಮಗುವಿಗೆ 6 ವರ್ಷ ತುಂಬುವುದರೊಳಗೆ ಮಿದುಳಿನ ಬೆಳವಣಿಗೆಯ ಶೇಕಡಾ 85 ಪೂರ್ಣಗೊಳ್ಳುವುದರಿಂದ ಈ ಅವಧಿಯಲ್ಲಿ ಶಿಶುವಿಗೆ ಆರೈಕೆಯ ಅವಶ್ಯಕತೆ ಬಹಳ ಇರುತ್ತದೆ. ಈ ಆರೈಕೆಯು ಮಗುವಿಗೆ ಜೀವನಪಯರ್ಂತ ಶಿಕ್ಷಣದಲ್ಲಿ ಕಲಿಕೆಯಲ್ಲಿ ತೊಡಗಿಕೊಳ್ಳಲು ಇಸಿಸಿಇ ಭದ್ರ ಅಡಿಪಾಯವನ್ನೊದಗಿಸುತ್ತದೆ. ಮಗುವಿನ ಸರ್ವತೋಮುಖ ಬೆಳವಣಿಗೆಗೆ ಕೇಂದ್ರದಲ್ಲಿ ಐದು ಹಂತದ ಚಟುವಟಿಕೆಗಳನ್ನು ಮಾಡಿಸಲಾಗುತ್ತದೆ, ಇದರಿಂದ ಮಗು ದೈಹಿಕವಾಗಿ,ಮಾನಸಿಕವಾಗಿ,ಸಾಮಾಜಿಕವಾಗಿ, ಶಾರೀರಿಕವಾಗಿ, ಭೌತಿಕವಾಗಿ ಬೆಳವಣಿಗೆ ಸಹಕಾರಿ ಆಗುತ್ತದೆ. ಮಗು ಕೇಂದ್ರದಲ್ಲಿ ಗಟ್ಟಿಯಾಗಿ ಮಾತನಾಡುವುದು ಹಾಗೂ ಮನೆಯಲ್ಲಿ ತಂದೆ ತಾಯಿ ಜೊತೆ ಮಾತನಾಡುವುದು ಕಲಿಯುತ್ತದೆ. ಪಾಲಕರು ತಮ್ಮ ಮಕ್ಕಳನ್ನು ತಪ್ಪದೇ ಅಂಗನವಾಡಿ ಕೇಂದ್ರಕ್ಕೆ ಕಳುಹಿಸಬೇಕು ಎಂದು ಸಲಹೆ ನೀಡಿದರು.

ಕೇಂದ್ರದಲ್ಲಿ ಅಂಗನವಾಡಿ ಮಕ್ಕಳಿಗೆ ಚಟುವಟಿಕೆಗಳನ್ನು ಮಾಡಿಸಲಾಯಿತು, ಹಾಗೂ ಜೊತೆಗೆ ಮಕ್ಕಳ ತಾಯಂದಿರಿಗೂ ಕೂಡ ಚಟುವಟಿಕೆ ಮಾಡಿಸಿ ಅಂಗನವಾಡಿಯಲ್ಲಿ ನಡೆಯುವಂತ ಕಲಿಕೆಯನ್ನು ಪಾಲಕರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಶ್ರೀಮತಿ ಮಲ್ಕಮ್ಮ, ಜೀವಣಗಿ ಶಾಲಾ ಮುಖ್ಯೋಪಾಧ್ಯಾಯ ಈಶ್ವರ, ಕದ್ದರ್ಗಿ ಶಾಲೆಯ ಅತಿಥಿ ಶಿಕ್ಷಕ ಜಗದೇವ ಕುಂಬಾರ, ದಂಡೋತಿ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಸುಮಲತಾ, ಮುತ್ತಗಾ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಮಲ್ಲಮ್ಮ, ಶ್ರೀಮತಿ ಅನ್ನಪೂರ್ಣ, ಪ್ರಭಾವತಿ, ಸುನಿತಾ, ಯೇಗಾ, ಸೇರಿದಂತೆ ತಾಯಂದಿರು ಮಕ್ಕಳು ಇದ್ದರು. ಜೀವಣಗಿ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ದೇವಿಂದ್ರಮ್ಮ ಪಾಟೀಲ್ ಸ್ವಾಗತಿಸಿ ವಂದಿಸಿದರು.