
ಮುಂಬೈ, ಮೇ. ೧೯-ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಸ್ನೇಹಾ ಆಚಾರ್ಯ ಅವರು ಮೊದಲ ಮುಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೀಗ ತಮ್ಮ ಬೇಬಿ ಬಂಪ್ ಫೋಟೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನೂತನವಾಗಿ ಫೋಟೋಶೂಟ್ ಮಾಡಿಸಿದ್ದು, ಈ ಜೋಡಿ ಯೋಗ ಮಾಡುವ ರೀತಿ ಪೋಸ್ ಕೊಟ್ಟಿದ್ದಾರೆ. ಕಪ್ಪು ಬಣ್ಣದ ಬಾಡಿ ಫಿಟ್ ಸೂಟ್ ಧರಿಸಿದ್ದಾರೆ. ಈ ಫೋಟೋಗಳನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.
ಸ್ನೇಹಾ ಆಚಾರ್ಯ ಫೋಟೋಗಳಿಗೆ, ’ಕೇವಲ ಗರ್ಭಧಾರಣೆಯ ತೋರಣ. ನನ್ನ ೩೮ ನೇ ವಾರದಲ್ಲಿ ನಾನು ಸೂಪರ್ ಹೀರೋಗಿಂತ ಕಡಿಮೆಯಿಲ್ಲ ಎಂದು ತಿಳಿಯುತ್ತೇನೆ’ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.
ಸ್ನೇಹಾ ಆಚಾರ್ಯ ಫೋಟೋ ನೋಡಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಹ ನಟಿಯರು, ಸ್ನೇಹಿತರು ಅಭಿನಂದನೆ ತಿಳಿಸಿದ್ದಾರೆ, ಶೀಘ್ರದಲ್ಲಿಯೇ ಸ್ನೇಹಾ ಆಚಾರ್ಯ , ತಾಯಿ ಆಗಲಿದ್ದು, ತಾಯಿ, ಮಗು ಆರೋಗ್ಯವಾಗಿರಿ ಎಂದು ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.
ನಟಿ ಸ್ನೇಹಾ ಆಚಾರ್ಯ ಅವರು ಸತ್ಯಂ ಶಿವಂ ಸುಂದರಂ, ಸಾಗರ ಸಂಗಮ ಧಾರಾವಾಹಿಯಲ್ಲಿ ನಟಿಸಿದ್ದರು. ಜೋಶ್, ಆಕೆ, ಸಂತು ಸ್ಟ್ರೇಟ್ ಫಾರ್ವಡ್, ಕೃಷ್ಣಲೀಲಾ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು.
ರಷ್ಯಾದ ಹುಡುಗ ರಾಯನ್ ಎಂಬುವವರನ್ನು ಸ್ನೇಹಾ ಆಚಾರ್ಯ ಪ್ರೀತಿಸಿ ೨೦೧೮ರಲ್ಲಿ ಮದುವೆ ಆಗಿದ್ದರು. ಹಿಂದು ಸಂಪ್ರದಾಯದಂತೆ ಇವರ ವಿವಾಹ ಜರುಗಿತ್ತು.
ಮದುವೆ ನಂತರ ಸ್ನೇಹಾ ಆಚಾರ್ಯ ಅವರು ಪತಿ
ರಾಯನ್ ಜತೆ ವಿದೇಶದಲ್ಲೇ ನೆಲೆಸಿದ್ದಾರೆ. ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ.
ಡ್ಯಾನ್ಸ್ ತುಂಬಾ ಇಷ್ಟ ಪಡುವ ಸ್ನೇಹಾ ಆಚಾರ್ಯ ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ತಮ್ಮದೇ ಆದ ಡ್ಯಾನ್ಸ್ ಕಂಪನಿ ಶುರು ಮಾಡುವ ಅಭಿಲಾಷೆ ಹೊಂದಿದ್ದಾರೆ.