ಮಗುವಿನ ಆರೈಕೆ ತಾಯಿ ಗರ್ಭದಿಂದಲೇ ಪ್ರಾರಂಭವಾಗಲಿ


ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಮಾ.೧೫;ಗರ್ಭಿಣಿ ಎಂದಾಕ್ಷಣ ಆದಷ್ಟು ಬೇಗನೆ ಆಶಾ ಕಾರ್ಯಕರ್ತರು ಇಲ್ಲವೇ ಅಂಗನವಾಡಿ  ಕೇಂದ್ರಗಳಲ್ಲಿ ಹೆಸರು ನೋಂದಾಯಿಸಿ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳಿಂದ ತಾಯಿ ಕಾರ್ಡ್ ಪಡೆದು ವೈದ್ಯರಲ್ಲಿ ಪರೀಕ್ಷೆಗೊಳಪಡಬೇಕು.  ತಾಯಿ ಗರ್ಭದಿಂದಲೇ ಮಗುವಿನ ಆರೈಕೆ ಪ್ರಾರಂಭವಾಗಬೇಕು ಎಂದು ಸಿರಿಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಮಕ್ಕಳ ತಜ್ಞ ಡಾ.ಜಿ.ಆರ್.ತಿಮ್ಮೇಗೌಡ ಹೇಳಿದರು.ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗುರುವಾರ ಗರ್ಭಿಣಿಯರು ಮತ್ತು ಎದೆಹಾಲು ಉಣಿಸುವ ತಾಯಂದಿರುಗಳಿಗೆ ನವಜಾತ ಶಿಶುವಿನ ಆರೈಕೆ ಕುರಿತು ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ತಾಯಿ ಮರಣ ಶಿಶುಮರಣ ಪ್ರಮಾಣ ಕಡಿಮೆಯಾಗಬೇಕಾದರೆ ಗರ್ಭಿಣಿ ತಾಯಂದಿರು ಕನಿಷ್ಠ ಮೂರು ನಾಲ್ಕು ಬಾರಿ ವೈದ್ಯರಲ್ಲಿ ತಪಾಸಣೆ ಮಾಡಿಸಬೇಕು. ವೈದ್ಯರ ಸಲಹೆ ಸೂಚನೆ ಪಾಲಿಸಿ ಪೌಷ್ಟಿಕ ಆಹಾರ ಸೇವನೆಯೊಂದಿಗೆ ಕಬ್ಬಿನಾಂಶ ಮತ್ತು ಕ್ಯಾಲ್ಸಿಯಂ ಮಾತ್ರೆಗಳನ್ನು ಸಕಾಲಕ್ಕೆ ಸೇವನೆ ಮಾಡಬೇಕು ಎಂದರು.