ಮಗುವಿನ ಅಂತರಂಗದ ಶಕ್ತಿಯನ್ನು ಹೊರಹೊಮ್ಮಿಸುವುದೇ ಶಿಕ್ಷಣ: ಶ್ರೀ ಚಂದ್ರಗುಂಡ ಶಿವಾಚಾರ್ಯರು

ಪರಹತಾಬಾದ :ಮೇ.23: ತಾಲೂಕಿನ ಹೊನ್ನಕಿರಣಗಿ ಗ್ರಾಮದ ಶ್ರೀ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ 45 ದಿನಗಳ ಪಯರ್ಂತರ ನಡೆದು ಬಂದ 16 ನೇ ಧಾರ್ಮಿಕ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭದ ಅಂಗವಾಗಿ ಶಿವಪಾರ್ವತಿ ಕಲ್ಯಾಣ ಮಹೋತ್ಸವ ಮಾತಾಪಿತರ ಪಾದಪೂಜೆ ಹಮ್ಮಿಕೊಳ್ಳಲಾಯಿತು.
ದಿವ್ಯ ಸಾನಿಧ್ಯ ವಹಿಸಿದ್ದ ರಾಚೋಟೇಶ್ವರ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ ಷ.ಬ್ರ. ಚಂದ್ರಗುಂಡ ಶಿವಾಚಾರ್ಯರು ಮಕ್ಕಳ ಅಂತರಾತ್ಮದಲ್ಲಿ ಹುದುಗಿರುವ ಶಕ್ತಿಯನ್ನು ಹೊರಹೊಮ್ಮಿಸುವುದೇ ನಿಜವಾದ ಶಿಕ್ಷಣ ಎಂದು ಹೇಳಿದರು.
ನೂತನ ಪಟಾಧಿಕಾರಿಗಳಾಗಿ ವಹಿಸಿಕೊಂಡ ರಾವೂರದ ಶ್ರೀ ಮ. ನಿ. ಪ್ರ. ಸಿದ್ದಲಿಂಗ ಮಹಾಸ್ವಾಮಿಗಳು. ಶ್ರೀ ಷ.ಬ್ರ. ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು ಮಳಖೇಡ. ಹಾಗೂ ಶ್ರೀ ಮ.ನಿ.ಪ್ರ. ಚರಲಿಂಗ ಮಹಾಸ್ವಾಮಿಗಳು ಗದ್ದುಗೆ ಮಠ ಕಲಬುರಗಿ ಅವರಿಗೆ ಯುವರತ್ನ ಧರ್ಮಸಿರಿ ಪ್ರಶಸ್ತಿ-2023 ಪ್ರಶಸ್ತಿ ನೀಡಿ ಪ್ರಧಾನ ಮಾಡಲಾಯಿತು.
ಪೆÇ್ರ. ಐ.ಬಿ. ಹಿರೇಮಠ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ವೇದಿಕೆ ಮೇಲೆ ಮುಖ್ಯ ಅತಿಥಿಗಳಾಗಿ ಕಲಬುರಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಗುರುಬಸಪ್ಪ ಸಜ್ಜನಶೆಟ್ಟಿ ವೇದಿಕೆ ಉರ್ದೇಶಿಸಿ ಮಾತನಾಡಿದರು.ಈರಯ್ಯ ಸ್ವಾಮಿ ಬಳವಾಡ. ಶರಣಯ್ಯ ಸ್ವಾಮಿ ಮಠ. ರಾಜು ಮಠ. ಹಣಮಂತರಾಯ ಸಜ್ಜನ ಕೇಶವಾರ. ಇನ್ನು ಇತರರು ಇದ್ದರು. ಇಲ್ಲಿವರೆಗೆ 2000ಕ್ಕೂ ಹೆಚ್ಚು ಜಂಗವಟುಗಳು ಈ ಪಾಠ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ ಕರ್ನಾಟಕದ ವಿವಿಧ ದೇವಸ್ಥಾನದಲ್ಲಿ ಶಾಸ್ತ್ರಿಯಾಗಿ ಕೆಲಸ ಮಾಡುತ್ತಿದ್ದಾರೆ. ಇದು ಹೊನ್ನಕಿರಣಗಿಗೆ ಹೆಮ್ಮೆಯ ವಿಷಯವಾಗಿದೆ.
ಪ್ರಸ್ತಾವಿಕವಾಗಿ ಬಸವರಾಜ್ ಚಟ್ಟಿ ಅವರು ಮಾತನಾಡಿದರು. ವೇದ ಮೂರ್ತಿ ಅಮ್ಮಯ್ಯ ಶಾಸ್ತಿ ಅವರು ಸ್ವಾಗತಿಸಿದರು. ವೇದ ಮೂರ್ತಿ ರೇವಣಸಿದ್ದಯ್ಯ ಕೊಡ್ಲಿಯವರು ಪ್ರಾರ್ಥನ ಗೀತೆ ಹಾಡಿದರು. ವೇದ ಮೂರ್ತಿ ವೀರೇಶ್ ಶಾಸ್ತ್ರಿ ಸಗರ ವಂದಿಸಿದರು. ವೇದ ಮೂರ್ತಿ ವೀರೇಶ್ ಶಾಸ್ತ್ರಿ ಮಲಕೂಡ ನಿರೂಪಿಸಿದರು.